Breaking Posts

6/trending/recent
Type Here to Get Search Results !

8:10:45

ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಕಾರ್ನವರಾದ ರಮೇಶ್ ಕಾರ್ನವರ್ (37) ದೈವೈಕ್ಯ.

ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಕಾರ್ನವರಾದ ರಮೇಶ್ ಕಾರ್ನವರ್ (37) ದೈವೈಕ್ಯ.

ಮಂಜೇಶ್ವರ: ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಕಾರ್ನವರಾದ ರಮೇಶ್ ಕಾರ್ನವರ್ (37) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವ ವೇಳೆ ಇಂದು ಬೆಳಗ್ಗೆ ದೇವರ ಪಾದ ಸೇರಿದ್ದಾರೆ. ಮೃತರು: ಮೂಲತಃ ಮುಲಿಂಜ ಭಂಡಾರ ತರವಾಡು ಮನೆ ನಿವಾಸಿಯಾಗಿದ್ದು, ಕೃಷ್ಣ - ಕುಸುಮ ದಂಪತಿಗಳ ಪುತ್ರರಾಗಿದ್ದಾರೆ. ಪತ್ನಿ: ಕೃಪಾ ಹಾಗೂ ಏಕ ಪುತ್ರಿ, ಸಹೋದರ: ಗಣೇಶ್ (ಅಯ್ಯಪ್ಪ ವೃತದಾರಿ ಪಾದಯಾತ್ರೆ), ಸಹೋದರಿ: ರಮ್ಯಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ರಮೇಶ್ ಕಾರ್ನವರ್ ರವರು ಉಪ್ಪಳ ಶ್ರೀ ಭಗವತಿ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಿಂದ ಕಾರ್ನವರ್ ರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರ ಅಂತ್ಯಕ್ರಿಯೆಯ ವಿಧಿ ವಿಧಾನಗಳು ಕ್ಷೇತ್ರದ ಆಚಾರ ಪಟ್ಟಂತೆ ಪ್ರತಾಪನಗರ ಮಂಗಲ್ಪಾಡಿಯಲ್ಲಿರುವ ಸ್ವ - ಗೃಹದಲ್ಲಿ ಇಂದು ಸಂಜೆ ನೆರವೇರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.