Breaking Posts

6/trending/recent
Type Here to Get Search Results !

8:10:45

ಉದ್ಯಾವರ ಮಾಡ ಜಾತ್ರಾ ಮಹೋತ್ಸವ ನೆಪದಲ್ಲಿ ರಾತ್ರಿ ವೇಳೆ ರಿಕ್ಷಾ ಚಾಲಕರಿಂದ ಅಧಿಕ ಬಾಡಿಗೆ ವಸೂಲಿ. ಜಾಗೃತರಾಗಲು ಕರೆ ನೀಡಿ ಕ್ಷೇತ್ರ ಉತ್ಸವ ಸಮಿತಿಯಿಂದ "ಸೂಚನಾ ಫಲಕ" ಅಳವಡಿಕೆ.

ಉದ್ಯಾವರ ಮಾಡ ಜಾತ್ರಾ ಮಹೋತ್ಸವ ನೆಪದಲ್ಲಿ ರಾತ್ರಿ ವೇಳೆ ರಿಕ್ಷಾ ಚಾಲಕರಿಂದ ಅಧಿಕ ಬಾಡಿಗೆ ವಸೂಲಿ. ಜಾಗೃತರಾಗಲು ಕರೆ ನೀಡಿ ಕ್ಷೇತ್ರ ಉತ್ಸವ ಸಮಿತಿಯಿಂದ "ಸೂಚನಾ ಫಲಕ" ಅಳವಡಿಕೆ.

