ಶೋಷಿತರು ಮತ್ತು ಹಿಂದುಳಿದವರ ಶ್ರೆಯೋಭಿವೃದ್ಧಿಗೆ ನಾರಾಯಣ ಗುರುಗಳ ಹೋರಾಟ ಅವಿಸ್ಮರಣೀಯ. - ಜಯಂತ್ ನಡುಬೈಲ್.
ಸೆಪ್ಟೆಂಬರ್ 03, 2023
0
ಶೋಷಿತರು ಮತ್ತು ಹಿಂದುಳಿದವರ ಶ್ರೆಯೋಭಿವೃದ್ಧಿಗೆ ನಾರಾಯಣ ಗುರುಗಳ ಹೋರಾಟ ಅವಿಸ್ಮರಣೀಯ. - ಜಯಂತ್ ನಡುಬೈಲ್.
ಮಂಜೇಶ್ವರ: ಶೋಷಿತರು ಮತ್ತು ಹಿಂದುಳಿದವರ ಶ್ರೆಯೋಭಿವೃದ್ಧಿಗೆ ನಾರಾಯಣ ಗುರುಗಳ ಹೋರಾಟ ಅವಿಸ್ಮರಣೀಯವಾದದ್ದು. ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಪರಿವರ್ತನೆಯ ಹರಿಕಾರರಾಗಿ ಅವರು ಸಮಾಜದ ಒಳಿತಿಗಾಗಿ ದುಡಿದಿದ್ದಾರೆ. ಅವರ ಆಚಾರ, ವಿಚಾರ ಹಾಗೂ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಅಕ್ಷಯ ವಿದ್ಯಾ ಸಂಸ್ಥೆ ಪುತ್ತೂರಿನ ಚೆಯಾರ್ ಮ್ಯಾನ್ ಜಯಂತ್ ನಡುಬೈಲು ನುಡಿದರು. ಅವರು ಇಂದು ಸಂಜೆ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಕಾಸರಗೋಡು ಜಿಲ್ಲಾ ಸಮಿತಿ ಮಂಜೇಶ್ವರ ಇದರ ವತಿಯಿಂದ ತಲಪಾಡಿ ಮರಿಯಾಶ್ರಮ ಚರ್ಚ್ ಹಾಲ್ ನಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರುಗಳ 169 ನೇ ಜನ್ಮ ದಿನಾಚರಣೆ ಮತ್ತು 15 ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು. ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂಬ ತತ್ವವನ್ನು ನೀಡಿದ ನಾರಾಯಣ ಗುರುಗಳ ಸಂದೇಶಗಳು ಸಮಾಜಕ್ಕೆ ತಲುಪುವ ಕೆಲಸವಾಗಬೇಕು ಹಾಗಿದ್ದಲ್ಲಿ ಮಾತ್ರವೇ ಸಮಾಜ ಮುಂದುವರಿಯಲು ಸಾಧ್ಯವೆಂದು ನುಡಿದರು. ಸಮಾರಂಭವನ್ನು ಕಂಕನಾಡಿ ಗರೋಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಗಂಗಾಧರ ಶಾಂತಿ ದೀಪ ಬೆಳಗಿಸಿ, ಉದ್ಘಾಟಿಸಿದರು.ಉಪಸ್ಥಿತರಿದ್ದ ಗಣ್ಯರು ತೆಂಗಿನ ಗರಿ ಅರಳಿಸಿದರು. ರಮೇಶ್ ಸಂತಡ್ಕ ಗುರು ಪೂಜೆ ನೆರವೇರಿಸಿದರು. ಈ ವೇಳೆ ಮಂಗಳೂರು ಉಳ್ಳಾಲದ ಧಾರ್ಮಿಕ, ಸಾಮಾಜಿಕ, ಹಾಗೂ ರಾಜಕೀಯ ನಾಯಕರಾದ ಶ್ರೀಯುತ ಕೆ.ಟಿ. ಸುವರ್ಣ ಇವರಿಗೆ "ಗುರುಶ್ರೀ "ಕಾಸರಗೋಡು ಜಿಲ್ಲಾ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಹಾಗೂ ಪ್ಲಸ್ ಟು, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ "ಗುರುಶ್ರೀ "ಬಂಗಾರದ ಪದಕ ಹಾಗೂ ಬೆಳ್ಳಿ ಪದಕ ಅಲ್ಲದೆ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಹಾಗೂ ಎಸ್. ಎಸ್. ಎಲ್. ಸಿ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ, ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಚಿತ್ತರಂಜನ್ ಬೋಳಾರ್ (ಅಧ್ಯಕ್ಷರು ಆತ್ಮ ಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಮಂಗಳೂರು), ಎ.ಜೆ ಶೇಖರ್ (ಮೋಕ್ತೆಸರರು ಶ್ರೀ ಉಮಾಮಹೇಶ್ವರಿ ಕ್ಷೇತ್ರ ಕಾಪಿಕಾಡ್ ), ಕೃಷ್ಣಪ್ಪ ಪೂಜಾರಿ ದೇರಂಬಲ (ಅಧ್ಯಕ್ಷರು ಬಿಲ್ಲವ ಒಕ್ಕೂಟ ಕಾಸರಗೋಡು), ಸತೀಶ್ ಕುಂಪಲ (ಮಾಜಿ ಉಪಾಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್), ಚಂದ್ರಶೇಖರ್ ಉಚ್ಚಿಲ (ಮೊಕ್ತೇಸರರು ಶ್ರೀದೇವಿ ಧೂಮಾವತಿ ಮೂಲ ಕ್ಷೇತ್ರ ಗೆಜ್ಜಗಿರಿ), ಬಾಬು ಶ್ರೀಶಾಸ್ತ ಕಿನ್ಯ (ಅಧ್ಯಕ್ಷರು ಶ್ರೀ ಮಲರಾಯ ಧೂಮಾವತಿ ಬಂಟ ಚಾರಿಟೇಬಲ್ ಟ್ರಸ್ಟ್ ಭಂಡಾರ ಮನೆ ಕಿನ್ಯ, ಬೆಳರೆಂಗಿ), ರಘು.ಸಿ ಚೇರುಗೋಳಿ (ಮಾಜಿ ಅಧ್ಯಕ್ಷರು ಬಿಲ್ಲವ ಸಮಾಜ ಸೇವ ಸಂಘ ಮಂಗಲ್ಪಾಡಿ), ನಾರಾಯಣ ಪೂಜಾರಿ (ಅಧ್ಯಕ್ಷರು ಬಿಲ್ಲವ ಸೇವಾ ಸಮಾಜ ತಲಪಾಡಿ), ಹರೀಶ್ ಮುಂಡೋಳಿ (ಅಧ್ಯಕ್ಷರು ಬಿಲ್ಲವ ಸೇವಾ ಸಂಘ ಕೊಲ್ಯ), ಅಶ್ವಥ್ ಪೂಜಾರಿ ಚಿಪ್ಪಾರ್ (ಮಾಜಿ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಕಾಸರಗೋಡು), ಸತೀಶ್ ಕರ್ಕೇರ (ಉದ್ಯಮಿ ಮತ್ತು ಕಾರ್ಯಾಧ್ಯಕ್ಷರು ಬಿಲ್ಲವ ಯುವ ವೇದಿಕೆ ಉಳ್ಳಾಲ), ತಿಲಕ್ ಪ್ರಸಾದ್ (ಜನನಿ ಫೈನಾನ್ಸ್ ಕಾರ್ಪೊರೇಷನ್ (ರಿ.) ಸುಂಕದಕಟ್ಟೆ), ಸತೀಶ್ ಕುಂಬಳೆ (ಪ್ರಧಾನ ಕಾರ್ಯದರ್ಶಿ ಬಿಲ್ಲವ ಸೇವಾ ಸಂಘ ಕುಂಬಳೆ), ಲವ ಪೂಜಾರಿ ಮೀಪುಗುರಿ ಕಾಸರಗೋಡು, ದಿನೇಶ್ ಅತ್ತಾವರ, ಗುರು ಪ್ರಸಾದ್ ಶಾಂತಿ, ಜೀವನ್ ತೊಕ್ಕೊಟ್ಟು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆಯ ಜಿಲ್ಲಾಧ್ಯಕ್ಷರಾದ ಕೃಷ್ಣ ಶಿವ ಕೃಪಾ ಕುಂಜತ್ತೂರು ವಹಿಸಿ, ಸ್ವಾಗತಿಸಿದರು. ಕು. ಅನನ್ಯ, ಕು. ಲಿಖಿತ ಪ್ರಾರ್ಥನೆ ಹಾಡಿ, ಹೇಮಚಂದ್ರ ಕೈರಂಗಳ ಕಾರ್ಯಕ್ರಮ ನಿರೂಪಿಸಿ,ಸಮಿತಿಯ ಉಪಾಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಬಡಾಜೆ ವಂದಿಸಿದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಮಧ್ಯಾಹ್ನ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಳಾಂಗಣ ಸ್ಪರ್ಧೆ ನಡೆಯಿತು.










