Breaking Posts

6/trending/recent
Type Here to Get Search Results !

8:10:45

ಆನೆಕಲ್ಲು ಸಂತಾನ ಗೋಪಾಲಕೃಷ್ಣ ದೇವಸ್ಥಾನದ "ವೈಷ್ಣವಿ ಸದನ" ಹಾಗೂ "ವೆಂಕಟೇಶ ವೈಭವ" ಉದ್ಘಾಟನೆ.

ಆನೆಕಲ್ಲು ಸಂತಾನ ಗೋಪಾಲಕೃಷ್ಣ ದೇವಸ್ಥಾನದ "ವೈಷ್ಣವಿ ಸದನ" ಹಾಗೂ "ವೆಂಕಟೇಶ ವೈಭವ" ಉದ್ಘಾಟನೆ.
ಆನೆಕಲ್ಲು: ಗಳಿಸಿದ ಸಂಪತ್ತನ್ನು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿ ಸಮಾಜಕ್ಕೆ ಕೊಡುವ ಸೇವಾ ಮನೋಭಾವದಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಆನೆಕಲ್ಲು ಸಂತಾನ ಗೋಪಾಲಕೃಷ್ಣ ದೇವಸ್ಥಾನದ "ವೈಷ್ಣವಿ ಸದನ" ವನ್ನು ಉದ್ಘಾಟಿಸಿ ಆಶೀರ್ವಚನವಿತ್ತರು.
ಇವರು ಕೊಣಿಬೈಲು ಮಲ್ಲಿಕಾ‌ ಆರ್ ಚೌಟ ಉಳಿಪಾಡಿ ಗುತ್ತು ನಿರ್ಮಿಸಿಕೊಟ್ಟ "ವೆಂಕಟೇಶ ವೈಭವ" ಹಾಗೂ ಆಸ್ಟ್ರೇಲಿಯಾದ ನ್ಯೂಜರ್ಸಿಯ ಡಾ. ಬೆಳ್ಳೆ ದಿನಕರ ರೈ ಹಾಗೂ ಶಕೀಲಾ ಡಿ ರೈ ಉಳಿಪಾಡಿಗುತ್ತು ದಂಪತಿಗಳು ನಿರ್ಮಿಸಿಕೊಟ್ಟ "ಶ್ರೀ ವೈಷ್ಣವಿ ಸದನ" ದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬದಿಯಡ್ಕ ಉದ್ಯಮಿ ವಸಂತ ಪೈ ವಹಿಸಿದ್ದರು. ಬ್ರಹ್ಮಶ್ರೀ ದಿನೇಶ್ ಕೃಷ್ಣ ತಂತ್ರಿ ವರ್ಕಾಡಿ ಕುಶಲಕುಮಾರ ಪಾತ್ರ ಮಹಲಿಂಗೇಶ್ವರ ಭಟ್ಟ ಬಾರೇ ಸಿಂಧರ್ಗ ವಿಷ್ಣು ಪ್ರಸಾದ್ ಭಟ್ ಪದ್ಮ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು. ಕೊಣಿಬೈಲು ಮಲ್ಲಿಕಾ. ಆರ್ ಚೌಟ, ಗೌರವ ಉಪಸ್ಥಿತರಿದ್ದರು‌. ವಿಶ್ವ ಹಿಂದೂ ಪರಿಷತ್ತಿನ ಮೀರಾ ಆಳ್ವ ಧಾರ್ಮಿಕ ಭಾಷಣ ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳದ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಉಮಾಶಂಕರ್ ಶೇನವ ಉಳಿಪಾಡಿಗುತ್ತು. ಡಾ. ಮದನ್ ಮೋಹನ್ ನಾಯಕ್ ಅಡೇಕಳ, ಅನಿಲ್ ಕುಮಾರ್ ಹೆಗ್ಡೆ ನ್ಯೂಜರ್ಸಿ ಅಮೇರಿಕಾ, ಪ್ರಭಾಕರ್ ಶೆಟ್ಟಿ ಅಳಕೆ ಮಂಗಳೂರು ರಾಜೇಂದ್ರ ಶೆಟ್ಟಿ ಕೊಣಿಬೈಲು, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ , ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಎಂಎಲ್, ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಮತಾ ಶೆಟ್ಟಿ, ರೇಣುಕಾ ವಿ, ಕೃಷ್ಣ ನಾಯಕ್ ಸೊಡಂಕೂರು, ಅಭಿಷೇಕ್ ಶೆಟ್ಟಿ ಕೊಣಿಬೈಲು, ಉಪಸ್ಥಿತರಿದ್ದರು.ಶಿವಪ್ರಸಾದ್ ಶೆಟ್ಟಿ ಅನೆಯಾಲ ಗುತ್ತು ಸ್ವಾಗತಿಸಿ ಎನ್. ಟಿ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲೋಕೇಶ್ ರೈ ಕರ್ಪಿಕಾರ್ ರೇಣುಕಾ ಕಣಯೂರು ನಿರೂಪಿಸಿದರು. ವೆಂಕಟ್ ರಾಜ ರೈ ನಾಣಿಲ್ತಡಿ, ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿನೇಶ್ ಕೋಡಪದವು ಬಳಗದಿಂದ ಚಂದ್ರಾವಳಿ ವಿಳಾಸ ಎಂಬ ಯಕ್ಷಗಾನ ಬಯಲಾಟ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.