ಚಂದ್ರಯಾನ - 3 ಯಶಸ್ವಿಯಾದ ದಿನ ಆಗಸ್ಟ್ 23 ಇನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ. ಮೋದಿ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ವಿಜ್ಞಾನಗಳನ್ನು ಅಭಿನಂದಿಸಿ, ಘೋಷಣೆ.
ಆಗಸ್ಟ್ 26, 2023
0
ಚಂದ್ರಯಾನ - 3 ಯಶಸ್ವಿಯಾದ ದಿನ ಆಗಸ್ಟ್ 23 ಇನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ. ಮೋದಿ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ವಿಜ್ಞಾನಗಳನ್ನು ಅಭಿನಂದಿಸಿ, ಘೋಷಣೆ.
ಬೆಂಗಳೂರು: ಚಂದ್ರಯಾನ - 3 ಯೋಜನೆ ಯಶಸ್ವಿಯಾದ, ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆದ ದಿನವನ್ನು, ಅಂದರೆ ಆಗಸ್ಟ್ 23 ಅನ್ನು ಇನ್ನು ಮುಂದೆ ‘ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು. ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಚಂದ್ರಯಾನ-3 ರ ಯಶಸ್ಸಿನಲ್ಲಿ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು. ಚಂದ್ರಯಾನ - 2 ಪತನ ಸ್ಥಳಕ್ಕೆ ‘ತಿರಂಗ ಪಾಯಿಂಟ್’ ಎಂದು ನಾಮಕರಣ ಮಾಡಿದ ಅವರು, ಈ ತಿರಂಗ ಪಾಯಿಂಟ್ ಮುಂದಿನ ಸಾಧನೆಗಳಿಗೆ ಪ್ರೇರಣೆಯಾಯಿತು. ಚಂದ್ರಯಾನ - 3 ಯಶಸ್ಸಿನಲ್ಲಿ ಇಸ್ರೋ ಸಾಧನೆ ದೊಡ್ಡದು. ಮೇಕ್ ಇನ್ ಇಂಡಿಯಾ ಚಂದ್ರನವರೆಗೂ ತಲುಪಿದೆ. ವಿಜ್ಞಾನಿಗಳ ಸಾಧನೆ ದೇಶದ ಪ್ರತಿಯೊಬ್ಬರಿಗೂ ತಿಳಿಯಬೇಕಿದೆ. ಚಂದ್ರಯಾನ - 3 ರ ಯಶಸ್ಸಿನಿಂದ ಯುವ ಪೀಳಿಗೆಗೆ ನಿರಂತರವಾಗಿ ಪ್ರೇರಣೆ ಸಿಗಲಿದೆ. ಹೀಗಾಗಿ ಆಗಸ್ಟ್ 23ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲು ಘೋಷಿಸಿದರು. ಶುದ್ಧ ಮನಸ್ಸಿನಿಂದ ಕರ್ತವ್ಯ ಮತ್ತು ಕರ್ಮ ಮಾಡಿದರೇ ಶುಭ ಕಲ್ಯಾಣವಾಗುತ್ತದೆ ಎಂಬುವುದಕ್ಕೆ ಚಂದ್ರಯಾನ-3 ಸಾಕ್ಷಿಯಾಗಿದೆ.
ನಿರ್ಮಾಣದಿಂದ ಪ್ರಳಯತನಕ ನಾರಿ ಶಕ್ತಿ ಮೇಲೆ ಸಂಪೂರ್ಣ ಸೃಷ್ಠಿ ನಿಂತಿದೆ ಎಂದು ಸಂಸ್ಕೃತ ಶ್ಲೋಕ ಹೇಳುವ ಮೂಲಕ ವಿವರಿಸಿದರು.
ನಾನು ಯಾವ ಚಂದ್ರನನ್ನು ನೋಡುತ್ತಿದ್ದೇನೋ ಆ ಚಂದ್ರನ ಮೇಲೆ ನನ್ನ ದೇಶ ಕಾಲಿಟ್ಟಿದೆ ಎಂದು ಭವಿಷ್ಯದ ಮಕ್ಕಳು ಹೇಳುತ್ತಾರೆ.
