ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ನಿವೃತ್ತ ಮೈಕ್ ಆಪರೇಟರ್ ಜನಾರ್ಧನ ಯು (70) ನಿಧನರಾದರು. ಮೃತರು ಮಂಜಪ್ಪ - ಪೂವಮ್ಮ ದಂಪತಿ ಪುತ್ರರಾಗಿದ್ದು, ಪತ್ನಿ: ಕಮಲಾಕ್ಷಿ, ಮಕ್ಕಳಾದ: ನಿತಿನ್, ದೀಪಿಕಾ, ಅಳಿಯ: ಶಿವಪ್ರಸಾದ್ ಕೊಲ್ಯ, ಸೊಸೆ: ಶ್ರದ್ಧಾ, ಸಹೋದರ - ಸಹೋದರಿಯರಾದ:
ಸೇಸಮ್ಮ, ಕೃಷ್ಣಮ್ಮ, ಯಮುನಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಸಹೋದರಿ ಪೈಕಿ ರಾಮಾ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಕಳೆದ 35 ವರ್ಷಗಳಿಂದ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದಲ್ಲಿ ಮುಂಜಾನೆ 5.30 ರಿಂದ 6.30 ರ ವರೆಗೆ ಸುಪ್ರಭಾತ ಹಾಗೂ ಭಕ್ತಿಗೀತೆಗಳನ್ನು ಕ್ಷೇತ್ರದ ಧ್ವನಿವರ್ಧಕದಲ್ಲಿ ಪ್ರಸಾರ ಮಾಡುತ್ತಿದ್ದರು. 30 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿ ಬಳಿಕ ನಿವೃತ್ತರಾದರು. ಮೃತರು ಉದ್ಯಾವರ ಮಾಡ ತೀಯಾ ಸಮಾಜ ಹಾಗೂ ಎಸ್.ಎನ್. ಡಿ. ಪಿ ಯ ಮುಖಂಡರಾಗಿದ್ದರು. ಅಸೌಖ್ಯ ನಿಮ್ಮಿತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಶುಕ್ರವಾರ ಮನೆಗೆ ಹಿಂತಿರುಗಿದ್ದರು. ಇಂದು ಮುಂಜಾನೆ 3.00 ಗಂಟೆಗೆ ನಿಧನರಾದರು. ಇದೀಗ ಉದ್ಯಾವರ ಮಾಡ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಜನಾರ್ಧನರ ಅಗಲುವಿಕೆ ಪರಿಸರದಲ್ಲಿ ಶೋಕ ಸಾಗರ ಮೂಡಿಸಿದೆ. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3.00 ಗಂಟೆಗೆ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿಯ ಹಿಂದೂ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಮೃತರ ನಿಧನಕ್ಕೆ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಆಡಳಿತ ಸಮಿತಿ, ಉತ್ಸವ ಸಮಿತಿ, ಶ್ರೀ ಅರಸು ಕೃಪಾ ವೀರ ಮಾರುತಿ ವ್ಯಾಯಾಮ ಶಾಲೆ, ವಿ.ಎಂ ಮಾಡ ಫ್ರೆಂಡ್ಸ್, ಯುವ ಸಂಗಮ ಮಾಡ, ಕಟ್ಟೆ ಫ್ರೆಂಡ್ಸ್ ಮಾಡ, ತೀಯಾ ಸಮಾಜ ಭಾಂದವರು ಗಾಢವಾದ ಸಂತಾಪ ಸೂಚಿಸಿದ್ದಾರೆ.