Breaking Posts

6/trending/recent
Type Here to Get Search Results !

8:10:45

ಕಲಾವಿದ, ನಿರ್ದೇಶಕ, ಅಧ್ಯಾಪಕರಾದ ಮೂಲತಃ ಉಪ್ಪಳ ಐಲ ನಿವಾಸಿ, ಮಂಗಳೂರು ಬಿಕರ್ಣಕಟ್ಟೆಯಲ್ಲಿ ವಾಸಿಸುವ ನವೀನ್ ಚಂದ್ರ ಐಲ್ (54) ಹೃದಯಾಘಾತದಿಂದ ನಿಧನ.

ಕಲಾವಿದ, ನಿರ್ದೇಶಕ, ಅಧ್ಯಾಪಕರಾದ ಮೂಲತಃ ಉಪ್ಪಳ ಐಲ ನಿವಾಸಿ, ಮಂಗಳೂರು ಬಿಕರ್ಣಕಟ್ಟೆಯಲ್ಲಿ ವಾಸಿಸುವ ನವೀನ್ ಚಂದ್ರ ಐಲ್ (54) ಹೃದಯಾಘಾತದಿಂದ ನಿಧನ.
ಉಪ್ಪಳ: ಕಲಾವಿದ, ನಿರ್ದೇಶಕ, ಪ್ರಸ್ತುತ ಅಧ್ಯಾಪಕರಾಗಿರುವ ಮೂಲತಃ ಉಪ್ಪಳ ಐಲ ನಿವಾಸಿಯೂ ಇದೀಗ ಮಂಗಳೂರು ಬಿಕರ್ಣಕಟ್ಟೆಯಲ್ಲಿ ವಾಸಿಸುವ ನವೀನ್ ಚಂದ್ರ ಐಲ್ (54) ಹೃದಯಾಘಾತಗೊಂಡು ನಿನ್ನೆ ರಾತ್ರಿ ಸ್ವ - ಗೃಹದಲ್ಲಿ ನಿಧನರಾದರು. ಉಪ್ಪಳ, ಐಲ ಬೋವಿ ಶಾಲಾ ಬಳಿಯ ಶ್ರೀ ಗುತ್ಯಮ್ಮ ಭಗವತೀ ಕ್ಷೇತ್ರ ಸಮೀಪ ನಿವಾಸಿಯಾಗಿರುವ ದಿ.ಕಣ್ಣ ಪೂಜಾರಿ - ದಿ. ಲಕ್ಷ್ಮಿ ದಂಪತಿ ಪುತ್ರರಾಗಿರುವ ನವೀನ್ ಚಂದ್ರ ಐಲ್ ರವರು ಮಂಗಳೂರಿನ ಬಿಕರ್ಣಕಟ್ಟೆಯಲ್ಲಿ ಕಳೆದ 9 ವರ್ಷಗಳಿಂದ ವಾಸಿಸುತ್ತಿದ್ದಾರೆ. ಎಡಪದವು ಸ್ವಾಮಿ ವಿವೇಕಾನಂದ ಪಿ.ಯು ಕಾಲೇಜಿನಲ್ಲಿ ಹಿಂದಿ ಅಧ್ಯಾಪಕರಾಗಿ ಕಳೆದ 28 ವರ್ಷಗಳಿಂದ ಸೇವೆಯನ್ನ ಸಲ್ಲಿಸುತ್ತಿರುವ ಇವರು ಈ ಮೊದಲು ಐಲದಲ್ಲಿ ವಾಸಿಸುತ್ತಿರುವಾಗ ಉಪ್ಪಳ ರಚನಾ ಸಾಂಸ್ಕೃತಿಕ ಕಲಾ ಸಂಸ್ಥೆಯಲ್ಲಿ ಹಿರಿಯ ಸದಸ್ಯರಾಗಿ, ಸಂಸ್ಥೆಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅಲ್ಲದೇ ಇವರು ನಿರ್ದೇಶಿಸಿ, ವಿಲನ್ ಪಾತ್ರದಲ್ಲಿ ಅಭಿಯಿಸಿದ "ಕಡಿರ ಮಗೆ" ಮತ್ತು "ಭೂತದ ಇಲ್ಲ್ " ನಾಟಕವು ಅಂದಿನ ಕಾಲದಲ್ಲಿ ಭಾರೀ ಹಿಟ್ ಪಡೆದಿತ್ತು. ಬಳಿಕ ಹಲವು ನಾಟಕಗಳಲ್ಲಿ ವಿಲನ್ ಪಾತ್ರದಲ್ಲಿಯೇ ಪಾತ್ರ ವಹಿಸುತ್ತಿರುವ ನವೀನ್ ಚಂದ್ರರು ಜನ ಮೆಚ್ಚುಗೆ ಪಡೆದಿದ್ದರು. ಐಲ ಶ್ರೀ ಭಗವತಿ ಆರ್ಟ್ಸ್ ಕ್ಲಬ್ಬಿನ ಸದಸ್ಯರಾಗಿರುವ ನವೀನ್ ಚಂದ್ರರವರು ಪತ್ನಿ: ವಿನಯ (ಕೇರಳ ಸಮಾಜ ಶಾಲಾ ಅಧ್ಯಾಪಕಿ), ಮಕ್ಕಳಾದ ತನಿಷ್, ಮನಿತ್ ಹಾಗೂ ಮೂವರು ಸಹೋದರರು ಹಾಗೂ ಒರ್ವೆ ಸಹೋದರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಇಂದು ಸಂಜೆ 4:00ಗೆ ಮಂಗಳೂರಿನಲ್ಲಿ ನಡೆಯಲಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ ಮೃತರ ನಿಧನಕ್ಕೆ ರಚನಾ ಸಾಂಸ್ಕೃತಿಕ ಸಂಸ್ಥೆ (ರಿ.) ಉಪ್ಪಳ, ಶ್ರೀ ಭಗವತಿ ಆರ್ಟ್ಸ್ ಕ್ಲಬ್ (ರಿ.) ಐಲ ಗಾಢವಾದ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.