Breaking Posts

6/trending/recent
Type Here to Get Search Results !

8:10:45

ಮಣಿಪುರ ಘಟನೆಯನ್ನು ಖಂಡಿಸಿ ಎ.ಐ.ವೈ.ಎಫ್ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರದಲ್ಲಿ ಪ್ರತಿಭಟನೆ.

ಮಣಿಪುರ ಘಟನೆಯನ್ನು ಖಂಡಿಸಿ A.I.Y.F ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರದಲ್ಲಿ ಪ್ರತಿಭಟನೆ.


ಮಂಜೇಶ್ವರ: AIYF ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರ ಪೇಟೆಯಲ್ಲಿ "ಸೇವ್ ಮಣಿಪುರ" ಧರಣಿ ಪ್ರತಿಭಟನೆ ನಡೆಯಿತು. ಮಣಿಪುರ ಮಹಿಳೆಯರ ನಗ್ನ ಮೆರವಣಿಗೆ, ಬಿಜೆಪಿ ಸರಕಾರದ ಕುಮ್ಮಕ್ಕಿನಿಂದ ನಡೆಯುತ್ತಿರುವ ಅನಿಯಂತ್ರಿತ ಜನಾಂಗೀಯ ದ್ವೇಷದ ಗಲಭೆಯನ್ನು ತೀವ್ರವಾಗಿ ಖಂಡಿಸಲಾಯಿತು.
                                      Advt

AIYF ಜಿಲ್ಲಾ ಅಧ್ಯಕ್ಷರಾದ ಅಜಿತ್ ಎಂ.ಸಿ ಪ್ರತಿಭಟನಾ ಧರಣಿ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಶರತ್ ಬೆಜ್ಜ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಕೆ.ಆರ್, ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಆರ್.ಕೆ ಮೊದಲಾದವರು ಮಾತನಾಡಿದರು. ಮಂಡಲ ಕಾರ್ಯದರ್ಶಿ ದಯಾಕರ ಮಾಡ ಸ್ವಾಗತಿಸಿ,ಸುನೀತಾ ವಾಲ್ಟಿ ಡಿಸೋಜ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.