Breaking Posts

6/trending/recent
Type Here to Get Search Results !

8:10:45

ಪಾತೂರಿನಲ್ಲಿ IUML ವತಿಯಿಂದ ಚೆರ್ಕಳಂ ಅಬ್ದುಲ್ಲ ಹಾಗೂ P.B ಅಬ್ದುಲ್ ರಝಾಕ್ ಅನುಸ್ಮರಣೆ.

ಪಾತೂರಿನಲ್ಲಿ IUML ವತಿಯಿಂದ ಚೆರ್ಕಳಂ ಅಬ್ದುಲ್ಲ ಹಾಗೂ P.B ಅಬ್ದುಲ್ ರಝಾಕ್ ಅನುಸ್ಮರಣೆ.
ವರ್ಕಾಡಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಾತೂರು ಶಾಖೆಯ ವತಿಯಿಂದ ಮುಸ್ಲಿಂ ಲೀಗ್ ನೇತಾರರು ಹಾಗೂ ಮಂಜೇಶ್ವರ ಮಾಜಿ ಶಾಸಕರಾದ ಚೆರ್ಕಳ ಅಬ್ದುಲ್ಲ , ಪಿ.ಬಿ. ಅಬ್ದುಲ್‌ ರಝಾಕ್ ಅನುಸ್ಮರಣೆ ಹಾಗೂ ನೂತನವಾಗಿ ಆರಂಭಿಸಿರುವ ಪಕ್ಷದ ಕಛೇರಿಯ ಉದ್ಘಾಟನೆ ಪಾತೂರಿನಲ್ಲಿ ಜರಗಿತು. ಖಾಝಿ P.M ಅಹ್ಮದ್ ಮುಸ್ಲಿಯಾರ್ ಪ್ರಾರ್ಥಿಸಿದರು.
IUML ರಾಜ್ಯ ಸಮಿತಿ ಕೌನ್ಸಿಲ್ ಸದಸ್ಯ ಪಿ.ಬಿ.ಅಬೂಬ್ಬಕರ್ ಪಾತೂರು ಉದ್ಘಾಟಿಸಿದರು. ಯೂತ್ ಲೀಗ್ ನೇತಾರ ಝಬೈರ್ ಮಾಸ್ಟರ್ ಮುಖ್ಯ ಪ್ರಭಾಷಣಗೈದರು.
ನೇತಾರರಾದ T.M ಮೂಸಾ ಕುಂಞ ಹಾಜಿ ತೋಕೆ, K ಮಹಮ್ಮದ್ ಪಾವೂರು, ಉಮರಬ್ಬ ಆನೆಕಲ್ಲು, ಅಹಮದ್ ಕುಂಞ ಕಜೆ, ಅಹಮ್ಮದ್ ಹಾಜಿ ಕಲ್ಲರ್ಕಟ್ಟೆ, K ಹಸನ್ ಕುಂಞ, ಅಬ್ದುಲ್ಲ ಬಹರೈನ್, ಮಾಹಿನ್ ಕುಂಞ, E M ಇಬ್ರಾಹಿಂ,P K ಮೊಯಿದಿನ್ ಕುಂಞ, ಮೊಯಿದಿನ್ ಕುಂಞ ನಂದ್ರಬೈಲ್, T ಮಹಮ್ಮದ್ ತಲಕ್ಕಿ, NM ರಝಾಕ್ ಹಾಗೂ ವಾರ್ಡ್ ಸದಸ್ಯರಾದ B.A ಅಬ್ದುಲ್ ಮಜೀದ್ ಮಾತನಾಡಿದ್ದರು. N.M ಮೊಯಿದಿನ್ ಕುಂಞ ಅಧ್ಯಕ್ಷತೆ ವಹಿಸಿದ್ದರು. P. B.A ಕರೀಂ ಸ್ವಾಗತಿಸಿ, ಕರೀಂ ಪಚ್ಚಾರ್ ಧನ್ಯವಾದಗೈದರು.
ಯೂತ್ ಲೀಗ್ ನ ಯುವ ಜನ ರಾಲಿಯ ರಿಜಿಸ್ಟ್ರೇಶನ್ ಸವಾದ್ ಬದಿಮಾಲೆಯನ್ನು ಮಾಡುವ ಮೂಲಕ ಚಾಲನೆ ನೀಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.