ಛಾಯಾಗ್ರಹಣ ಸ್ಪರ್ಧೆಯಲ್ಲಿ ದಯಾ ಕುಕ್ಕಾಜೆ ಅವರಿಗೆ ರಾಷ್ಟ್ರ ಪ್ರಶಸ್ತಿ.
ಫೆಬ್ರವರಿ 20, 2025
0
ಛಾಯಾಗ್ರಹಣ ಸ್ಪರ್ಧೆಯಲ್ಲಿ ದಯಾ ಕುಕ್ಕಾಜೆ ಅವರಿಗೆ ರಾಷ್ಟ್ರ ಪ್ರಶಸ್ತಿ.
ಮಂಗಳೂರು: ಡಬಲ್ ಪಿಕ್ಸೆಲ್ ನ್ಯಾಶನಲ್ ಸಲೋನ್ 2025 ಆಯೋಜಿಸಿದ ಛಾಯಾಗ್ರಹಣ ಮತ್ತು ಸ್ಪರ್ಧೆಯಲ್ಲಿ ಖ್ಯಾತ ಛಾಯಾಗ್ರಾಹಕ ದಯಾನಂದ ಕುಕ್ಕಾಜೆ ಅವರು ಸೆರೆ ಹಿಡಿದ ಫೋಟೋಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಫೊಟೋ ಜರ್ನಲಿಸಂ ವಿಭಾಗದಲ್ಲಿ ಹೆಲ್ಪ್ ಲೆಸ್ ಹ್ಯಾಂಡ್ ಶೀರ್ಷಿಕೆಯಡಿ ಸೆರೆ ಹಿಡಿದ ಛಾಯಾಗ್ರಹಣಕ್ಕೆ ಪಿ ಎಂ ಪಿ ಸಿಲ್ವರ್ ಅವಾರ್ಡ್ ಹಾಗೂ ಓಪನ್ ಮೊನೋಕ್ರೋಮ್ ವಿಭಾಗದಲ್ಲಿ ಬ್ರೈಟ್ ಪ್ಯೂಚರ್ ಶೀರ್ಷಿಕೆಯಡಿ ಸೆರೆಹಿಡಿದ ಛಾಯಾಗ್ರಹಣವು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ. ದಯಾನಂದ ಕುಕ್ಕಾಜೆಯವರು ಮಂಗಳೂರಿನ ಪ್ರಸಿದ್ಧ ಹಿರಿಯ ಛಾಯಾಗ್ರಾಹಕರಾಗಿದ್ದು, ಈ ಹಿಂದೆಯೂ ಹಲವಾರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಕಳೆದ ೨೩ ವರ್ಷಗಳಿಂದ ದಾಯ್ಜಿ ವರ್ಲ್ಡ್ ಸಂಸ್ಥೆಯಲ್ಲಿ ಫೋಟೋ ಜರ್ನಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಕುಕ್ಕಾಜೆ ನಿವಾಸಿ ಎಂ.ಕೆ ಕುಕ್ಕಾಜೆ - ಶ್ರೀಮತಿ ಉಮಾವತಿ ದಂಪತಿಗಳ ಪುತ್ರನಾಗಿದ್ದು, ಪತ್ನಿ ಶ್ರೀಮತಿ ಪ್ರತಿಭಾ ಪುತ್ರ ಆರ್ಯನ್ ಜೊತೆ ಸುಖೀ ಜೀವನ ಸಾಗಿಸುತ್ತಿದ್ದಾರೆ.
