"ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಜಾಗೃತಿ ಮೂಡಬೇಕು, ಪರಿಸರವನ್ನು ಸಂರಕ್ಷಿಸಬೇಕು, ಜಲ ಸಂರಕ್ಷಿಸಬೇಕು" ಎಂಬ ಸಂದೇಶ ಸಾರಲು ತ್ರಿವರ್ಣ ಧ್ವಜದೊಂದಿಗೆ ಸೈಕಲ್ ಯಾತ್ರೆ. 16,684 ಕಿಲೋ ಮೀಟರ್ ಸಂಚರಿಸಿ ಕೇರಳ ಪ್ರವೇಶಿಸಿದ ಕೊಲ್ಕತ್ತಾ ಯುವಕ.
ಆಗಸ್ಟ್ 12, 2023
0
"ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಜಾಗೃತಿ ಮೂಡಬೇಕು, ಪರಿಸರವನ್ನು ಸಂರಕ್ಷಿಸಬೇಕು, ಜಲ ಸಂರಕ್ಷಿಸಬೇಕು" ಎಂಬ ಸಂದೇಶ ಸಾರಲು ತ್ರಿವರ್ಣ ಧ್ವಜದೊಂದಿಗೆ ಸೈಕಲ್ ಯಾತ್ರೆ. 16,684 ಕಿಲೋ ಮೀಟರ್ ಸಂಚರಿಸಿ ಕೇರಳ ಪ್ರವೇಶಿಸಿದ ಕೊಲ್ಕತ್ತಾ ಯುವಕ.
ಮಂಜೇಶ್ವರ: ದೇಶದ 75 ನೇ ಅಮೃತ ಮಹೋತ್ಸವದ ಸ್ವಾತಂತ್ರ್ಯೋತ್ಸವ ಕಳೆದು 76 ನೇ ಸ್ವಾಂತಂತ್ರೋತ್ಸವ ಸಂಭ್ರಮದ ಸಡಗರದಲ್ಲಿರುವ ನಡುವೆ "ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಜಾಗೃತಿ ಮೂಡಬೇಕು, ಪರಿಸರವನ್ನು ಸಂರಕ್ಷಿಸಬೇಕು, ಜಲ ಸಂರಕ್ಷಿಸಬೇಕು" ಎಂಬ ನಿಟ್ಟಿನಲ್ಲಿ ಕೊಲ್ಕತ್ತಾದಿಂದ ವ್ಯಕ್ತಿಯೋರ್ವರು ತ್ರಿವರ್ಣ ಧ್ವಜವನ್ನು ಕಟ್ಟಿಕೊಂಡು ಸೈಕಲ್ ಜಾಥಾ ಆರಂಭಿಸಿದ್ದು, ಇಂದು ಬೆಳಗ್ಗೆ ಕರ್ನಾಟಕ ಗಡಿ ದಾಟಿ ಕೇರಳ ರಾಜ್ಯ ಪ್ರವೇಶಿಸಿ, ಗಡಿ ಭಾಗವಾದ ಮಂಜೇಶ್ವರಕ್ಕೆ ಆಗಮಿಸಿದ್ದರು. ಕಳೆದ ನವೆಂಬರ್ ತಿಂಗಳ 14 ಮಕ್ಕಳ ದಿನಾಚರಣೆಯಂದು ಕಲ್ಕತ್ತಾದಿಂದ ಸೈಕಲ್ ಏರಿ ಹೊರಟ ಮೊಹಮ್ಮದ್ ಇರ್ಪಾನ್ ರವರು ಕೋಲ್ಕತ್ತಾ, ಸಿಕ್ಕಿಂ, ಅಸ್ಸಾಂ, ಅರುಣಾಚಲ , ನಾಗಾಲ್ಯಾಂಡ್, ಬಿಹಾರ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಪಂಜಾಬ್, ರಾಜಸ್ತಾನ, ಕೇದಾರನಾಥ, ಡೆಲ್ಲಿ, ಗುಜರಾತ್, ಮುಂಬೈ, ಗೋವಾ, ಕರ್ನಾಟಕ ಮುಗಿಸಿ ಈಗ ಕೇರಳ ಪ್ರವಾಸ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಮಂಜೇಶ್ವರಕೆ ತಲುಪಿದಾಗ 16,864 ಕಿಲೋಮೀಟರ್ ದೂರ ಸೈಕಲ್ ತುಳಿದಿದ್ದೇನೆ ಎಂದು "ನಮ್ಮ ಮಂಜೇಶ್ವರ" ನ್ಯೂಸ್ ಗೆ ತಿಳಿಸಿದ್ದಾರೆ. ದೇಶವು ಅಮೃತ ಮಹೋತ್ಸವದ ಸ್ವಾತಂತ್ರ್ಯೋತ್ಸವವನ್ನು ಸಡಗರದಿಂದ ಆಚರಿಸಿದ್ದು,. ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಅಪಾರವಾಗಿದೆ. ಇವರ ವಿವಿಧ ಬಗೆಯ ಯೋಜನೆ ರಾಜ್ಯದ ವಿವಿಧ ಕಡೆ ಅಭಿವೃದ್ದಿ ಕಂಡಿದೆ. ಕೇವಲ ರಾಜಕೀಯದ ಲಾಭಾಕ್ಕಾಗಿ ಇತರ ರಾಜಕೀಯ ಪಕ್ಷಗಳು ವಿವಿಧ ರಾಜ್ಯಗಳ ಅಭಿವೃದ್ದಿಯನ್ನು ಕಂಡು ಪರ ವಿರೋಧ ಹೇಳಿಕೆ ನೀಡುತ್ತವೆ. ನಾನು ಸಂಚರಿಸಿದ ಕೆಲವು ಕಡೆಗಳ ರಾಜ್ಯಗಳಲ್ಲಿ ಕಡು ಬಡ ಕುಟುಂಬಗಳು ಇದೀಗ ಗದ್ದೆ ಬೇಸಾಯ ಮಾಡುವ ಮೂಲಕ ಗ್ರಾಮವನ್ನು ಅಭಿವೃದ್ದಿ ಪಡಿಸಿ, ಗ್ರಾಮದ ಮೂಲೆ ಮೂಲೆಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಂಡಿದ್ದಾರೆ. ಇದೆ ರೀತಿ ಇಡೀ ದೇಶವೇ ಸ್ವಚ್ಛ ಭಾರತವಾಗಬೇಕು. ಪರಿಸರವನ್ನು ಉಳಿಸಿ, ಜಲ ಮೂಲಗಳನ್ನು ಸಂರಕ್ಷಿಸಿ, ಕೃಷಿಪರ ಕಾರ್ಯಗಳಿಗೆ ಉತ್ತೇಜನ ನೀಡಬೇಕು. ದೇಶದ ಪ್ರಧಾನಿ ನರೇಂದ್ರಮೋದಿಯವರ ಸ್ವಚ್ಚ ಭಾರತ ಅಭಿಯಾನ ಹಾಗೂ ಪರಿಸರ, ಕೃಷಿ, ಜಲ ಮೂಲಗಳ ಸಂರಕ್ಷಣೆ ಬಗ್ಗೆ ಜನತೆಗೆ ಅರಿವು ಮೂಡಿಸಲು ದೇಶದ ತ್ರಿವರ್ಣ ಧ್ವಜವನ್ನು ಕಟ್ಟಿಕೊಂಡು ನಾನು ಸೈಕಲ್ ಯಾತ್ರೆ ಮಾಡುತ್ತಿದ್ದೇನೆ. ಜನತೆಗೆ ಭವ್ಯ ಭಾರತದ ಅಭಿವೃದ್ದಿ ಹಾಗೂ ಪರಿಸರ ರಕ್ಷಣೆ ಬಗ್ಗೆ ಮಾಹಿತಿ ನೀಡುತ್ತೇನೆ. ದೇಶದ ಪ್ರತಿ ವ್ಯಕ್ತಿ ದೇಶದ ಬಗ್ಗೆ 5 ನಿಮಷವಾದರೂ ಆಲೋಚಿಸಬೇಕು. ಬದಲಾವಣೆ ನಮ್ಮಿಂದಲೇ ಸಾಧ್ಯ ಎಂದು ಜಾಗೃತಿಗಾಗಿ ಈ ಸೈಕಲ್ ಯಾತ್ರೆಯ ಕಾರ್ಯ ಆರಂಭಿಸಿದ್ದಾಗಿ ಹೇಳುತ್ತಾರೆ. ಕೋಲ್ಕತಾ ನಿವಾಸಿ ಎಂ.ಡಿ ಜುಲ್ಶೇರ್ ಸಿದ್ದೀಕ್ - ಅಮೀನಾ ಕಾಟುನ್ ದಂಪತಿಯ ತೃತೀಯ ಪುತ್ರನಾಗಿರುವ ಮುಹಮ್ಮದ್ ಇರ್ಫನ್ (26) ಪೊಲೀಸ್ ಸಹಚಾರ ನಾಗಿರುವನು . ಪರಿಸರದ ಬಗ್ಗೆ ಅತೀವ ಕಾಳಜಿ ವಹಿಸುವ ಇವರು ಕ್ಲೀನ್ ಇಂಡಿಯಾ, ಗ್ರೀನ್ ಇಂಡಿಯಾ ದ ಬಗ್ಗೆ ಕನಸು ಹೊತ್ತು ಇದೀಗ ಸೈಕಲ್ ಯಾತ್ರೆ ಕೈಗೊಂಡಿದ್ದು, ದಿವಸಕ್ಕೆ 100 ಕಿಲೋ ಮೀಟರ್ ಸಂಚರಿಸಿ ಸಿಗುವ ಆರಾದನಾಲಯ, ಬಸ್ ತಂಗುದಾಣ, ಇತರ ಕಡೆಗಳಲ್ಲಿ ರಾತ್ರಿ ವಿಶ್ರಾಂತಿ ಪಡೆದು ಮತ್ತೆ ಮರುದಿನ ಬೆಳಗ್ಗೆ ಯಾತ್ರೆ ಮುಂದುವರಿಸುತ್ತಾ ಬಂದಿರುರು. ಸಂಚರಿಸುವ ವೇಳೆ ಸಿಗುವ ಹಲವು ಜನರು ತಿಂಡಿ, ಆಹಾರಗಳನ್ನು, ಕರ್ಚಿಗೆ ಹಣವನ್ನು ನೀಡಿ ಪ್ರೋತ್ಸಾಹ ನೀಡುತಿದ್ದಾರೆ. ಇನ್ನು ಕೇರಳ, ತಮಿಳುನಾಡು, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಗೆ ತೆರಳಿ ಮುಂದಿನ 2024 ಜನವರಿಗೆ ತಾಯ್ನಾಡಿಗೆ ತಲುಪಿ ಯಾತ್ರೆಯನ್ನು ಪೂರ್ಣಗೊಳಿಸುವೆ ಎಂದರು.

