Breaking Posts

6/trending/recent
Type Here to Get Search Results !

8:10:45

ಮಂಜೇಶ್ವರ ಗ್ರಾಮ ಪಂಚಾಯತ್ ಹರಿತ ಕರ್ಮ ಸೇನೆ ವತಿಯಿಂದ ಮನೆ ಹಾಗೂ ವ್ಯಾಪಾರ ಕೇಂದ್ರಗಳಿಂದ ನಿಕ್ಷೇಪಿಸುವ ವಸ್ತುಗಳ ಸಂಗ್ರಹ.

ಮಂಜೇಶ್ವರ ಗ್ರಾಮ ಪಂಚಾಯತ್ ಹರಿತ ಕರ್ಮ ಸೇನೆ ವತಿಯಿಂದ ಮನೆ ಹಾಗೂ ವ್ಯಾಪಾರ ಕೇಂದ್ರಗಳಿಂದ ನಿಕ್ಷೇಪಿಸುವ ವಸ್ತುಗಳ ಸಂಗ್ರಹ.
ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ನ ಹರಿತ ಕರ್ಮ ಸೇನೆಯ ನೇತೃತ್ವದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ನ ವತಿಯಿಂದ 11 ವಾರ್ಡಿನ ಕನಿಲ ದಲ್ಲಿ ಹರಿತ ಸಹಾಯ ಸಂಘಟನೆಯಾದ ಗ್ರೀನ್ ವಾರ್ಮ್ಸ್ ಕೇರಳ ಸಂಘಟನೆಯ ಮೇಲ್ನೋಟದಲ್ಲಿ
ಇಂದು ಬೆಳಗ್ಗೆಯಿಂದ ಮನೆ ಮನೆಯಿಂದ ಹಾಗೂ ವಿವಿಧ ವ್ಯಾಪಾರ ಕೇಂದ್ರಗಳಿಂದ ಉಪಯೋಗಿಸಿ ನಿಕ್ಷೇಪಿಸುವ ಪ್ಲಾಸ್ಟಿಕ್, ಚಪ್ಪಲ್, ಬಟ್ಟೆ ಮುಂತಾದ ವಸ್ತುಗಳನ್ನು ಶೇಖರಿಸಿ ಪಂಚಾಯತ್ ನ ನಿಕ್ಷೇಪ ಕೇಂದ್ರವಾದ ಗೇರುಕಟ್ಟೆ ಯಲ್ಲಿರುವ ಎಂ.ಸಿ.ಎಫ್ ಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ವಿಂಗಡನೆ ಮಾಡಿ ಮರುಬಳಕೆಗೆ ಆಯಾಯ ಕಂಪೆನಿಗೆ ಕಳುಹಿಸಲು ಪಂಚಾಯತ್ ತೀರ್ಮಾನಿಸಿದೆ.
ಈ ಮಹತ್ತರ ಕಾರ್ಯಕ್ಕೆ ವಾರ್ಡ್ ಸದಸ್ಯರೂ, ಪಂಚಾಯತ್ ಉಪಾಧ್ಯಕ್ಷರಾದ ಮೊಹಮ್ಮದ್ ಸಿದ್ದೀಕ್ ರವರು ಹೊಸಂಗಡಿ ವ್ಯಾಪಾರ ಕೇಂದ್ರದ ಮುಂಭಾಗ ಉದ್ಘಾಟಿಸಿದರು. ಈ ವೇಳೆ ಹರಿತ ಸೇನೆಯ ಅಧ್ಯಕ್ಷರಾದ ಸ್ವಪ್ನ, ಪ್ರಧಾನ ಕಾರ್ಯದರ್ಶಿ ಶಾರದಾ, ಮತ್ತು 18 ಸದಸ್ಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.