Breaking Posts

6/trending/recent
Type Here to Get Search Results !

8:10:45

ನಾಡಿನಾದ್ಯಂತ ಸುಮಂಗಲಿಯರಿಂದ ಭಕ್ತಿ ಶ್ರದ್ದಾ ಪೂರ್ವಕವಾಗಿ ಶ್ರೀ ವರಮಹಾಲಕ್ಷ್ಮಿ ವೃತಾಚರಣೆಯು ಪೂಜೆ ಪುನಸ್ಕಾರಗಳೊಂದಿಗೆ ನಡೆಯಿತು.

ಮಂಜೇಶ್ವರ: ನಾಡಿನಾದ್ಯಂತ ಸುಮಂಗಲಿಯರಿಂದ ಭಕ್ತಿ ಶ್ರದ್ದಾ ಪೂರ್ವಕವಾಗಿ ಶ್ರೀ ವರಮಹಾಲಕ್ಷ್ಮಿ ವೃತಾಚರಣೆಯು ಪೂಜೆ ಪುನಸ್ಕಾರಗಳೊಂದಿಗೆ ವಿವಿಧ ಕಡೆ ಕ್ಷೇತ್ರ, ಮಠ, ಮಂದಿರಗಳಲ್ಲಿ ಮಹಿಳಾ ಸಂಘ ಹಾಗೂ ಮಾತೃ ಮಂಡಳಿಗಳ ನೇತೃತ್ವದಲ್ಲಿ ಬಹಳ ವಿಜ್ರಂಭಣೆಯಿಂದ ನಡೆಯಿತು.
ವಿಟ್ಲ: ಕೈಲಾಸ ಶಿವ ದೇವಸ್ಥಾನ ಕೇಪುವಿನಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯು ಪುರೋಹಿತ ಶ್ರೀ ಯಾದವ ಶರ್ಮಾ ನೀರ್ಚಾಲು ಇವರ ಪೌರೋಹಿತ್ಯದಲ್ಲಿ ನಡೆಯಿತು.
ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಮಂಜೇಶ್ವರ ವತಿಯಿಂದ 38ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ವ್ರುತ ಆಚರಣೆಯು ಬೆಳಗ್ಗೆ ಪೂಜೆಯೊಂದಿಗೆ ನಡೆದು ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು. ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆಯು ನಡೆಯಿತು. ಈ ವೇಳೆ ಮಹಿಳಾ ಸಂಘದ ಪಧಾಧಿಕಾರಿಗಳು, ಸದಸ್ಯರು, ಭಗವದ್ಭಕ್ತರು ಭಾಗವಹಿಸಿದರು.
ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಹೊಸಂಗಡಿ ಬಳಿಯ ಬಂಗ್ರ ಮಂಜೇಶ್ವರ ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆಯನ್ನು ಕ್ಷೇತ್ರದ ಮಹಿಳಾ ಸಂಘದವರು ಭಕ್ತಿ ಶ್ರದ್ದಾಪೂರ್ವಕವಾಗಿ ಆಚರಿಸಲಾಯಿತು.
ಪುರೋಹಿತ ವಾಮನ ಭಟ್ ಮಾಣಿಲ ನೇತೃತ್ವದಲ್ಲಿ ರಾಘವೇಂದ್ರ ಭಟ್ ದಡ್ಡoಗಡಿಯವರ ಪೌರೋಹಿತ್ಯದಲ್ಲಿ ಶ್ರೀ ಮಹಾಲಕ್ಷ್ಮೀ ತಾಯಿಗೆ ಪೂಜೆ ಪುನಸ್ಕಾರಗಳು ನಡೆಯಿತು.
ವರ್ಕಾಡಿ ದೇವಂದಪಡ್ಪು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ಮಹಾಲಕ್ಷ್ಮಿ ಮಾತೃ ಮಂಡಳಿ ನೇತೃತ್ವದಲ್ಲಿ 16 ವರ್ಷದ ಸಾಮೂಹಿಕ ವರ ಮಹಾಲಕ್ಷ್ಮಿ ವ್ರತಾಚರಣೆಯು ಪೂಜೆಯೊಂದಿಗೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಬಳಿಕ ದಿವಂಗತ ದೇವಕಿ ನಾರಾಯಣ ಶೆಟ್ಟಿ ನೆತ್ತಿಲ ಫಲದೋ೦ಡಿ ಸ್ಮರಣಾರ್ಥ ಮಕ್ಕಳಿಂದ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ಕುಂಜತ್ತೂರು: ಸಾರ್ವಜನಿಕ ಶ್ರೀ ಮಹಾಕಾಳಿ ಭಜನಾ ಮಂದಿರದಲ್ಲಿ ಇಂದು ಸಂಜೆ ನಡೆದ ಶ್ರೀ ವರಮಹಾಲಕ್ಷ್ಮಿ ಪೂಜೆಯಲ್ಲಿ ಮಹಿಳಾ ಸಮಿತಿಯವರಿಂದ ಭಜನೆ ಬಳಿಕ ವರಮಹಾಲಕ್ಷ್ಮಿ ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಿತು
ನೂರಾರು ಮಂದಿ ಭಗವದ್ಭಕ್ತರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.