ತೆಂಕು ತಿಟ್ಟಿನ ಪ್ರಸಿದ್ಧ ಚೆಂಡವಾದಕರಾದ ಕುಂಬಳೆ ಕೋಟೆಕಾರ್ ದಿ. ದೇರಣ್ಣ ರೈ ಧರ್ಮಪತ್ನಿ ಮೀಂಜ ಮಂಜಲ್ತೋಡಿ ತರವಾಡಿನ ಹಿರಿಯರಾದ ಪದ್ಮಾವತಿ ಡಿ. ರೈ (90) ನಿಧನ.
ಆಗಸ್ಟ್ 02, 2023
0
ತೆಂಕು ತಿಟ್ಟಿನ ಪ್ರಸಿದ್ಧ ಚೆಂಡವಾದಕರಾದ ಕುಂಬಳೆ ಕೋಟೆಕಾರ್ ದಿ. ದೇರಣ್ಣ ರೈ ಧರ್ಮಪತ್ನಿ ಮೀಂಜ ಮಂಜಲ್ತೋಡಿ ತರವಾಡಿನ ಹಿರಿಯರಾದ ಪದ್ಮಾವತಿ ಡಿ. ರೈ (90) ನಿಧನ.
ಕುಂಬಳೆ: ತೆಂಕುತಿಟ್ಟಿನ ಪ್ರಸಿದ್ಧ ಚಂಡೆ ವಾದಕ ಕುಂಬಳೆ ಕೋಟೆಕಾರ್ ದಿ. ದೇರಣ್ಣ ರೈ ಯವರ ಧರ್ಮಪತ್ನಿ ಮಿಂಜ ಮಂಜಲ್ತೋಡಿ ತರವಾಡಿನ ಹಿರಿಯರಾದ ಪದ್ಮಾವತಿ ಡಿ.ರೈ (90) ಪ್ರಾಯ ಪ್ರಬುದ್ಧರಾಗಿ ಇಂದು ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಸುಲೋಚನಾ ರೈ ಶಿವರಾಮ ರೈ (ಮಾಜಿ ರಣಜಿ ಕ್ರಿಕೆಟ್ ಆಟಗಾರ) ಉಮಾವತಿ ರೈ, ಬಾಲಕೃಷ್ಣ ರೈ, ಜಗನ್ನಾಥ ರೈ, ರತ್ನಾವತಿ ರೈ, ಸುಬ್ಬಯ್ಯ ರೈ, ಗುಲಾಬಿ ರೈ, ಜಲಜಾಕ್ಷಿ ರೈ, ಪದ್ಮನಾಭ ರೈ, ಚಂದ್ರಶೇಖರ ರೈ, ಅಳಿಯಂದಿರು - ಸೊಸೆಯಂದಿರಾದ: ಶ್ರೀನಿವಾಸ ಸಾಮಾನಿ ಚೆನೈತ್ತೋಡಿ ಗುತ್ತು ವಾಮದಪದವು, ಚಂದ್ರಹಾಸ ಚೌಟ ಮುಂಡ ಬೆಟ್ಟು ಗುತ್ತು, ಸೀತಾರಾಮ ಶೆಟ್ಟಿ ಸರಪಾಡಿ, ಚಂದ್ರಶೇಖರ ಶೆಟ್ಟಿ ಹೊಸಬೆಟ್ಟು ಸುರತ್ಕಲ್ (ಮಾಜಿ ಕಾರ್ಪೊರೇಟರ್), ಮೋಹಿನಿ ರೈ, ಕುಶಲರೈ, ವಂದನ ರೈ, ವಿಜಯಲಕ್ಷ್ಮಿ, ಜಯಲಕ್ಷ್ಮಿ, ಕುಶಲ ರೈ, ಏಕ ಸಹೋದರಿ: ಭಾಗೀರಥಿ ರೈ ಮಂಜಲ್ತೋಡಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಳಿಯಂದಿರ ಪೈಕಿ ಬಾಲಕೃಷ್ಣ ಶೆಟ್ಟಿ ಬಗಂಬಿಲ ಆನೆಕಲ್ಲು ಹಾಗೂ ಏಕ ಸಹೋದರ: ಕಾಂತಪ್ಪ ರೈ ದರ್ಬೆ ಈ ಮೊದಲೇ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಅಪರಾಹ್ನ ಸ್ವ - ಗೃಹದಲ್ಲಿ ನಡೆಯಿತು.
