ಪುತ್ತೂರು ಹಾರಾಡಿ, ನಗರ ನಿವಾಸಿಯೂ, ಬೀರಮಲೆ ಶ್ರೀ ವಿಶ್ವಕರ್ಮ ಸಮಾಜ ಸಭಾದ ಮಾಜಿ ಅಧ್ಯಕ್ಷ ಬಿ.ಎಂ ಗಣೇಶ ಆಚಾರ್ಯರ ಧರ್ಮಪತ್ನಿ ಶಾರದ (65) ಅಲ್ಪ ಕಾಲದ ಅಸೌಖ್ಯದಿಂದ ನಿಧನ.
ನವೆಂಬರ್ 06, 2023
0
ಪುತ್ತೂರು ಹಾರಾಡಿ, ನಗರ ನಿವಾಸಿಯೂ, ಬೀರಮಲೆ ಶ್ರೀ ವಿಶ್ವಕರ್ಮ ಸಮಾಜ ಸಭಾದ ಮಾಜಿ ಅಧ್ಯಕ್ಷ ಬಿ.ಎಂ ಗಣೇಶ ಆಚಾರ್ಯರ ಧರ್ಮಪತ್ನಿ ಶಾರದ (65) ಅಲ್ಪ ಕಾಲದ ಅಸೌಖ್ಯದಿಂದ ನಿಧನ.
ಪುತ್ತೂರು: ಮೂಲತಃ ಮುಳ್ಳೇರಿಯಾ ಮಾಕೂರು ನಿವಾಸಿಯೂ, ಪ್ರಸ್ತುತ ಪುತ್ತೂರಿನ ಹಾರಾಡಿ ನಗರದಲ್ಲಿ ವಾಸಿಸುತ್ತಿರುವ, ಬೀರಮಲೆ ಶ್ರೀ ವಿಶ್ವಕರ್ಮ ಸಮಾಜ ಸಭಾದ ಮಾಜಿ ಅಧ್ಯಕ್ಷರಾದ ಬಿ.ಎಂ ಗಣೇಶ ಆಚಾರ್ಯರ ಧರ್ಮಪತ್ನಿ ಶಾರದ (65) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಬೆಳಿಗ್ಗೆ ನಿಧನರಾದರು. ಮೃತರು ಮಕ್ಕಳಾದ: ವಿಶ್ವೇಶ್ವರ ಆಚಾರ್ಯ, ಕಿರಣ ಆಚಾರ್ಯ, ಭಾರತಿ, ಅಳಿಯ: ನಳಿನಚಂದ್ರ ಆಚಾರ್ಯ ಕುಬಣೂರು ಉಪ್ಪಳ, ಸೊಸೆಯಂದಿರಾದ: ವಾಣಿ, ವಿದ್ಯಾ, ಸಹೋದರರಾದ: ದೇವದಾಸ್ ಆಚಾರ್ಯ ಬನ್ನೂರು, ರಾಮದಾಸ್ ಆಚಾರ್ಯ ಹಾರಾಡಿ, ಗೋಕುಲದಾಸ್ ಆಚಾರ್ಯ ಸುಳ್ಯ, ವಿಠಲದಾಸ್ ಆಚಾರ್ಯ ಹಾರಾಡಿ, ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಮೃತ ದೇಹವನ್ನು ಇಂದು ಮಧ್ಯಾಹ್ನ 1:00 ಗಂಟೆಗೆ ಮನೆಗೆ ತರಲಾಗುವುದು. ಬಳಿಕ ಸಂಜೆ 3.30 ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗದ ಸಾರ್ವಜನಿಕ ಹಿಂದು ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಮೃತರ ನಿಧನಕ್ಕೆ ಶ್ರೀ ವಿಶ್ವಕರ್ಮ ಮಂದಿರ ಬೀರಮಲೆ ಪುತ್ತೂರು, ಪುತ್ತೂರಿನ ವಿಶ್ವಕರ್ಮ ಸಮಾಜ ಬಾಂಧವರು ಗಾಢವಾದ ಸಂತಾಪ ಸೂಚಿಸಿದ್ದಾರೆ.

