2021 - 22 ನೇ ವರ್ಷದಲ್ಲಿ ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಹೆಚ್ಚಾಗಿ ಸಾವನ್ನಪ್ಪಿದವರು ದ್ವಿಚಕ್ರ ವಾಹನ ಸವಾರರು. - ಧರ್ಮತ್ತಡ್ಕ ಶಾಲಾ ವಿದ್ಯಾರ್ಥಿಗಳ ಸಮೀಕ್ಷೆ.
ಆಗಸ್ಟ್ 12, 2023
0
2021 - 22 ನೇ ವರ್ಷದಲ್ಲಿ ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಹೆಚ್ಚಾಗಿ ಸಾವನ್ನಪ್ಪಿದವರು ದ್ವಿಚಕ್ರ ವಾಹನ ಸವಾರರು. - ಧರ್ಮತ್ತಡ್ಕ ಶಾಲಾ ವಿದ್ಯಾರ್ಥಿಗಳ ಸಮೀಕ್ಷೆ.
ಧರ್ಮತಡ್ಕ: "ರಸ್ತೆ ಅಪಘಾತದಲ್ಲಿ ಹೆಚ್ಚಾಗಿ ಸಾವನ್ನಪ್ಪಿದವರು ಬೈಕ್ ಸವಾರರು ,ಅತೀ ಹೆಚ್ಚಾಗಿ ಅಪಘಾತ ಸಂಭವಿಸುವ ಸಮಯ ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ" ಎಂದು 'ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆ,ಧರ್ಮತಡ್ಕ'ದ ಮಾನವಿಕ ವಿಭಾಗದ (Humanities) ವಿದ್ಯಾರ್ಥಿಗಳು ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ಮೂಡಿಬಂದಿದೆ. ಶಾಲಾ ಪ್ರಾಂಶುಪಾಲರಾದ ಶ್ರೀ ರಾಮಚಂದ್ರ ಭಟ್ ಇವರ ಮೇಲ್ನೋಟದಲ್ಲಿ , ಸ್ಟಾಟಿಸ್ಟಿಕ್ಸ್ ಅಧ್ಯಾಪಕ ಉಣ್ಣಿಕೃಷ್ಣನ್ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳು 2021-22ನೇ ವರ್ಷದಲ್ಲಿ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಾಗಿದೆ. ಕುಂಬಳೆ ಪೊಲೀಸ್ ಠಾಣೆಯಿಂದ ವಿಷಯವನ್ನು ಸಂಗ್ರಹಿಸಿದ್ದು, ಅಪಘಾತದಲ್ಲಿ 9 ಜನರು ಮರಣವನ್ನಪ್ಪಿದ್ದು ಇದರಲ್ಲಿ 6 ಜನ ಬೈಕ್ ಸವಾರರಾಗಿದ್ದಾರೆ. 2021ರಲ್ಲಿ 48 ಹಾಗೂ 2022 ರಲ್ಲಿ 62 ಜನ ಗಾಯಗೊಂಡಿದ್ದಾರೆ. ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಬೈಕ್ ಅಪಘಾತವಾಗಿದೆಯೆಂದು ಸಮೀಕ್ಷೆಯಿಂದ ತಿಳಿಯಲಾಗಿದೆ. ಧರ್ಮತಡ್ಕ ಶಾಲಾ ವಿದ್ಯಾರ್ಥಿಗಳು ಕುಂಬಳೆ ಠಾಣಾ ಸಬ್ ಇನ್ಸ್ಪೆಕ್ಟರ್ " ರಜಿತ್" ಇವರಿಗೆ ಅಧ್ಯಯನದ ದಾಖಲೆಯನ್ನು ನೀಡಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ ಶಂಕರ ನಾರಾಯಣ ಭಟ್, ರಾಷ್ಟ್ರೀಯ ಸೇವಾ ಯೋಜನೆಯ ಧರ್ಮತಡ್ಕ ಶಾಲೆಯ ಸಂಯೋಜನಾಧಿಕಾರಿ ಶ್ರೀ ಜಗದೀಶನ್ ಪಿ.ವಿ, ಸ್ಟಾಫ್ ಸೆಕ್ರೆಟರಿ ಸತೀಶ್ ಕುಮಾರ್ ಶೆಟ್ಟಿ ಹಾಗೂ ಅಧ್ಯಾಪಕ-ಅಧ್ಯಾಪಿಕೆಯರು ಈ ಸಮೀಕ್ಷೆಗೆ ಸಹಕರಿಸಿದರು.


