ದೇಹದ ಸ್ವಾಧೀನ ಕಳೆದುಕೊಂಡು ಶಯ್ಯಾವಸ್ಥೆಯಲ್ಲಿರುವ ಅಶೋಕ್ ಅಂಗಡಿಪದವು ರವರಿಗೆ ಟೀಮ್ ಮಂಜೇಶ್ವರದಿಂದ ವೀಲ್ ಚಯರ್ ವಿತರಣೆ.
ಮಂಜೇಶ್ವರ: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಹಲವು ವರ್ಷಗಳಿಂದ ದೇಹದ ಸ್ವಾಧೀನ ಕಳೆದುಕೊಂಡು ಶಯ್ಯಾವಸ್ಥೆಯಲ್ಲಿ ದಿನ ಕಳೆಯುತ್ತಿರುವ ಅಂಗಡಿಪದವು ನಿವಾಸಿ ಅಶೋಕ್ ಎಂಬವರಿಗೆ ಟೀಮ್ ಮಂಜೇಶ್ವರ ವತಿಯಿಂದ ಇಂದು ವೀಲ್ ಚಯರ್ ನೀಡಲಾಯಿತು. ಈ ವೇಳೆ ಸಂಘಟನೆಯ ಪ್ರಮುಖರು ಅಶೋಕ್ ರ ಮನೆಗೆ ತೆರಳಿ ವೀಲ್ ಚಯರ್ ನೀಡಿ, ಹೊಸ ಜೀವನಕ್ಕೆ ಭರವಸೆ ನೀಡಿದರು.