ಫಿಸಿಯೋಥೆರಪಿ ರಂಗದಲ್ಲಿ ಅನನ್ಯ ಸಾಧನೆ : ಡಾ.ರಮ್ಶಿ ರಮಿನ್.
ನವೆಂಬರ್ 03, 2023
0
ಫಿಸಿಯೋಥೆರಪಿ ರಂಗದಲ್ಲಿ ಅನನ್ಯ ಸಾಧನೆ : ಡಾ.ರಮ್ಶಿ ರಮಿನ್.
ಮಂಗಳೂರು : ವೈದ್ಯಕೀಯ ರಂಗದಲ್ಲಿ ಅತೀ ಪ್ರಧಾನವಾದ ಫಿಸಿಯೋಥೆರಫಿ ವಿಭಾಗದಲ್ಲಿ ಅತ್ಯಾಧುನಿಕ ಆವಿಷ್ಕಾರಗಳೊಂದಿಗೆ ಮಂಗಳೂರಿನ ಯುವ ವೈದ್ಯೆ ಗಮನ ಸೆಳೆಯುತ್ತಿದ್ದಾರೆ. ಮಂಗಳೂರಿನಲ್ಲಿ ಕಳೆದ 5 ವರ್ಷಗಳಿಂದ ಕ್ಲಿನಿಕ್ ಹೊಂದಿರುವ ಡಾ.ರಮ್ಶಿ ರಮಿನ್ 5000 ಮಿಕ್ಕಿದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಫಿಸಿಯೋಥೆರಫಿಯ ಅತ್ಯಾಧುನಿಕ ಯಂತ್ರಗಳು ಈ ಯುವ ವೈದ್ಯೆಯ ಕ್ಲಿನಿಕ್ ನಲ್ಲಿ ಅಳವಡಿಸಲಾಗಿದೆ. ಮಂಗಳೂರಿನ ಹೈಲಾಂಡ್ ಆಸ್ಪತ್ರೆ ಸಮೀಪದ ಮಿಲೇನಿಯಂ ಟವರ್ ನಲ್ಲಿ 'ಹೀಲಿಂಗ್ ಟಚ್' ಫಿಸಿಯೋಥೆರಪಿ ಸೆಂಟರನ್ನು ಮುನ್ನಡೆಸುತ್ತಿರುವ ಡಾ.ರಮ್ಶಿ ರಮಿನ್ ಆಕ್ಯುಪಂಕ್ಚರ್, ಹಿಜಾಮ ಥೆರಪಿ, ಕಪ್ಲಿಂಗ್, ಸೂಜಿ ಚುಚ್ಚುವಿಕೆ, ಬೆನ್ನೆಲುಬು ನೀವಿಕೆ, ಫಿಟ್ನೆಸ್ ತರಬೇತಿ, ಅಂಗಾಂಗ ಚಿಕಿತ್ಸೆಗಳು ಇಲ್ಲಿ ಲಭ್ಯವಿದೆ. ಕೆಲವು ನಿರ್ದಿಷ್ಟ ಚಿಕಿತ್ಸೆಗಳಿಗೆ ಡಾ.ರಮ್ಶಿ ರಮಿನ್ ಗೆ ಅಂತಾರಾಷ್ಟ್ರೀಯ ಮಾನ್ಯತೆಯೂ ದೊರೆತಿದೆ. ಈ ಯುವ ಮತ್ತು ಅತ್ಯಂತ ಪ್ರತಿಭಾವಂತ ಮಹಿಳಾ ಚಿಕಿತ್ಸಕಿ ಎಲ್ಲಾ ಬೆನ್ನುಮೂಳೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣತಿ ಹೊಂದಿದ್ದಾರೆ. ಸಾವಿರಾರು ರೋಗಿಗಳು ಈ ವೈದ್ಯೆಯ ಬಳಿ ತೆರಳಿ ಶಸ್ತ್ರಕ್ರಿಯೆ ಇಲ್ಲದೆ ಗುಣಮುಖರಾಗಿದ್ದಾರೆ. ತೀವ್ರ ಮತ್ತು ದೀರ್ಘಕಾಲದ ರೋಗಗಳಿಗೆ ಶಸ್ತ್ರಚಿಕಿತ್ಸೆ ರಹಿತ ಮತ್ತು ಔಷಧ ರಹಿತ ಚಿಕಿತ್ಸೆಗಳನ್ನು ಇವರು ಒದಗಿಸುತ್ತಾರೆ. ಈ ಯುವ ವೈದ್ಯೆಯ ಅಪರಿಮಿತ ಸಾಧನೆಯನ್ನು ಪರಿಗಣಿಸಿ ಇತ್ತೀಚೆಗೆ ಮಂಗಳೂರಿನ ಟಿಎಂಎ ಪೈ ಹಾಲ್ ನಲ್ಲಿ ಜರುಗಿದ ರಾಷ್ಟ್ರೀಯ ಫಿಸೆಯೋಥೆರಪಿ ಸಮಾವೇಶದಲ್ಲಿ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಸಾಧನೆಯ ಹಾದಿಯಲ್ಲಿ ಉತ್ತುಂಗಕ್ಕೇರುತ್ತಿರುವ ಡಾ.ರಮ್ಶಿರಮಿನ್ ಫಿಸಿಯೋಥೆರಪಿ ರಂಗದಲ್ಲಿ ಅನನ್ಯ ಸಾಧನೆಗೈಯ್ಯುತ್ತಿರುವ ಅದ್ಭುತ ಪ್ರತಿಭೆ.




