Breaking Posts

6/trending/recent
Type Here to Get Search Results !

8:10:45

ಹರಿತ ಕೇರಳ ಮಿಷನ್ ತಾಂತ್ರಿಕ ಸಹಾಯದೊಂದಿಗೆ ಮೀಂಜ ಗ್ರಾಮ ಪಂಚಾಯತ್ "ಜಲ ಬಜೆಟ್ ಕಾರ್ಯಗಾರ."

ಹರಿತ ಕೇರಳ ಮಿಷನ್ ತಾಂತ್ರಿಕ ಸಹಾಯದೊಂದಿಗೆ ಮೀಂಜ ಗ್ರಾಮ ಪಂಚಾಯತ್ "ಜಲ ಬಜೆಟ್ ಕಾರ್ಯಗಾರ." ಮೀಂಜ ಪಂಚಾಯತ್ ಜಲ ಬಜೆಟ್ ಕಾರ್ಯಗಾರ.
ಮೀಯಪದವು: ಹರಿತ ಕೇರಳ ಮಿಷನ್ ತಾಂತ್ರಿಕ ಸಹಾಯದೊಂದಿಗೆ ಮೀಂಜ ಪಂಚಾಯತ್ ನಲ್ಲಿ ನಡೆಯುವ ಜಲ ಬಜೆಟ್ ಗ್ರಾಮ ಪಂಚಾಯತ್ ಹಾಲ್ ನಲ್ಲಿ ಕಾರ್ಯಗಾರ ನಡೆಯಿತು. ಮಳೆ ನೀರಿನ ಅಳತೆ ಲೆಕ್ಕ ಮಾಡಿ, ಗೃಹಬಳಕೆ, ಕೈಗಾರಿಕಾ, ವಾಣಿಜ್ಯ , ಮೃಗ ಪಕ್ಷಿಗಳ, ಕೃಷಿ ಉಪಯೋಗಕ್ಕೆ ಬೇಕಾದ ನೀರಿನ ಪ್ರಮಾಣ ಲೆಕ್ಕ ಹಾಕಿ ಜಲ ಬಜೆಟ್ ತಯಾರಿ ಮಾಡುವುದು. ಜಲ ಬಜೆಟ್ ಮೂಲಕ ಜಲ ಸುರಕ್ಷಾ ಯೋಜನೆಯಾಗಿದೆ ಇದರ ಉದ್ದೇಶ. ಮೀಂಜ ಪಂಚಾಯತ್ ಹಾಲ್ ನಲ್ಲಿ ನಡೆದ ಸಭೆಯನ್ನು ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ಹರಿತ ಕೇರಳ ಮಿಷನ್ ರಿಸೋರ್ಸ್ ಪರ್ಸನ್ ವಿನಯ್ ಕುಮಾರ್ ವಿಷಯ ಮಂಡಿಸಿದರು. ಅಭಿವೃದ್ಧಿ ಸ್ಥಿರ ಸಮಿತಿ ಅಧ್ಯಕ್ಷೆ ರುಕಿಯಾ ಸಿದ್ದೀಕ್, ಜನಾರ್ದನ ಪೂಜಾರಿ, ಜ್ಯೋತಿ ಪಿ ರೈ, ವಿನೋದ್ ಜಿ, ಕುಸುಮ ಮೋಹನ್, ಮಿಶ್ರಿಯ ಕುಂಞ, ನಾರಾಯಣ ತುಂಗಾ, ಉದ್ಯೋಗ ಖಾತ್ರಿ ಎ.ಇ ಅಜಿತ್ , ವಿ.ಇ.ಓ ಕಿರಣ್ ಮತ್ತಿತರರು ಮಾತನಾಡಿದರು. ಹೆಡ್ ಕ್ಲಾರ್ಕ್ ಐತಪ್ಪ ನಾಯ್ಕ್ ಸ್ವಾಗತಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.