Breaking Posts

6/trending/recent
Type Here to Get Search Results !

8:10:45

ದೈಗೋಳಿಯಲ್ಲಿ 44 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ 27 ರಂದು.

ದೈಗೋಳಿಯಲ್ಲಿ 44 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ 27 ರಂದು.
ಮಂಜೇಶ್ವರ: ಜ್ಞಾನೋದಯ ಸಮಾಜ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದೈಗೋಳಿಯ ಆಶ್ರಯದಲ್ಲಿ 44 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವವು ವೇ. ಮೂ. ಕುರಿಯ ರಾಮ ಮೂರ್ತಿಯವರ ಪೌರೋಹಿತ್ಯದಲ್ಲಿ ದೈಗೋಳಿ ಶ್ರೀ ಗಣೇಶ ಮಂದಿರದಲ್ಲಿ ಆಗಸ್ಟ್ 27 ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.ಬೆಳಗ್ಗೆ 8. 30 ಗಂಟೆಗೆ ಗಣಪತಿ ವಿಗ್ರಹ ಪ್ರತಿಷ್ಠಾಪನೆ,ಮಹಾಗಣಪತಿ ಹೋಮ, ಭಕ್ತಿ ಗೀತೆ ಮತ್ತು ಛದ್ಮ ವೇಷ ಸ್ವರ್ಧೆ ಗಳು, ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಭಗವದ್ಗೀತೆ ಪಾರಾಯಣ, ದೈಗೋಳಿ ಶ್ರೀ ರಾಮಕೃಷ್ಣ ಭಜನಾ ಮಂಡಳಿಯವರಿಂದ ಭಜನೆ ನಂತರ ಶ್ರೀ ಸಂತಾನ ಗೋಪಾಲಕೃಷ್ಣ ಭಜನಾ ತಂಡ ಆನೇಕಲ್ಲು ಛತ್ರ ಇವರಿಂದ ಕುಣಿತ ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಅಪರಾಹ್ನ ಗಂಟೆ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶಿವಂ ಡಾನ್ಸ್ ಅಕಾಡಾಮಿ ವಿಟ್ಲ ಇವರಿಂದ ನೃತ್ಯ ಸಂಭ್ರಮ ಜರಗಲಿದೆ. ಸಂಜೆ 4 ರಿಂದ ಸಭಾ ಕಾರ್ಯಕ್ರಮಜರಗಲಿದ್ದು, ದಾನಿಗಳ ಸ್ಮರಣೆ, ಬಹುಮಾನ ವಿತರಣೆ, ಸಹಾಯಹಸ್ತ ವಿತರಣೆ, ಅತ್ಯುತ್ತಮ ಅಂಗನವಾಡಿ ಟೀಚರ್ ರಾಜ್ಯ ಪ್ರಶಸ್ತಿ ಪಡೆದ ಶ್ರೀಮತಿ ವಿಶಾಲಾಕ್ಷೀ ಪೂಂಜಾ ಅಡೆಕಳಕಟ್ಟೆ ರವರಿಗೆ ಗೌರವಾರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ಮಹಾಮಂಗಳಾರತಿ ನಂತರ ಶೋಭಾಯಾತ್ರೆ ಆರಂಭವಾಗಿ ಶ್ರೀ ಗಣೇಶ ಭಕ್ತ ವ್ರoದ ಕಣಿಯೂರುರವರ ಸಂಪೂರ್ಣ ಸಹಕಾರದಿಂದ ಕಣಿಯೂರುನಲ್ಲಿ ಶ್ರೀ ಗಣೇಶ ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.