ಜನಿಸುವಾಗಲೇ "ಡೌನ್ ಸಿಂಡ್ರಮ್ " ಎಂಬ ರೋಗದ ಜೊತೆ ಹೃದಯ ಸಂಭದ ಕಾಯಿಲೆಯಿಂದ ಬಳಲುತ್ತಿದ್ದ ಮೂಲತಃ ಬದಿಯಡ್ಕ ನಿವಾಸಿ, ಬೆಂಗಳೂರಿನ ಗಿರಿನಗರದಲ್ಲಿ ವಾಸಿಸುವ ಶರತ್ ಆಚಾರ್ಯ (26) ನಿಧನ.
ಸೆಪ್ಟೆಂಬರ್ 15, 2023
0
ಜನಿಸುವಾಗಲೇ "ಡೌನ್ ಸಿಂಡ್ರಮ್ " ಎಂಬ ರೋಗದ ಜೊತೆ ಹೃದಯ ಸಂಭದ ಕಾಯಿಲೆಯಿಂದ ಬಳಲುತ್ತಿದ್ದ ಮೂಲತಃ ಬದಿಯಡ್ಕ ನಿವಾಸಿ, ಬೆಂಗಳೂರಿನ ಗಿರಿನಗರದಲ್ಲಿ ವಾಸಿಸುವ ಶರತ್ ಆಚಾರ್ಯ (26) ನಿಧನ.
ಮಂಜೇಶ್ವರ: ಜನಿಸುವಾಗಲೇ "ಡೌನ್ ಸಿಂಡ್ರಮ್ " ಎಂಬ ರೋಗ ಬಾಧಿಸಿ, ನಡುವೆ ಹೃದಯ ಸಂಭದ ಕಾಯಿಲೆಯಿಂದ ಬಳಲುತ್ತಿದ್ದ ಯುವಕನೋರ್ವ ಇಂದು ಮಧ್ಯಾಹ್ನ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂಲತಃ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೇಟೆ ಬಳಿ ನಿವಾಸಿಯೂ, ಪ್ರಸ್ತುತ ಕಳೆದ 20 ವರ್ಷದಿಂದ ಬೆಂಗಳೂರಿನ ಗಿರಿನಗರದಲ್ಲಿ ವಾಸಿಸುತ್ತಿರುವ, ಸರ್ಜಿಕಲ್ ಉದ್ಯೋಗಸ್ಥ ವಿಶ್ವನಾಥ ಆಚಾರ್ಯ - ಪ್ರೇಮಲತಾ ದಂಪತಿಯ ಪುತ್ರ ಶರತ್ (26) ಇಂದು ಮಧ್ಯಾಹ್ನ 2.30 ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾನೆ. ಹುಟ್ಟುವಾಗಲೇ "ಡೌನ್ ಸಿಂಡ್ರಮ್" ಎಂಬ ರೋಗ ತಗುಲಿದ ಶರತ್ ಗೆ ಬಳಿಕ ಹೃದಯ ಸಂಭದ ಕಾಯಿಲೆಯಿಂದಾಗಿ ಚಿಕಿತ್ಸೆಯನ್ನು ಕೊಡಿಸಲಾಗುತಿತ್ತು. ಕೇವಲ 6 ನೇ ತರಗತಿ ತನಕ ವಿಧ್ಯಾಭ್ಯಾಸ ಪೂರೈಸಿದ ಶರತ್, ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಇಂದು ಮಧ್ಯಾಹ್ನ 2 ಗಂಟೆ ಸಮಯಕ್ಕೆ ಗಂಜಿ ಕುಡಿದ ಶರತ್ ಬಳಿಕ ವಾಕರಿಕೆ ಉಂಟಾಗಿ, ಅಸ್ವಸ್ತನಾಗಿ, ಮೃತಪಟ್ಟ ಘಟನೆ ನಡೆದಿದೆ. ಇದೀಗ ಮೃತದೇಹವನ್ನು ಬೆಂಗಳೂರಿನಿಂದ ಬದಿಯಡ್ಕದ ಮನೆಗೆ ತರುಲಾಗುತಿದ್ದು, ನಾಳೆ ಮುಂಜಾನೆ ತಲುಪಲಿದೆ. ಬಳಿಕ ಅಂತ್ಯ ಕ್ರಿಯೆಯ ವಿಧಿ - ವಿಧಾನಗಳು ಮನೆಯಲ್ಲಿ ನಡೆದು, ಬದಿಯಡ್ಕದ ಚೆನ್ನರಕಟ್ಟೆಯಲ್ಲಿರುವ ರುದ್ರ ಭೂಮಿಯಲ್ಲಿ ಸಂಸ್ಕರಿಸಲಾಗುವುದು ಎಂದು ಮನೆ ಮಂದಿ ತಿಳಿಸಿದ್ದಾರೆ. ಮೃತಪಟ್ಟ ಶರತ್, ತಂದೆ, ತಾಯಿ, ಸಹೋದರರಾದ: ಶ್ರವಣ್, ಕೌಶಲ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾನೆ.
