ಮಧೂರು: ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ ಬೆಳಗಿತ್ತಿ ಮಠ ಸರಸ್ವತೀ ಪೀಠಾಧೀಶರಾದ ಜಗದ್ಗುರು ಅನಂತ ಶ್ರೀ ವಿಭೂಶಿತ ಕಾಳ ಹಸ್ತೇಂದ್ರ ಸರಸ್ವತೀ ಸ್ವಾಮಿಗಳು 'ವಿಶ್ವರೂಪಂ ಸೀಸನ್-3' ರ ಲಾಂಛನ ಬಿಡುಗಡೆ ಮಾಡಿದರು. ಬಂಗ್ರಮಂಜೇಶ್ವರದ ಓಜ ಸಾಹಿತ್ಯ ಕೂಟ ಯಶಸ್ವಿಯಾಗಿ ನಡೆಸಿದ ವಿಶ್ವಬ್ರಾಹ್ಮಣ ಸಮಾಜದವರ ಕಲಾ, ಕ್ರೀಡಾ ಮಹೋತ್ಸವ 'ವಿಶ್ವರೂಪಂ ಯುವಜನ ಓಜಸ್ವರೂಪಂ 2025-26' ರ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ನಡೆಯಿತು. ಪಡುಕುತ್ಯಾರು ಶ್ರೀ ಮದ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವರೂಪಂ ನ ಗೌರವ ಸಲಹೆಗಾರರಾದ ಎಂ.ಬಿ. ಲೋಕೇಶ್ ಆಚಾರ್ಯ ಕಂಬಾರು, ಬಾಲಕೃಷ್ಣ ಆಚಾರ್ಯ ಹೊಸಂಗಡಿ ಇವರ ಸಮ್ಮುಖದಲ್ಲಿ ಮಧೂರು ವಿಶ್ವಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷರಾದ ಮಹೇಶ ಆಚಾರ್ಯ ಮಧೂರು 'ವಿಶ್ವರೂಪಂ ಸೀಸನ್-3' ರ ಘೋಷಣಾ ಲಾಂಛನವನ್ನು ಶ್ರೀಗುರುಗಳ ದಿವ್ಯಹಸ್ತದಿಂದ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಮಾಜದ ವೈದಿಕ, ಸಾಂಸ್ಕೃತಿಕ ಗಣ್ಯರು ಹಾಗೂ ಮಧೂರು ಯುವಕ ಸಂಘದ ಉಪಾಧ್ಯಕ್ಷ ಗಣೇಶ ಆಚಾರ್ಯ ಅಮೈ, ಜ್ಞಾನೇಶ ಆಚಾರ್ಯ ನೀರ್ಚಾಲು, ಪ್ರಧಾನ ಕಾರ್ಯದರ್ಶಿ ವರಪ್ರಸಾದ್ ಆಚಾರ್ಯ ಕಂಬಾರು ,ಜೊತೆಕಾರ್ಯದರ್ಶಿ ಮೌನೇಶ ಆಚಾರ್ಯ ಜೆಪಿ ನಗರ, ಕಾರ್ತಿಕ್ ಆಚಾರ್ಯ ನೀರ್ಚಾಲು, ಲವ ಆಚಾರ್ಯ ಕೊಲ್ಲಂಗಾನ ಹಾಗೂ ಯುವಕ ಸಂಘದ ಸರ್ವಸದಸ್ಯರು ಉಪಸ್ಥಿತರಿದ್ದರು.
8:10:45