Breaking Posts

6/trending/recent
Type Here to Get Search Results !

8:10:45

ಮೂಲ್ಕಿಯಲ್ಲಿ ನಡೆದ ಭೀಕರ ಬೈಕ್ - ಕಾರು ಅಪಘಾತದಲ್ಲಿ ಬೈಕ್ ಸಹ ಸವಾರಿ ವರ್ಕಾಡಿ ಬಳಿಯ ಬಾಕ್ರಬೈಲು ನಿವಾಸಿ ಪ್ರೀತಿಕಾ ಶೆಟ್ಟಿ (21) ಮೃತ್ಯು.

ಮೂಲ್ಕಿಯಲ್ಲಿ ನಡೆದ ಭೀಕರ ಬೈಕ್ - ಕಾರು ಅಪಘಾತದಲ್ಲಿ ಬೈಕ್ ಸಹ ಸವಾರಿ ವರ್ಕಾಡಿ ಬಳಿಯ ಬಾಕ್ರಬೈಲು ನಿವಾಸಿ ಪ್ರೀತಿಕಾ ಶೆಟ್ಟಿ (21) ಮೃತ್ಯು.
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು ಹೊರ ವಲಯದ ಮೂಲ್ಕಿ "ವಿಜಯ ಸನ್ನಿಧಿ" ಜಂಕ್ಷನ್ ಬಳಿ ಬೈಕ್‌ಗೆ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸಹ ಸವಾರೆ ಕೊನೆಯುಸಿರೆಳೆದು, ಬೈಕ್ ಸವಾರ ಗಾಯಗೊಂಡ ಘಟನೆ ನಿನ್ನೆ ಸಂಜೆ ಸಂಭವಿಸಿದೆ. ಮೃತಪಟ್ಟವಳನ್ನು ವರ್ಕಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಗೊಳಪಟ್ಟ ಬಾಕ್ರಬೈಲು ಕೊರುಂಗ್ ಮನೆ ನಿವಾಸಿ ಪ್ರಗತಿಪರ ಕೃಷಿಕರೂ, ಪಾತೂರಿನಲ್ಲಿ ಅಕ್ಕಿಯ ಮಿಲ್ ಮಾಲಕರಾಗಿರುವ, ಜಯರಾಮ ಶೆಟ್ಟಿ - ಸುಭಿತಾ ದಂಪತಿ ಪುತ್ರಿ ಪ್ರೀತಿಕಾ ಶೆಟ್ಟಿ (21) ಎಂದು ಗುರುತಿಸಲಾಗಿದೆ. ಪ್ರೀತಿಕಾ ಶೆಟ್ಟಿ ಒಡಿಯೂರು ಶ್ರೀ ವಿವಿದ್ದೋದ್ದೇಶ ಸಹಕಾರಿ ಬ್ಯಾಂಕ್ ಸುರತ್ಕಲ್ ಬ್ರಾಂಚ್ ನಲ್ಲಿ ಉದ್ಯೋಗಿಯಾಗಿದ್ದು, ನಿನ್ನೆ ಬ್ಯಾಂಕ್ ಗೆ ರಜೆ ಆಕಿ ಉಡುಪಿ ದೇವಸ್ಥಾನಕ್ಕೆ ತೆರಳಿದ್ದು, ಸಂಜೆ ಮರಳಿ ಬರುವ ವೇಳೆ ಮೂಲ್ಕಿಯಲ್ಲಿ ಇವರು ಸಂಚರಿಸುವ ಬೈಕ್ ಗೆ ಕಾರು ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಗಾಯಾಳು ಬೈಕ್ ಸವಾರ ಬಂಟ್ವಾಳ ತಾಲೂಕು ಅರಂತೋಡಿ ಬಾಳೆಪುಣಿ ನಿವಾಸಿ ಮನ್ವಿತ್ ಶೆಟ್ಟಿ (21) ಎಂದು ಗುರುತಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬೈಕ್‌ಗೆ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ "ವಿಜಯ ಸನ್ನಿಧಿ" ಜಂಕ್ಷನ್ ಬಳಿ ಕಿನ್ನಿಗೋಳಿ ಕಡೆಯಿಂದ ಮೂಲ್ಕಿ ಕಡೆಗೆ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಹೋಂಡಾ ಕಾರು ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಬೈಕನ್ನು ದೂಡಿಕೊಂಡು ಹೋಗಿದ್ದು, ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ಸಹ ಸವಾರೆ ಪ್ರೀತಿಕಾ ಶೆಟ್ಟಿಯ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸಾಗಿಸುವಾಗಲೇ ಕೊನೆಯುಸಿರೆಳೆದಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದಿಂದ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಪಘಾತಕ್ಕೀಡಾದ ಎರಡು ವಾಹನಗಳನ್ನು ತೆರವುಗೊಳಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರಿ ಪೊಲೀಸರು ಎಸಿಪಿ ಗೀತಾ ಕುಲಕರ್ಣಿ, ಇನ್‌ಸ್ಪೆಕ್ಟರ್ ಶರೀಫ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದೀಗ ಮೃತದೇಹ ಎ.ಜೆ ಆಸ್ಪತ್ರೆಯಲ್ಲಿದ್ದು, ಶವ ಮಹಜರು ನಡೆದ ಬಳಿಕ ಮನೆಗೆ ತಂದು ಅಪರಾಹ್ನ 12 ಗಂಟೆಗೆ ಮನೆ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ. ಮೃತ ಪ್ರೀತಿಕಾ ಶೆಟ್ಟಿ ತಂದೆ, ತಾಯಿ, ಏಕ ಸಹೋದರ: ಪ್ರಸಾದ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾಳೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.