Breaking Posts

6/trending/recent
Type Here to Get Search Results !

8:10:45

ಶಾಮ್ ಇನ್ಸ್ಟಿಟ್ಯೂಷನ್ ಪ್ರಸ್ತುತ ಪಡಿಸಿದ ‘ಕಜ್ಜ’ ತುಳು ಸಿನಿಮಾದ ಆಡಿಯೋ, ಟ್ರೇಲರ್ ಬಿಡುಗಡೆ

ಶಾಮ್ ಇನ್ಸ್ಟಿಟ್ಯೂಷನ್ ಪ್ರಸ್ತುತ ಪಡಿಸಿದ ‘ಕಜ್ಜ’ ತುಳು ಸಿನಿಮಾದ ಆಡಿಯೋ, ಟ್ರೇಲರ್ ಬಿಡುಗಡೆ

ಮಂಗಳೂರು: ತುಳು ಭಾಷೆ ನಾಟಕ ಮತ್ತು ಸಿನಿಮಾಗಳ ಮೂಲಕ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ ಎಂದು ಮೂಡಬಿದ್ರೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ಮಂಗಳೂರಿನ ಪುರಭವನದಲ್ಲಿ ಶಾಮ್ ಇನ್ಸ್ಟಿಟ್ಯೂಶನ್ ವತಿಯಿಂದ ಆಯೋಜಿಸಿದ್ದ ‘ಕಜ್ಜ’ ತುಳು ಸಿನಿಮಾದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಪ್ರಮುಖ ಸ್ಥಾನ ಹೊಂದಿದ್ದು, ಈಗಾಗಲೇ 150ಕ್ಕೂ ಹೆಚ್ಚು ತುಳು ಸಿನಿಮಾಗಳು ತೆರೆಗೆ ಬಂದಿವೆ. ತುಳು ಚಿತ್ರರಂಗ ನಿರಂತರವಾಗಿ ಬೆಳೆಯುತ್ತಿದೆ ಎಂದರು.
ಕಾರ್ಯಕ್ರಮವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಅಸ್ರಣ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ತುಳು ಸಿನಿಮಾಗಳ ಮೂಲಕ ಸಂಸ್ಕೃತಿ, ಆಚಾರ–ವಿಚಾರಗಳು ಜಗತ್ತಿಗೆ ಪಸರಿಸಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ‘ಕಜ್ಜ’ ಸಿನಿಮಾ ತುಳು ಚಿತ್ರರಂಗದಲ್ಲಿ ಮೈಲುಗಲ್ಲಾಗಲಿ ಎಂದು ಹಾರೈಸಿದರು. ಸರ್ವೋತ್ತಮ ಶೆಟ್ಟಿ (ಅಬುದಾಬಿ) ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ನಟ ವಸಿಷ್ಠ ಸಿಂಹ ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡಿ, ತುಳು ಭಾಷೆ ಜನರೊಂದಿಗೆ ಬೆರೆತು ಕಲಿತ ಅನುಭವ ಹಂಚಿಕೊಂಡರು. ಚಿತ್ರದ ಚಿತ್ರೀಕರಣ ವೇಳೆ ಎಲ್ಲರೂ ಕುಟುಂಬದಂತೆ ಇದ್ದೆವು, ಸಿನಿಮಾ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ತುಳು ಭಾಷೆ ಆಧುನಿಕ ತಂತ್ರಜ್ಞಾನದಲ್ಲಿ ಮರೆಯಾಗಬಹುದು ಎಂಬ ಆತಂಕ ಇದ್ದರೂ, ಸಿನಿಮಾಗಳ ಮೂಲಕ ಅದು ಮತ್ತಷ್ಟು ಬೆಳೆಯುತ್ತಿದೆ ಎಂದರು. ಶಾಸಕ ವೇದವ್ಯಾಸ ಕಾಮತ್ ತುಳು ಸಿನಿಮಾಗಳಿಗೆ ಪ್ರೋತ್ಸಾಹ ನೀಡುವಂತೆ ಜನತೆಗೆ ಮನವಿ ಮಾಡಿದರು.
ಸಮಾರಂಭದಲ್ಲಿ ಹರಿಕೃಷ್ಣ ಪುನರೂರು, ಅರವಿಂದ ಬೋಳಾರ್, ಎಂಪಿ ಶೈಣೈ, ವಿಶ್ವನಾಥ ಶೆಟ್ಟಿ ದುಬಾಯಿ, ಸತೀಶ್ ಬಂದಲೆ, ಉದಯ ಪೂಜಾರಿ ಬಲ್ಲಾಲ್ ಭಾಗ್, ರೈ ಮಸಾಲೆಯ ಮಾಲಕಿ ದಿವ್ಯಾ ರೈ, ನಿರ್ಮಾಪಕ ವಿಶಾಂತ್ ಮೆನೆಜೆಸ್, ಸಹ ನಿರ್ಮಾಪಕ ಪ್ರವೀಣ್ ಸುವರ್ಣ, ನಟ ಸಿದ್ದಾರ್ಥ್ ಶೆಟ್ಟಿ, ಸಂಗೀತ ನಿರ್ದೇಶಕ ಲಿಖಿತ್ ಪ್ರಸಾದ್ ಶೆಟ್ಟಿ, ಲಂಚುಲಾಲ್, ಹರೀಶ್ ಶೆಟ್ಟಿ, ಆರತಿ ಶೆಟ್ಟಿ ಮೊದಲಲಾದವರು ಉಪಸ್ಥಿತರಿದ್ದರು.
ಚಿತ್ರದ ಕಥೆ ಹಾಗೂ ಸಾಹಿತ್ಯ ಬರೆದ ಮೋಹನ್ ರಾಜ್ ಸ್ವಾಗತಿಸಿದರು. ಪ್ರಕಾಶ್ ಮಹಾದೇವನ್ ಪ್ರಾರ್ಥನೆ ಸಲ್ಲಿಸಿದರು. ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು.
‘ಕಜ್ಜ’ ತುಳು ಸಿನಿಮಾ ಮೇ 15ರಂದು ತೆರೆ ಕಾಣಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.