Breaking Posts

6/trending/recent
Type Here to Get Search Results !

8:10:45

ಸೀತಾಂಗೋಳಿ ಪಳ್ಳತ್ತಡ್ಕ ನಿವಾಸಿ, ಪೆರ್ನೆ ಜನಾರ್ಧನ ಆಚಾರ್ಯ (71) ಅಲ್ಪಕಾಲದ ಅಸೌಖ್ಯದಿಂದ ನಿಧನ.

ಸೀತಾಂಗೋಳಿ ಪಳ್ಳತ್ತಡ್ಕ ನಿವಾಸಿ, ಪೆರ್ನೆ ಜನಾರ್ಧನ ಆಚಾರ್ಯ (71) ಅಲ್ಪಕಾಲದ ಅಸೌಖ್ಯದಿಂದ ನಿಧನ.
ಕುಂಬಳೆ: ಸೀತಾಂಗೋಳಿ ಪಳ್ಳತ್ತಡ್ಕ ನಿವಾಸಿ, ಪೆರ್ನೆ ಜನಾರ್ಧನ ಆಚಾರ್ಯ (71) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಈ ನಡುವೆ ಹೃದಯಾಘಾತಗೊಂಡು ಕಾಸರಗೋಡು ಸೇರಿದಂತೆ ವಿವಿಧ ಕಡೆಗಳ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಬೆಳಗ್ಗೆ 7.03 ಗಂಟೆಗೆ ಪೆರಿಯಾರಂ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಬಡಗಿ ವೃತ್ತಿ ಮಾಡುತ್ತಿದ್ದರು. ಮೃತರು ದಿ. ಕೇಶವ ಆಚಾರ್ಯ - ದಿ. ಸರಸ್ವತಿ ದಂಪತಿಗಳ ಪುತ್ರನಾಗಿದ್ದು, ಪತ್ನಿ: ಲಲಿತಾ, ಮಕ್ಕಳಾದ: ಚಿತ್ರಲೇಖ, ವಿಜಯಲಕ್ಷ್ಮೀ, ಗಣೇಶ, ಮೋಹನ, ಭವ್ಯ ಶ್ರೀ, ಅಳಿಯಂದಿರಾದ: ಅಶೋಕ ಆಚಾರ್ಯ ಮೀಪುಗುರಿ, ಪುರೋಹಿತ ಕುಡಾಲ್ ದೇವಿಪ್ರಸಾದ್ ಶರ್ಮಾ ಮಂಜೇಶ್ವರ (ಪಾಲಕ್ಕಾಡ್), ಮಹೇಶ್ ಆಚಾರ್ಯ ಪುತ್ತೂರು, ಸೊಸೆಯಂದಿರಾದ: ಅನಿತಾ, ದಿವ್ಯಶ್ರೀ ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಮೃತದೇಹವನ್ನು 10.00 ಗಂಟೆಗೆ ಮನೆಗೆ ತರಲಾಗುವುದು. ಬಳಿಕ ಅಂತ್ಯಕ್ರಿಯೆ ಅಪರಾಹ್ನದ ಒಳಗೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರ ನಿಧನಕ್ಕೆ: ಸಂತೋಷ್ ಆರ್ಟ್ಸ್ & ಸ್ಪೋರ್ಟ್ ಕ್ಲಬ್ ಸೀತಾಂಗೋಳಿ ಗಾಢವಾದ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.