ತುಳುನಾಡಿನ ಹಿಂದಿನ ಕಾಲದ ಆಚಾರ ವಿಚಾರ, ನಡೆ ನುಡಿ, ಜೀವನ ಪದ್ಧತಿ, ಸಂಸ್ಕೃತಿ ಸಂಸ್ಕಾರಕ್ಕೆ ಬದ್ಧವಾಗಿದೆ "ಕೊರಮ್ಮ". ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರ - ಪಟ್ಲ ಸತೀಶ್ ಶೆಟ್ಟಿ.
ಆಗಸ್ಟ್ 12, 2023
0
ತುಳುನಾಡಿನ ಹಿಂದಿನ ಕಾಲದ ಆಚಾರ ವಿಚಾರ, ನಡೆ ನುಡಿ, ಜೀವನ ಪದ್ಧತಿ, ಸಂಸ್ಕೃತಿ ಸಂಸ್ಕಾರಕ್ಕೆ ಬದ್ಧವಾಗಿದೆ "ಕೊರಮ್ಮ". ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರ - ಪಟ್ಲ ಸತೀಶ್ ಶೆಟ್ಟಿ.
ಮಂಗಳೂರು: "ಕೊರಮ್ಮ" ಚಿತ್ರವನ್ನು ಪ್ರತಿಯೊಬ್ಬರೂ ನೋಡಲೇಬೇಕಾದ ಸಿನೆಮಾ ಹಿಂದಿನ ಕಾಲದಲ್ಲಿ ತುಳುನಾಡಿನ ಗ್ರಾಮಗಳಲ್ಲಿ ಜನರು ಯಾವ ರೀತಿಯ ಒಡನಾಟದಲ್ಲಿ ಇದ್ರು, ಅವರ ಸಂಸ್ಕೃತಿ, ಆಚಾರ ವಿಚಾರಗಳು ಯಾವ ರೀತಿಯಲ್ಲಿದ್ದವು ಹಾಗೂ ಜಾತಿಯನ್ನು ನೋಡದೆ ಯಾವ ರೀತಿಯಲ್ಲಿ ಒಂದಾಣಿಕೆಯಲ್ಲಿ ಇದ್ದರು ಎಂಬುದನ್ನು ಒಂದಂಚ್ಚು ಬಿಡದೆ ಕೊರಮ್ಮ ಚಿತ್ರದ ಮೂಲಕ ಇಡೀ ಜಗತ್ತಿಗೆ ತೋರಿಸಿಕೊಟ್ಟಿದಾರೆ ನಿರ್ದೇಶಕ ಶಿವಧ್ವಜ್ ರವರು. ಇವರ ಈ ಪರಿಶ್ರಮಕ್ಕೆ ನಾವೆಲ್ಲಾ ಅಭಾರಿಗಳಾಬೇಕಾಗುತ್ತದೆ. ಎಂದು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ನುಡಿದರು. ಅವರು ಮಂಗಳೂರು ಭಾರತ್ ಮಾಲ್ ನಲ್ಲಿ ನಡೆದ ಕೊರಮ್ಮ ತುಳು ಸಿನೆಮಾ ಬಿಡುಗಡೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಹಿಂದಿನ ಕಾಲದ ಸಂಸ್ಕೃತಿಯನ್ನು ಕೊರಮ್ಮ ಒಪ್ಪವಾಗಿ ತೆರೆದಿಟ್ಟಿದೆ. ಪ್ರತಿಯೋರ್ವ ತುಳುವರು ಮೆಚ್ಚುವಂತ ಸಿನೆಮಾ. ಚಿತ್ರವು ಯಶಸ್ವಿಯಾಗಿ ಮೂಡಿ ಬರಲಿ ಎಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಚಿತ್ರ ನಿರ್ದೇಶಕ ಶಿವಧ್ವಜ್ ವಹಿಸಿದರು. ಅವರು ಮಾತನಾಡಿ ತುಳುನಾಡಿನ ಸಂಸ್ಕೃತಿ, ಆಚಾರ - ವಿಚಾರ ಜೀವನ ಪದ್ಧತಿ, ಇವುಗಳೊಂದಿಗೆ ಮನೋರಂಜನೆಯನ್ನು ಬೆರೆಸಿಕೊಂಡು ಸುಂದರವಾಗಿ ಮೂಡಿಬಂದಿರುವ ತುಳು ಸಿನಿಮಾ ಕೊರಮ್ಮ ಇಂದಿನ ಯುವ ಜನಾಂಗವನ್ನು ಬೆರಗುಗೊಳ್ಳುವಂತೆ ಮಾಡಿದೆ. ಈ ಚಿತ್ರವನ್ನು ತುಳು ನಾಡಿನ ಜನ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಈ ವೇಳೆ ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಕಾಶ್ ತೂಮಿನಾಡು, ಲಕ್ಷ್ಮಣ್ ಮಲ್ಲೂರು, ರೂಪಶ್ರೀ ವರ್ಕಾಡಿ, ಮಾಧವ ನಾಯ್ಕ್ ಅಡ್ಯಾರು ಮೊದಲಾದವರು ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಅಡ್ಯಾರು ನಿರೂಪಿಸಿದರು. ಬಳಿಕ ಕೊರಮ್ಮ ಚಿತ್ರ ಪ್ರದರ್ಶನಗೊಂಡಿತು.


