Breaking Posts

6/trending/recent
Type Here to Get Search Results !

8:10:45

ಪಾವೂರು ಮುಡಿಮಾರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮ ದಿನಾಚರಣೆ.

ಪಾವೂರು ಮುಡಿಮಾರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜನ್ಮ ದಿನಾಚರಣೆ.
ಮಂಜೇಶ್ವರ: ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಮುಡಿಮಾರು ಪಾವೂರು ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ171 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗುರು ಪೂಜೆಯನ್ನು ಮುಡಿಮಾರ್ ಶ್ರೀ ಮಲರಾಯ ಗುಳಿಗ ದೈವಸ್ಥಾನದ ವಠಾರದಲ್ಲಿ ಏರ್ಪಡಿಸಲಾಗಿತ್ತು. ಈ ಸಭೆಗೆ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಜಿಲ್ಲಾಧ್ಯಕ್ಷರಾದ ಕೃಷ್ಣ ಶಿವ ಕೃಪರವರು ಉಪಸ್ಥಿತರಿದ್ದು, ಗುರುಗಳ ಸಂದೇಶಗಳನ್ನು ನೀಡಿದರು. ಅರಿಬೈಲು ಬರುವ ಜುಮಾದಿ ದೈವಸ್ಥಾನದ ಅರ್ಚಕರಾದ ಅರಸ ಪೂಜಾರಿ ಕುದುಕೋರಿ, ಮುಡಿಮಾರ್ ಮಲರಾಯ ಕ್ಷೇತ್ರದ ಅರ್ಚಕರಾದ ಚಂದ್ರಹಾಸ ಪೂಜಾರಿ ಮುಡಿಮಾರು, ಜಿಲ್ಲಾ ವೇದಿಕೆ ಉಪಾಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಬಡಾಜೆ, ಕೋಶಾಧಿಕಾರಿ ರವೀಂದ್ರ ಪೂಜಾರಿ ಭಂಡಾರ ಮನೆ ಕಡಂಬಾರು, ಮುಂಡಪ್ಪ ಪೂಜಾರಿ ಕೆದುಂಬಾಡಿ, ಶಶಿಕಲಾ ಉದಯಕುಮಾರ್ ಅಳಪೆ, ಅಲ್ಲದೆ ವೇದಿಕೆಯ ನವೀನ್ ಮುಡಿಮಾರು, ಉಮೇಶ್ ಸುವರ್ಣ ಮುಡಿಮಾರ್, ಮುಂತಾದವರು ಉಪಸ್ಥಿತರಿದ್ದರು. ವೇದಿಕೆ ಅಧ್ಯಕ್ಷರಾದ ರವಿ ಮುಡಿಮಾರ್ ಸ್ವಾಗತಿಸಿ, ಮಾಧವ ಪೂಜಾರಿ ಕುದುಕೋರಿ ಧನ್ಯವಾದ ಅರ್ಪಿಸಿದರು. ನಂತರ ಲಘು ಉಪಹಾರ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.