ಭಾರತ ಸಾವಿರಾರು ವರ್ಷಗಳ ಹಿಂದಯೇ ಅನ್ಯಗ್ರಹಗಳ ಬಗ್ಗೆ ಅಧ್ಯಯನ ಮಾಡಲು ಆರಂಭಿಸಿತು.
ಆರ್ಯಭಟ, ಭಾಸ್ಕರಾಚಾರ್ಯ, ಬ್ರಹ್ಮಗುಪ್ತ, ವರಹಮೀರ್ ಋಷಿಮುನಿಗಳು ಅಧ್ಯಯನ ಮಾಡಿದರು.
ಆರ್ಯಭಟರು ತಮ್ಮ ಮಹಾನ್ ಗ್ರಂಥವಾದ ಆರ್ಯಭಟೀಯದಲ್ಲಿ ಭೂಮಿ ಗೋಳಾಕಾರವಾಗಿದೆ ಎಂದು ಹೇಳಿದರು.
ಸೂರ್ಯ ಸಿದ್ಧಾಂತದಲ್ಲಿ ಭೂಮಿ ಗೋಳಾಕರವಾಗಿ ಆಕಾಶದಲ್ಲಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಗ್ರಹಣಗಳ ಬಗ್ಗೆ ನಮ್ಮ ಪೂರ್ವಜನರು ಹೇಳಿದ್ದಾರೆ. ಗ್ರಹ, ಉಪಗ್ರಹಗಳ ಬಗ್ಗೆ ಹೇಳಿದ್ದರು.
ನಮ್ಮ ಪೂರ್ವಜನರು ಸಾವಿರಾರು ವರ್ಷಗಳ ಭವಿಷ್ಯದ ಕ್ಯಾಲೆಂಡರ್ ರಚಿಸಿದ್ದಾರೆ ಎಂದರು. ಕೇಂದ್ರ, ರಾಜ್ಯ ಸರ್ಕಾರ ಸಹಯೋಗದಲ್ಲಿ ಬಾಹ್ಯಾಕಾಶ, ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ ರಾಷ್ಟ್ರಮಟ್ಟದ ಹ್ಯಾಕಥಾನ್ ಆಯೋಜಿಸಲಾಗುವುದು. ಇಸ್ರೋ ವಿಜ್ಞಾನಿಗಳು ಹಲವು ಉಪಗ್ರಹ ಉಡಾವಣೆ ಮಾಡಿದ್ದಾರೆ. ಈ ಉಪಗ್ರಹಗಳ ನೆರವಿನಿಂದ ಹಲವು ಕ್ಷೇತ್ರಗಳಿಗೆ ಅನುಕೂಲ ಆಗ್ತಿದೆ. ಕೃಷಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಿಗೆ ಅನುಕೂಲವಾಗುತ್ತಿದೆ. ತಂತ್ರಜ್ಞಾನ ಬೆಳವಣಿಗೆಯಾದರೆ ದೇಶ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಮೋದಿ ಹೇಳಿದರು. ಇದಕ್ಕೂ ಮುನ್ನ ಅವರು, ಚಂದ್ರಯಾನ-3 ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಮೋದಿ ಘೋಷಣೆ ಮಾಡಿದರು. ಗ್ರೀಕ್ ದೇಶದಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹೆಚ್ಎಎಲ್ ಏರ್ಪೋರ್ಟ್ನಲ್ಲಿ ವಿಜ್ಞಾನಿಗಳು, ಅಧಿಕಾರಿಗಳು ಸ್ವಾಗತಿಸಿದರು. ನಂತರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದರಾದ ತೇಜಸ್ವಿ ಸೂರ್ಯ, ಎಸ್.ಮುನಿಸ್ವಾಮಿ, ಶಾಸಕರಾದ ಭೈರತಿ ಬಸವರಾಜ್, ಮಂಜುಳಾ ಲಿಂಬಾವಳಿ ಪ್ರಧಾನಿಯವರನ್ನು ಸ್ವಾಗತಿಸಿದರು. ನಂತರ ಇಸ್ರೋ ಕೇಂದ್ರಕ್ಕೆ ತೆರಳುವ ಮುನ್ನ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಘೋಷಣೆ ಮೊಳಗಿಸಿದ್ದರು.

