Breaking Posts

6/trending/recent
Type Here to Get Search Results !

8:10:45

ಮೊನ್ನೆ ರಾತ್ರಿ ಊಟ ಮಾಡಿ ಮನೆಯಿಂದ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಇಂದು ಅಪರಾಹ್ನ ಮನೆ ಸಮೀಪ ಕೆರೆಯಲ್ಲಿ ಪತ್ತೆ.

ಮೊನ್ನೆ ರಾತ್ರಿ ಊಟ ಮಾಡಿ ಮನೆಯಿಂದ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಮನೆ ಸಮೀಪ ಕೆರೆಯಲ್ಲಿ ಇಂದು ಅಪರಾಹ್ನ ಪತ್ತೆ.
ಮಂಜೇಶ್ವರ: ವರ್ಕಾಡಿ ನಾವಡ್ರಬೈಲು ನಿವಾಸಿ, ಕೃಷಿಕರಾದ ಕ್ಷೇವಿಯರ್ ಡಿ' ಸೋಜಾ (65) ಮೊನ್ನೆ ಬುಧವಾರ ರಾತ್ರಿ 9.00 ಗಂಟೆಗೆ ಊಟ ಮಾಡಿ ಮನೆಯಿಂದ ಹೊರ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದರು.
ಹುಡುಕಾಟ ಮುಂದುವರಿಯುತ್ತಿದ್ದಂತೆ ಇಂದು ಅಪರಾಹ್ನ12.00 ಗಂಟೆಗೆ ಮೃತದೇಹ ಮನೆಯಿಂದ 200 ಮೀಟರ್ ದೂರದಲ್ಲಿರುವ ಸಂಬಂಧಿಕರ ತೋಟದಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಹಾಗೂ ಮನೆಯವರು ಇಂದು ವಿವಿಧ ಕಡೆಗಳಲ್ಲಿ ಹುಡುಕಾಟದಲ್ಲಿ ತೊಡಗಿದ್ದರು.
ಈ ನಡುವೆ ತೋಟದಲ್ಲಿರುವ ಕೆರೆಯಲ್ಲಿ ಮರದ ದೊಂಟಿ ಹಾಕಿ ಹುಡುಕಾಡಿದಾಗ ಮೃತದೇಹ ಮೇಲೆ ಬಂದಿದೆ. ಕೂಡಲೇ ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿದ್ದು, ಮಂಗಲ್ಪಾಡಿಯ ಸರಕಾರಿ ಆಸ್ಪತ್ರೆಗೆ ಶವ ಮಹಜರು ನಡೆಸಲು ಸಾಗಿಸಿದರು. ಕ್ಷೇವಿಯರ್ ಡಿ' ಸೋಜಾ ರವರು ಮೊನ್ನೆ ರಾತ್ರಿ ಊಟ ಮಾಡಿ ಮನೆಯಿಂದ ಹೊರಗೆ ಹೋದವರು ಹೊತ್ತು ಕಳೆದರೂ ಮನೆಯೊಳಗೆ ಬಾರದ ಹಿನ್ನಲೆಯಲ್ಲಿ ಮನೆ ಮಂದಿ ಹಾಗೂ ನೆರೆಕರೆಯವರು ಮೊನ್ನೆಯಿಂದಲೇ ಹುಡುಕಾಟದಲ್ಲಿ ತೊಡಗಿದ್ದರು. ಈ ಬಗ್ಗೆ ಪುತ್ರ ಚೇತನ್ ನೆವಿಲ್ ಡಿ' ಸೋಜಾ ನಿನ್ನೆ ಬೆಳಗ್ಗೆ ಮಂಜೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಕ್ಷೇವಿಯಾರ್ ಡಿ ' ಸೋಜಾರವರು ಅಲ್ಪ ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂದು ಮನೆ ಮಂದಿ ತಿಳಿಸಿದ್ದಾರೆ. ಮೃತರು ಪತ್ನಿ: ಮೆಟಿಲ್ಡ ಡಿ'ಸೋಜಾ, ಮಕ್ಕಳಾದ: ಜೋಯೆಲ್ ನೆವಿಲ್ ಡಿ' ಸೋಜಾ, ಚೇತನ್ ನೆವಿಲ್ ಡಿ' ಸೋಜಾ, ಸಹೋದರರಾದ: ಸೈಮನ್ ಡಿ' ಸೋಜಾ, ಸಲ್ವದರ್ ಡಿ' ಸೋಜಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.