Breaking Posts

6/trending/recent
Type Here to Get Search Results !

8:10:45

ಕಡು ಬೇಸಿಗೆ ತಾಪಮಾನ: ಕಾಸರಗೋಡು ಅಂಗನವಾಡಿ ಮಕ್ಕಳಿಗೆ ರಜೆ ಘೋಷಿಸಲು ಒತ್ತಾಯ

ಕಡು ಬೇಸಿಗೆ ತಾಪಮಾನ: ಕಾಸರಗೋಡು ಅಂಗನವಾಡಿ ಮಕ್ಕಳಿಗೆ ರಜೆ ಘೋಷಿಸಲು ಒತ್ತಾಯ

ಕಾಸರಗೋಡು: ಜಿಲ್ಲೆಯಲ್ಲಿ ಮುಂದುವರಿಯುತ್ತಿರುವ ಕಡು ಬೇಸಿಗೆ ಹಾಗೂ ಉಷ್ಣ ಹವಾಮಾನದ ಪರಿಣಾಮವಾಗಿ ಅಂಗನವಾಡಿ ಮಕ್ಕಳಿಗೂ ಬೇಸಿಗೆ ರಜೆ ನೀಡಬೇಕೆಂಬ ಒತ್ತಾಯ ಹೆಚ್ಚಾಗಿದೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 1348 ಅಂಗನವಾಡಿಗಳಲ್ಲಿ ಬಹುತೇಕ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಹಳೆಯ ಕಟ್ಟಡಗಳಲ್ಲಿ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಸಮರ್ಪಕ ಗಾಳಿ ಮತ್ತು ಬೆಳಕು ಇಲ್ಲದೆ ಒಳಾಂಗಣದಲ್ಲಿ ಉಷ್ಣತೆ ಹೆಚ್ಚುತ್ತಿದೆ. ಇದರಿಂದ ಪುಟಾಣಿ ಮಕ್ಕಳಿಗೆ ತೊಂದರೆ ಉಂಟಾಗಿ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.
ಅಂಗನವಾಡಿಗಳ ಸುತ್ತಮುತ್ತ ನೆರಳು ನೀಡುವ ಮರಗಳ ಕೊರತೆಯೂ ಇದ್ದು, ಪ್ರಖರ ಬಿಸಿಲಿನಿಂದ ನೀರಿನ ಮೂಲಗಳು ಬತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಇದೇ ವೇಳೆ, ಬೇಸಿಗೆ ರಜೆ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸಬಾರದೆಂದು ರಾಜ್ಯ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಉಷ್ಣ ಪರಿಸ್ಥಿತಿಯನ್ನು ಪರಿಗಣಿಸಿ ಅಂಗನವಾಡಿ ಮಕ್ಕಳಿಗೂ ರಜೆ ಘೋಷಿಸಬೇಕು ಎಂದು ಅಂಗನವಾಡಿ ವರ್ಕರ್ಸ್ ಮತ್ತು ಹೆಲ್ಪರ್ಸ್ ಅಸೋಸಿಯೇಷನ್ (ಸಿಐಟಿಯು) ಜಿಲ್ಲಾ ಕಾರ್ಯದರ್ಶಿ ಪಿ. ವಸಂತ ಕುಮಾರಿ ಅವರು ಜಿಲ್ಲಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.