ಮಂಜೇಶ್ವರ ಮಂಡಲ ಕಾಂಗ್ರೆಸ್ ಅಧ್ಯಕ್ಷರಾಗಿ ಅಹ್ಮದ್ ಮನ್ಸೂರ್ ಪದಗ್ರಹಣ.
ನವೆಂಬರ್ 06, 2023
0
ಮಂಜೇಶ್ವರ ಮಂಡಲ ಕಾಂಗ್ರೆಸ್ ಅಧ್ಯಕ್ಷರಾಗಿ ಅಹ್ಮದ್ ಮನ್ಸೂರ್ ಪದಗ್ರಹಣ.
ಮಂಜೇಶ್ವರ: ಇಂಡಿಯನ್ ನೇಶನಲ್ ಕಾಂಗ್ರೆಸ್ ಮಂಜೇಶ್ವರ ಮಂಡಲ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ.ಪಿ.ಸಿ ಸಿಯಿಂದ ನೇಮಕಾತಿಗೊಂಡ ಅಹ್ಮದ್ ಮನ್ಸೂರ್ ರವರ ಅಧಿಕಾರ ಪದಗ್ರಹಣ ಸಮಾರಂಭ ಹೊಸಂಗಡಿಯಲ್ಲಿ ಜರುಗಿತು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ ಪ್ರಭಾಕರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶಾಲು ಹೊದೆಸಿ, ಪೇಟ ತೊಡಿಸಿ ಅಧಿಕಾರ ಹಸ್ತಾಂತರಿಸಿದರು. ಹಿರಿಯ ಕಾಂಗ್ರೆಸ್ ನೇತಾರ ಮಾಧವ ಕುಂಜತ್ತೂರು ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಇರ್ಷಾದ್ ಮಂಜೇಶ್ವರ ಸ್ವಾಗತಿಸಿದರು. ಕಾಸರಗೋಡು ಜಿ.ಪಂ.ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಯೂತ್ ಕಾಂಗ್ರೆಸ್ ಮಾಜೀ ಜಿಲ್ಲಾಧ್ಯಕ್ಷ ಸಾಜಿದ್ ಮವ್ವಾಲ್, ವರ್ಕಾಡಿ ಗ್ರಾ.ಪಂ.ಸದಸ್ಯ ಉಮ್ಮರ್ ಬೋರ್ಕಳ, ಸೇವಾದಳ ಜಿಲ್ಲಾ ಉಪಾಧ್ಯಕ್ಷ ಓಂ ಕೃಷ್ಣ, ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಆರಿಫ್ ಮಚ್ಚಂಪಾಡಿ,ಖಲೀಲ್ ಬಜಾಲ್, ಜಗದೀಶ್ ಮೂಡಂಬೈಲು, ಅಝೀಝ್ ಕಲ್ಲೂರು, ಮೆಹಮೂದ್ ಕೆದುಂಬಾಡಿ, ಡಿಕೆಡಿಎಫ್ ಬ್ಲಾಕ್ ಅಧ್ಯಕ್ಷ ಹಮೀದ್ ಕಣಿಯೂರು, ಹಮೀದ್ ಹೊಸಂಗಡಿ, ಐಎನ್ ಟಿಯುಸಿ ಅಧ್ಯಕ್ಷ ಯಾಕೂಬ್ ಕೋಡಿ, ಟಿ.ಎ.ಸಿದ್ದೀಕ್. ದೀಕ್ಷಿತ್ ಕೋಟ್ಯಾನ್, ಮುಸ್ತಫಾ ಮಂಜೇಶ್ವರ, ಫಾರೂಕ್ ಮಂಜೇಶ್ವರ, ಮುಂತಾದವರು ಉಪಸ್ಥಿತರಿದ್ದರು.




