ಕಡಂಬಾರ್ ಸರಕಾರಿ ಶಾಲೆಯಲ್ಲಿ ಲಿಟಲ್ ಕೈಟ್ಸ್ ನ ಕಲಿಕಾ ಶಿಬಿರ.
ಸೆಪ್ಟೆಂಬರ್ 03, 2023
0
ಕಡಂಬಾರ್ ಸರಕಾರಿ ಶಾಲೆಯಲ್ಲಿ ಲಿಟಲ್ ಕೈಟ್ಸ್ ನ ಕಲಿಕಾ ಶಿಬಿರ.
ಮಂಜೇಶ್ವರ: ಸರಕಾರಿ ಪ್ರೌಢ ಶಾಲೆ ಕಡಂಬಾರಿನಲ್ಲಿ, ಶಿಕ್ಷಣ ಇಲಾಖೆಯ ನಿಯಂತ್ರಣದಲ್ಲಿರುವ ಕೇರಳ ಇನ್ ಫ್ರಾಸ್ಟ್ರಕ್ಚರ್ ಆಂಡ್ ಟೆಕ್ನೊ ನೋಲಜಿ ಪೋರ್ ಎಜುಕೇಶನ್ ನಿರ್ದೇಶನದ ಪ್ರಕಾರ, ಕಡಂಬಾರು ಶಾಲೆಯಲ್ಲಿ ಒಂದು ದಿನದ ಶಿಬಿರ ಇಂದು ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನಿತಾ ಟೀಚರ್ ಶಿಬಿರವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.ಶ್ರೀಮತಿ ಮಲ್ಲಿಕಾ ಟೀಚರ್ ರವರು ಮುಖ್ಯ ತರಬೇತುದಾರರಾಗಿದ್ದರು. ಶಾಲೆಯ ಕೈಟ್ ಮಿಸ್ಟ್ರೆಸ್ ಶ್ರೀಮತಿ ಗೀತಾ ಟೀಚರ್ ರವರು ಸ್ವಾಗತ ಭಾಷಣ ನಡೆಸಿದರು. ಕಾರ್ಯಕ್ರಮಕ್ಕೆ ಹಿರಿಯ ಅಧ್ಯಾಪಕರಾದ ನಾಗರಾಜ ಮತ್ತು ರಾಜೇಶ್ ಕೊಡ್ಲಮೊಗರು ಶುಭವನ್ನು ಹಾರೈಸಿದರು. ಹೈಸ್ಕೂಲ್ ವಿಭಾಗದ S.R.G ಕನ್ವಿನರ್ ಶ್ರೀಮತಿ ಮಮತಾ ಟೀಚರ್ ಧನ್ಯವಾದ ಸಮರ್ಪಿಸಿದರು. ಲಿಟಲ್ ಕೈಟ್ಸ್ 2022 - 25 ರ ಶೈಕ್ಷಣಿಕ ಸಾಲಿನ ಮಕ್ಕಳಿಗಾಗಿ ನಡೆದ ಶಿಬಿರದಲ್ಲಿ ಸ್ಕ್ರಾಚ್ ಗೇಮ್, ಅನಿಮೇಶನ್ ಮತ್ತು ಪ್ರೋಗ್ರಾಮ್ಮಿಂಗ್ ಗಳಲ್ಲಿ ತರಬೇತಿಯನ್ನು ನೀಡಲಾಯಿತು. ಮಕ್ಕಳು ಸ್ವತಃ ಗೇಮ್ ಗಳನ್ನು ತಯಾರಿಸಿ ಆಟಗಳನ್ನು ಆಡಿದ್ದು ಮಕ್ಕಳಿಗೆ ಬಹಳ ಕುತೂಹಲದಾಯಕವಾಗಿತ್ತು. ಹಾಗೂ ಆನಂದವನ್ನು ನೀಡಿತು. ಪ್ರೋಗ್ರಾಮ್ಮಿಂಗ್ ತರಬೇತಿಯ ಮೂಲಕ ವಿವಿಧ ಪ್ರೋಗ್ರಾಂ ಗಳನ್ನು ತಯಾರುಮಾಡಲು, ವಿವಿಧ ಸನ್ನಿವೇಶಗಳ ಅನಿಮೇಶನ್ ವಿಡಿಯೋಗಳನ್ನು ತಯಾರಿಸಲೂ ಮಕ್ಕಳಿಗೆ ತರಬೇತಿ ನೀಡಲಾಯಿತು. ಮಕ್ಕಳಿಗೆ ಚಾ, ಉಪಾಹಾರಗಳನ್ನೂ ಮಧ್ಯಾಹ್ನ ಪಾಯಸ ಸಮೇತ ಊಟವನ್ನೂ ನೀಡಲಾಯಿತು. ಬೆಳಗ್ಗೆ 9.30 ಕ್ಕೆ ಆರಂಭವಾದ ಶಿಬಿರದಲ್ಲಿ ಒಂಭತ್ತನೇ ತರಗತಿಯ ವಿದ್ಯಾರ್ಥಿಗಳಾದ ಲವೀಶ್, ಸಾತ್ವಿಕ್ , ವಹಿದಾ, ನಂದಿತಾ, ರವರು ಶಿಬಿರದ ವಿವಿಧ ಚಟುವಟಿಕೆಗಳ ಕುರಿತು ತಮ್ಮ ಅನಿಸಿಕೆಗಳನ್ನು ಮಂಡಿಸುವುದರೊಂದಿಗೆ ಹಾಗೂ ರಾಷ್ಟ್ರಗೀತೆಯೊಂದಿಗೆ ಸಂಜೆ 4.30 ಕ್ಕೆ ಮುಕ್ತಾಯವಾಯಿತು.

