ಹೊಸಂಗಡಿಯ ಬಿ. ಯಂ. ರಾಮಯ್ಯ ಶೆಟ್ಟಿ ಗ್ರಂಥಾಲಯದಲ್ಲಿ "ವಾಚನ ಪಾಕ್ಷಾಚರಣೆ" ಯ ಭಾಗವಾಗಿ ಮಾದಕ ವಸ್ತು ವಿರೋಧಿ ದಿನಾಚಾರಣೆ.
ಜೂನ್ 27, 2024
0
ಹೊಸಂಗಡಿಯ ಬಿ. ಯಂ. ರಾಮಯ್ಯ ಶೆಟ್ಟಿ ಗ್ರಂಥಾಲಯದಲ್ಲಿ "ವಾಚನ ಪಾಕ್ಷಾಚರಣೆ" ಯ ಭಾಗವಾಗಿ ಮಾದಕ ವಸ್ತು ವಿರೋಧಿ ದಿನಾಚಾರಣೆ.
ಮಂಜೇಶ್ವರ: ಹೊಸಂಗಡಿಯ ಬಿ. ಯಂ. ರಾಮಯ್ಯ ಶೆಟ್ಟಿ ಗ್ರಂಥಾಲಯದ "ವಾಚನ ಪಾಕ್ಷಾಚರಣೆ" ಯ ಭಾಗವಾಗಿ ಮಾದಕ ವಸ್ತು ವಿರೋಧಿ ದಿನಾಚಾರಣೆಯು ಲೈಬ್ರೆರಿ ಪರಿಸರದಲ್ಲಿ ಜರಗಿತು. ಲೈಬ್ರರಿ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ ಯವರ ಅಧ್ಯಕ್ಷತೆ ಯಲ್ಲಿ, ಶ್ರೀ ವಿನಾಯಕ ಮಾಸ್ತರ್ ರವರು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ಲಸ್ ಟು ಮತ್ತು ಎಸ್. ಎಸ್.ಎಲ್. ಸಿ ಯಲ್ಲಿ ಉತ್ತಮ ಶ್ರೇಣಿ ಯಲ್ಲಿ ಉತ್ತೀರ್ಣರಾದ ಮಕ್ಕಳನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.. ಶ್ರೀ ವಿಶ್ವನಾಥ ಕುದುರು, ಅಡ್ವಕೇಟ್ ಶ್ರೀ ಶೆರಿನ್, ಶ್ರೀಮತಿ ಶೈನಿ ಶುಭಾಶಂಸನೆ ಗೈದರು. ಆರಂಭದಲ್ಲಿ ಶ್ರೀ ಜಯಂತ ಮಾಸ್ತರ್ ಸ್ವಾಗತಿಸಿ ಕೊನೆಯಲ್ಲಿ ಶ್ರೀ ಕೆ. ಕರುಣಾಕರ ಶೆಟ್ಟಿ ವಂದಿಸಿದರು.



