ಬಿ.ಎಂ.ಎಸ್ ಸ್ಥಾಪನಾ ದಿನಾಚರಣೆಯಂಗವಾಗಿ ಕಾರ್ಮಿಕ ಸಂಗಮ.
ಮಂಜೇಶ್ವರ: B.M.S ಸ್ಥಾಪನಾ ದಿನದ ಅಂಗವಾಗಿ ಬಿ.ಎಂ.ಎಸ್ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಕಾರ್ಮಿಕ ಸಂಗಮ ಕಾರ್ಯಕ್ರಮ ಕುಂಜತ್ತೂರು ಅಡ್ಕ ನಾಗಮೂಲ ದೈವಸ್ಥಾನ ಪರಿಸರದಲ್ಲಿ ನಡೆಯಿತು.
Advtಪಂಚಾಯತ್ ಅಧ್ಯಕ್ಷರಾದ ರವಿ ಮಜಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಘಟನೆಯ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉದ್ಘಾಟಿಸಿದರು. ಬಿ.ಎಂ.ಎಸ್ ಮಂಜೇಶ್ವರ ವಲಯ ಅಧ್ಯಕ್ಷ ಭಾಸ್ಕರ ಬಿ ಎಂ., ಶ್ರೀಧರ ಬಿ ಎಂ, ವಾರ್ಡ್ ಸದಸ್ಯರಾದ ರಾಜೇಶ್ ಕುಂಜತ್ತೂರು, ಲಕ್ಷ್ಮಣ ಕಣ್ವತೀರ್ಥ, ಬಿ.ಎಂ.ಎಸ್ ಪಂಚಾಯತ್ ಪಧಾಧಿಕಾರಿಗಳಾದ ಶ್ರೀ ಕ್ರಷ್ಣ ಶಿವಕೃಪಾ ಕುಂಜತ್ತೂರು, ರಾಘವ ಮಜಲ್, ರೋಹಿತ್ ಮಜಿಬೈಲ್, ಶುಭಾಶಂಸಣೆಗೆಯ್ದರು. ಸಂತೋಷ್ ಅಡ್ಕ ಸ್ವಾಗತಿಸಿ, ಪ್ರಕಾಶ್ ಕೆ. ಪಿ ಧನ್ಯವಾದವಿತ್ತರು.


.jpg)
.jpg)