ಮಂಜೇಶ್ವರ ಸಂಧ್ಯಾ ಗ್ಯಾರೇಜ್ ಬಳಿ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಬೈಕ್ ಸ್ಕಿಡ್. ಹಿಂದಿನಿಂದ ಬರುತ್ತಿದ್ದ ಲಾರಿ ಹರಿದು ಸವಾರ ಸಾವು.
ನವೆಂಬರ್ 12, 2023
0
ಮಂಜೇಶ್ವರ ಸಂಧ್ಯಾ ಗ್ಯಾರೇಜ್ ಬಳಿ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಬೈಕ್ ಸ್ಕಿಡ್. ಹಿಂದಿನಿಂದ ಬರುತ್ತಿದ್ದ ಲಾರಿ ಹರಿದು ಸವಾರ ಸಾವು.
ಮಂಜೇಶ್ವರ : ಪಟ್ಪಥ ರಸ್ತೆಯ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದರೂ ಗುತ್ತಿಗೆದಾರನ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ ಸಾವುಗಳು ಹೆಚ್ಚುತ್ತಲೇ ಇದೆ. ನಿನ್ನೆ ಸಂಜೆ 6 ಗಂಟೆಯ ಸುಮಾರಿಗೆ ಮಂಜೇಶ್ವರ ಸಂಧ್ಯಾ ಗ್ಯಾರೇಜ್ ರಾ.ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ರಸ್ತೆ ಹಾಗೂ ಚರಂಡಿ ಸಮತಟ್ಟಾಗಿ ಇಲ್ಲದ ಕಾರಣ ಬೈಕೊಂದು ಮಗುಚಿ ಬಿದ್ದಾಗ ಹಿಂಬದಿಯಿಂದ ಬರುತಿದ್ದ ಲಾರಿ ಬಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರನ ಮೇಲೆ ಹರಿದು ಸಾವು ಸಂಭವಿಸಿದ್ದು, ಮಂಜೇಶ್ವರ ಹೊಸಬೆಟ್ಟು ನಿವಾಸಿ ಅಬ್ದುಲ್ ಖಾದರ್ (52) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಮಂಜೇಶ್ವರ ಹೊಸಬೆಟ್ಟು ಕಡಪ್ಪರ ನಿವಾಸಿ ದಿ. ಮೊಹಮ್ಮದ್ ಕುಂಞಿ ರ ಪುತ್ರರಾಗಿರುವ ಅಬ್ದುಲ್ ಖಾದರ್ ಪತ್ನಿ: ಜೌರ, ಮಕ್ಕಳಾದ: ಶಬೀರ್, ಖದೀಜಾ ಫಾತಿಮಾ, ರಿಲ, ಲೌನ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ತನ್ನ ಬೈಕ್ ಗೆ ಪೆಟ್ರೋಲ್ ಹಾಕಲೆಂದು ಮಂಜೇಶ್ವರದಿಂದ ಪೋಸೋಟ್ ಪೆಟ್ರೋಲ್ ಪಂಪ್ ಗೆ ತೆರಳುವ ವೇಳೆ ಈ ದುರ್ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ದಿವಸಕ್ಕೆ ಮುಂಚೆ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರ ಅನಾಸ್ಥೆಯಿಂದ ಕಾಲೇಜು ವಿದ್ಯಾರ್ಥಿ ಯೊಬ್ಬ ಸಾವನ್ನಪ್ಪಿದ್ದನ್ನು ಕೂಡಾ ಇಲ್ಲಿ ಸ್ಮರಿಸಬಹುದಾಗಿದೆ.

