ಬಿ.ಎಡ್ ಪದವಿ ಪರೀಕ್ಷೆ: ಮಂಜೇಶ್ವರ ಉದ್ಯಾವರದ ಹೀನ ಖದೀಜ ಖದೀಜಳಿಗೆ ದ್ವೀತಿಯ ರ್ಯಾಂಕ್.
ನವೆಂಬರ್ 12, 2023
0
ಬಿ.ಎಡ್ ಪದವಿ ಪರೀಕ್ಷೆ: ಮಂಜೇಶ್ವರ ಉದ್ಯಾವರದ ಹೀನ ಖದೀಜ ಖದೀಜಳಿಗೆ ದ್ವೀತಿಯ ರ್ಯಾಂಕ್.
ಮಂಜೇಶ್ವರ: ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯದ 2022 - 2023 ರ ಸಾಲಿನ 2023 ಜುಲೈ ನಲ್ಲಿ ನಡೆದ ಬಿ ಎಡ್ ಪದವಿಯ ಅಂತಿಮ ಪರೀಕ್ಷೆಯಲ್ಲಿ ಎಂ ಇ ಎಸ್ ಟೈನಿಂಗ್ ಕಾಲೇಜು ಎಡತ್ತಲ ದ ವಿದ್ಯಾರ್ಥಿನಿ ಹಾಗೂ ಮಂಜೇಶ್ವರ ಉದ್ಯಾವರ ನಿವಾಸಿ ಅಬ್ದುಲ್ ಹಮೀದ್ ಹಾಗೂ ಪೌಝಿಯ ದಂಪತಿಗಳ ಪುತ್ರಿ ಹಾಗೂ ಮೊಹಮ್ಮದ್ ಮಿಗ್ದಾದ್ ಎಂಬವರ ಪತ್ನಿ ಹೀನ ಖದೀಜ ದ್ವೀತಿಯ ರ್ಯಾಂಕ್ ಪಡೆದು ರಾಜ್ಯಕ್ಕೆ ಮಾದರಿಯಾಗಿದ್ದಾಳೆ. ಕುಂಜತ್ತೂರು ಸರಕಾರಿ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರ್ತಿಗೊಳಿಸಿ ಬಂಗ್ರಮಂಜೇಶ್ವರ ಹೈಯರ್ ಸೆಕಂಡರಿ ಶಾಲೆಯಲ್ಲಿ ಪಿ.ಯು. ಸಿ ಪೂರ್ಣಗೊಳಿಸಿ ಸ್ಟೆಂಟ್ ಆಗ್ನೇಸ್ ಕಾಲೇಜಿನಲ್ಲಿ ಬಿಎಸ್ಸಿ ಪೂರ್ಣಗೊಳಿಸಿ. ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾಳೆ.
