ಕನ್ನಡ ಸಂಘ ಕೊಚ್ಚಿ ನೂತನ ಪದಾಧಿಕಾರಿಗಳ ಪದಗ್ರಹಣ. ಅಧ್ಯಕ್ಷರಾಗಿ ಡಿ. ಶ್ರೀನಿವಾಸ ರಾವ್ ಆಯ್ಕೆ.
ಸೆಪ್ಟೆಂಬರ್ 03, 2023
0
ಕನ್ನಡ ಸಂಘ ಕೊಚ್ಚಿ ನೂತನ ಪದಾಧಿಕಾರಿಗಳ ಪದಗ್ರಹಣ. ಅಧ್ಯಕ್ಷರಾಗಿ ಡಿ. ಶ್ರೀನಿವಾಸ ರಾವ್ ಆಯ್ಕೆ.
ಕಾಸರಗೋಡು: ಕೇರಳದ ಹಿರಿಯ ಕನ್ನಡಪರ ಸಂಸ್ಥೆಯಾದ ಕೊಚ್ಚಿನ್ ಕನ್ನಡ ಸಂಘ ಇದರ ವಾರ್ಷಿಕ ಮಹಾ ಸಭೆಯು ಡಿ. ಶ್ರೀನಿವಾಸ ರಾವ್ ಇವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ಇಂದು ನಡೆಯಿತು. ಶ್ರೀಕಾಂತ್ ಆನವಟ್ಟಿಯವರು ವಾರ್ಷಿಕ ವರದಿ ಮಂಡಿಸಿದರು. ನೂತನ ಪದಾಧಿಕಾರಿಗಳಾಗಿ ಈ ಕೆಳಗಿನವರು ಆಯ್ಕೆಯಾದರು
ಅಧ್ಯಕ್ಷರು :ಡಿ ಶ್ರೀನಿವಾಸ ರಾವ್
ಉಪಾಧ್ಯಕ್ಷರು :ಡಾ. ಮಲ್ಲಿಕಾರ್ಜುನ ಎಸ್ ನಾಸಿ
ಪ್ರಧಾನ ಕಾರ್ಯದರ್ಶಿ: ಎಚ್. ಜೆ ವಜ್ರರಾಂಗ (ಹರೀಶ್ )
ಜೊತೆ ಕಾರ್ಯದರ್ಶಿ: ಶ್ರೀಮತಿ ಪರಿಣಿತ ರವಿ. ಕೋಶಾಧಿಕಾರಿ: ವಿಷ್ಣು ತಂತ್ರಿ ಇವರನ್ನು ಆಯ್ಕೆ ಮಾಡಲಾಯಿತು. ಎಚ್. ಜೆ ವಜರಾನ್ಗ ಸ್ವಾಗತಿಸಿ, ಶ್ರೀಕಾಂತ ಆನವಟ್ಟಿ ವಂದಿಸಿದರು.


