ಶೌರ್ಯ ವಿಪತ್ತು ನಿರ್ವಹಣಾ ಕುಂಬಳೆ ಘಟಕ ಹಾಗೂ ಊರ ಹತ್ತು ಸಮಸ್ತರ ಯೋಜನೆಯಲ್ಲಿ ಕಿದೂರಿನಲ್ಲಿ ಸಾರ್ವಜನಿಕ ಬಸ್ಸು ತಂಗುದಾಣ ಲೋಕಾರ್ಪಣೆ.
ನವೆಂಬರ್ 12, 2023
0
ಶೌರ್ಯ ವಿಪತ್ತು ನಿರ್ವಹಣಾ ಕುಂಬಳೆ ಘಟಕ ಹಾಗೂ ಊರ ಹತ್ತು ಸಮಸ್ತರ ಯೋಜನೆಯಲ್ಲಿ ಕಿದೂರಿನಲ್ಲಿ ಸಾರ್ವಜನಿಕ ಬಸ್ಸು ತಂಗುದಾಣ ಲೋಕಾರ್ಪಣೆ.
ಕುಂಬಳೆ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ಇದರ ಆಶ್ರಯದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಕುಂಬಳೆ ಘಟಕ ಹಾಗೂ ಊರ ಹತ್ತು ಸಮಸ್ತರ ಯೋಜನೆಯಲ್ಲಿ ಕಿದೂರಿನಲ್ಲಿ ಸಾರ್ವಜನಿಕ ಬಸ್ಸು ತಂಗುದಾಣವನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಜಿ ಅಧ್ಯಕ್ಷರಾದ ಅಶ್ವತ್ ಪೂಜಾರಿ ಲಾಲ್ ಭಾಗ್ ರಿಬ್ಬನ್ ಕತ್ತರಿಸುವ ಮೂಲಕ ಹಾಗೂ ಕಿದೂರು ಶ್ರೀ ಮಹಾದೇವ ದೇವಸ್ಥಾನದ ಗುರಿಕಾರಾದ ಮಹಾಲಿಂಗ ಭಟ್ ಮಾಳಿಗೆ ಮನೆ ದಿವ್ಯ ಹಸ್ತದಿಂದ ದೀಪ ಬೆಳಗಿಸುವ ಮೂಲಕ ಲೋಕಾರ್ಪಣೆ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕುಂಬಳೆ ಗ್ರಾಮ ಪಂಚಾಯತ್ ಸದಸ್ಯೆ ಪುಷ್ಪಲತಾ ಪಿ.ಶೆಟ್ಟಿ, ಕ್ಯಾಂಪ್ಕೋ ನಿರ್ದೇಶಕರಾದ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಕುಂಬಳೆ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಮಂಜುನಾಥ ಆಳ್ವ ಮಡ್ವ, ಮಾಜಿ ಪಂಚಾಯತ್ ಸದಸ್ಯ ಸುಕೇಶ್ ಭಂಡಾರಿ, ಜನಜಾಗೃತಿ ಸಮಿತಿ ಕುಂಬಳೆ ವಲಯ ಅಧ್ಯಕ್ಷ ಮಹೇಶ್ ಪುಣಿಯೂರು, ಶೌರ್ಯ ತಂಡದ ನಾಯಕ ಸುರೇಂದ್ರ, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ರಮೇಶ್, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಮೋನಪ್ಪ, ಮಹಾಲಿಂಗ ಮೂಲ್ಯ ಚಕ್ಯೋಡಿ, ಮತ್ತು ಸಂಜೀವ ಪೂಜಾರಿರವರನ್ನು ಗೌರವಿಸಲಾಯಿತು. ನವ ಜೀವನ ಸಮಿತಿ ಕುಂಬಳೆ ವಲಯ ಕೋಶಾಧಿಕಾರಿ ನಾರಾಯಣ ಕುಲಾಲ್ ಕಳತ್ತೂರು ಸ್ವಾಗತಿಸಿ, ಸತೀಶ್ ತಿರ್ತೋಡಿ ನಿರೂಪಿಸಿ,
ಸರೀತಾ ಶ್ರೀ ನಗರ ವಂದಿಸಿದರು.