ಮಂಜೇಶ್ವರ: ಭಾವೈಕ್ಯತೆಯ ಸಂಗಮ ಭೂಮಿಯಾದ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಉತ್ಸವ ಶನಿವಾರ ರಾತ್ರಿಯಿಂದ ಪ್ರಾರಂಭಗೊಂಡಿದ್ದು, ಮೇ 15 ರ ವರೆಗೆ ನಡೆಯಲಿದೆ. ಉತ್ಸವಕ್ಕೆ ದೂರದೂರಿನಿಂದ ಆಗಮಿಸುವ ಭಕ್ತಾದಿಗಳು ತಡ ರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಿಕ್ಷಾ ಏರಿ ಮನೆಗೆ ತೆರಳಿದ ವೇಳೆ ಕಿಲೋ ಮೀಟರ್ ಗೆ ದುಪ್ಪಟ್ಟು ಬೆಲೆಯ ಮೊತ್ತವನ್ನು ಬಾಡಿಗೆ ರೂಪದಲ್ಲಿ ಕೇಳುತ್ತಿದ್ದಾರೆಂಬ ಆರೋಪ ಇದೀಗ ಭಕ್ತಾದಿಗಳಿಂದ ಕೇಳಿ ಬರತೊಡಗಿದೆ. ಉದ್ಯಾವರ ಮಾಡದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಡಿಗೆ ಮಾಡುವ ಅನೇಕ ರಿಕ್ಷಾಗಳು (ಮಾಡ, ಕುಂಜತ್ತೂರು ಹೊರತುಪಡಿಸಿ), ಉಪ್ಪಳ, ಕುಂಬಳೆ ಭಾಗದಿಂದ ಇಲ್ಲಿಗೆ ಬಂದು ಬಾಡಿಗೆ ಮಾಡುತ್ತಿದ್ದು, ನಿತ್ಯ ಬಾಡಿಗೆ ಮಾಡುವ ಮಾಡ, ಕುಂಜತ್ತೂರಿನ ರಿಕ್ಷಾದವರ ಹೆಸರಿಗೆ ಮಂಕು ಬಳಿಯುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ಕುಂಜತ್ತೂರು ಹಾಗೂ ಮಾಡ ಪರಿಸರದ ರಿಕ್ಷಾ ಚಾಲಕರ ಪೈಕಿ ಕೆಲವು ಚಾಲಕರು ತಮ್ಮ ರಿಕ್ಷಾವನ್ನು ಮನೆಯಲ್ಲಿರಿಸಿ, ಕ್ಷೇತ್ರ ಉತ್ಸವದಲ್ಲಿ ಭಾಗವಹಿಸುತಿದ್ದು, ಇನ್ನುಳಿದವರು ನಿಗದಿತ ಬೆಲೆಯಲ್ಲಿ ರಿಕ್ಷಾ ಸರ್ವಿಸ್ ಮಾಡುತ್ತಿದ್ದಾರೆ. ಆದರೆ ಇನ್ನುಳಿದ ರಿಕ್ಷಾಗಳು ದುಪ್ಪಟ್ಟು ಬಾಡಿಗೆ ಪಡೆಯುತ್ತಿದ್ದಾರೆ ಎಂಬ ದೂರು ಕ್ಷೇತ್ರದ ಉತ್ಸವ ಸಮಿತಿಗೆ ಭಕ್ತಾದಿಗಳಿಂದ ಲಭಿಸಿದೆ. ಉತ್ಸವದ ಮೊದಲ ದಿನವಾದ ಶನಿವಾರ ರಾತ್ರಿ ಉದ್ಯಾವರ ಮಾಡದಿಂದ ಕುಂಜತ್ತೂರು ಮಹಾಲಿಂಗೇಶ್ವರ ಭಾಗಕ್ಕೆ ಹಾಗೂ ಮುರತ್ತನೆ ಭಾಗಕ್ಕೆ ತೆರಳಿದ ರಿಕ್ಷಾವೊಂದು (ರಾತ್ರಿ ಸಂಚಾರಕ್ಕಾಗಿ) 150 ರ ಬದಲು 350 ರೂಪಾಯಿ ಮಿಕ್ಕಿ ಹಣ ಪಡೆದಿದ್ದಾರೆ. ಈ ಬಗ್ಗೆ ವಿಚಾರಿಸಿದಕ್ಕೆ "ರಾತ್ರಿ ಬಾಡಿಗೆ ಡಬಲ್" ಎಂದು ಹೇಳಿ ಹಣ ಪೀಕಿಸಿದ ಘಟನೆ ನಡೆದಿದೆ. ಈ ಬಗ್ಗೆ ಹೆಚ್ಚೆತ್ತ ಉತ್ಸವ ಸಮಿತಿ, ಜಾತ್ರೆಯ ನೆಪದಲ್ಲಿ ಭಕ್ತಾದಿಗಳಿಂದ ದುಪ್ಪಟ್ಟು ಬೆಲೆಯ ಅಧಿಕ ಬಾಡಿಗೆ ವಸೂಲಿ ಮಾಡಿದ್ದಲ್ಲಿ, ಆ ರಿಕ್ಷಾದ ನಂಬರ್ ಪ್ಲೇಟ್ ನ ಪೋಟೋ ತೆಗೆದು ಸಮಿತಿಯವರು ಸೂಚಿಸಿದ ನಂಬರ್ ಗೆ ವಾಟ್ಸಪ್ ಮಾಡಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪ್ರಕಟಣೆಯನ್ನ ಕೂಡಾ ಹೊರಡಿಸಿದ್ದಾರೆ. ಅಲ್ಲದೇ ಮಾಡ ಜಾತ್ರೆಯು ಉಭಯ ಜಿಲ್ಲೆಯಲ್ಲಿ ಖ್ಯಾತಿ ಪಡೆದಿದ್ದು, ನಡುಬಂಡಿ ಉತ್ಸವ, ಕಡೆ ಬಂಡಿ ಉತ್ಸವಕ್ಕಾಗಿ ಈ ಬಾರಿ 50,000 ಕ್ಕಿಂತಲೂ ಅಧಿಕ ಮಂದಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಈಗಾಗಲೇ ಬಾಡಿಗೆ ನೆಪದಲ್ಲಿ ಕುಂಬಳೆ, ಉಪ್ಪಳ ಭಾಗದಿಂದ ಹಲವು ರಿಕ್ಷಾಗಳು ಬಾಡಿಗೆ ಮಾಡಲು ಸರತಿ ಸಾಲಿನಲ್ಲಿ ಆಗಮಿಸಿದೆ. ಈ ಬಗ್ಗೆ ಉದ್ಯಾವರ ಮಾಡ ಪರಿಸರ ಹಾಗೂ ಕ್ಷೇತ್ರದ ವಿವಿಧ ಕಡೆಗಳಲ್ಲಿ ಸೂಚನಾ ಫಲಕವನ್ನು ಕೂಡಾ ಸಮಿತಿಯವರು ಅಳವಡಿಸಿದ್ದು, ಭಕ್ತಾದಿಗಳು ಕೊಳ್ಳೆ ಹೊಡೆಯುವ ರಿಕ್ಷಾ ಚಾಲಕರಿಂದ ವಂಚಿತರಾಗಬಾರದಾಗಿ ಮನವಿಯನ್ನು ಕೂಡಾ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.