ದೀಪಾವಳಿ ಹಾಗೂ ತುಳಸಿ ಪೂಜೆಯ ಸಂಭ್ರಮವನ್ನು ಇಮ್ಮಡಿಗೊಳಿಸಲು ಗುಣಮಟ್ಟದ ಹಸಿರು ಪಟಾಕಿಯೊಂದಿಗೆ ಕಾರ್ಕಳದ "ಅಜೆಕಾರು ಫಯರ್ ವರ್ಕ್ಸ್."
ನವೆಂಬರ್ 13, 2023
0
ದೀಪಾವಳಿ ಹಾಗೂ ತುಳಸಿ ಪೂಜೆಯ ಸಂಭ್ರಮವನ್ನು ಇಮ್ಮಡಿಗೊಳಿಸಲು ಗುಣಮಟ್ಟದ ಹಸಿರು ಪಟಾಕಿಯೊಂದಿಗೆ ಕಾರ್ಕಳದ "ಅಜೆಕಾರು ಫಯರ್ ವರ್ಕ್ಸ್."
ಕಾರ್ಕಳ: ಈ ಬಾರಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಜನತೆ ಆಚರಿಸುತ್ತಿದ್ದು, ವಿವಿಧೆಡೆ ಪಟಾಕಿ ಮಾರಾಟ ಮಳಿಗೆಗಳು ತಲೆ ಎತ್ತಿವೆ. ಸರಕಾರ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದ್ದು, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಅತ್ಯುತ್ತಮ ಗುಣಮಟ್ಟದ ಹಸಿರು ಪಟಾಕಿಯೊಂದಿಗೆ, ಈ ಬಾರಿ ರಜತ ಮಹೋತ್ಸವವನ್ನು ಆಚರಿಸುತ್ತಿರುವ ಕಾರ್ಕಳದ "ಅಜೆಕಾರು ಫಯರ್ ವರ್ಕ್ಸ್" ಕಾರ್ಕಳ, ಕಾಪು, ಪಡುಬಿದ್ರೆ ಮುಂತಾದ ಕಡೆಗಳಲ್ಲಿ ಸ್ಟಾಲ್ ಗಳನ್ನು ತೆರೆದು ಕಾರ್ಯಾಚರಿಸುತ್ತಿದೆ. ಇವರು ಗ್ರಾಹಕರಿಗೆ ಅತ್ಯುತ್ತಮವಾದ ಆಕರ್ಷಕ ರೀತಿಯ, ಮನ ಮುದಗೊಳಿಸುವ ಪಟಾಕಿಗಳನ್ನ ಕಡಿಮೆ ದರದಲ್ಲಿ ವಿತರಿಸುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಕಾರ್ಕಳ, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯಲ್ಲಿ ಕ್ಷೇತ್ರಗಳ ಬ್ರಹ್ಮಕಲಶ, ವಾರ್ಷಿಕ ಜಾತ್ರಾ ಮಹೋತ್ಸವ, ಬೆಡಿ ಮಹೋತ್ಸವ, ಯಕ್ಷಗಾನ, ಕೋಲ, ನೇಮ, ನಾಗ ಮಂಡಲ, ಮೆರವಣಿಗೆ, ಶೋಭಾಯಾತ್ರೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ, ಶ್ರದ್ದಾ ಭಕ್ತಿಯಿಂದ ಪಟಾಕಿ ಸಿಡಿಸಿ, ದೇವರ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಕಾರ್ಕಳ ಅಜೆಕಾರಿನ ಕೆ. ಮೊಹಮ್ಮದ್ ರವರು. ಪರಂಪರೆಯ ಬೆಡಿ ತಯಾರಿ ಹಾಗೂ ಸಿಡಿಸುವ ಕಾಯಕದಿಂದ ಬಂದ ಈ ಕಸುಬು ಇಂದು ಕೇರಳ, ಕರ್ನಾಟಕ ಹಾಗೂ ಬೆಂಗಳೂರು ಭಾಗಕ್ಕೂ ವಿಸ್ತರಿಸಿದೆ ಎನ್ನುತ್ತಾರೆ ಕೆ. ಮೊಹಮ್ಮದ್ ರ ಪುತ್ರ ಇಮ್ತಿಯಾಜ್ ಅಜೆಕಾರ್ ರವರು. ಕಾರ್ಕಳ ಅಜೆಕಾರು ನಿವಾಸಿಯಾಗಿದ್ದರೂ, ವರ್ಷದ 365 ದಿನಗಳಲ್ಲಿ ಪಟಾಕಿ ತಯಾರಿಕೆ ಹಾಗೂ ಮಾರಾಟಗಳಲ್ಲಿ ನಿತ್ಯ ಕಾರ್ಯವೆಸಗುವವರಾಗಿದ್ದಾರೆ. ದೀಪಾವಳಿ ಸಮಯದಲ್ಲಿ ಕಾರ್ಕಳ, ಕಾಪು, ಮೂಡಬಿದ್ರೆ ಯಲ್ಲಿ ಪಟಾಕಿ ಸ್ಟಾಲ್ ಗಳನ್ನು ಇರಿಸಿ, ಗ್ರಾಹಕರಿಗೆ ಅನುಕೂಲವಾಗಿ ರಖಂ ಹಾಗೂ ಚಿಲ್ಲರೆ ರೀತಿಯ ದರಯಲ್ಲಿ ಪಟಾಕಿ ವಿತರಿಸುತ್ತಿದ್ದಾರೆ. ಹಸಿರು ಪಟಾಕಿಗೆ ಈ ಭಾರಿ ಬೇಡಿಕೆ ಇರುವ ಕಾರಣ ದೀಪಾವಳಿ ಎರಡನೇ ದಿನವಾದ ಇಂದು ತಾವು ತೆರೆದಿರುವ ಸ್ಟ್ಲಾಲ್ ಗಳಲ್ಲಿ ಬೆಳಗ್ಗಿನಿಂದಲೇ ಭರ್ಜರಿ ವ್ಯಾಪಾರ ನಡೆಯುತ್ತಿದೆ ಎಂದು ಇಮ್ತಿಯಾಜ್ ತಿಳಿಸಿದ್ದಾರೆ. ಇಂದು ಹಾಗೂ ನಾಳೆ ಮತ್ತು 24 ರಂದು ತುಳಸಿ ಪೂಜೆ ದಿನ ತಮ್ಮ ಸ್ಟಾಲ್ ಗಳು ಕಾರ್ಯಾಚರಿಸುತ್ತಿವೆ. ಊರ ಪರವೂರಿನ ಆತ್ಮೀಯರು ಮುಂಗಡವಾಗಿ ತಿಳಿಸಿದ ಕಾರಣ ಅವರಿಗೆ ತಲುಪಿಸುವ ವ್ಯವಸ್ಥೆಯನ್ನು ಕೂಡಾ ಮಾಡಿದ್ದಾರೆ. ಈ ಬಾರಿ ಸರಕಾರ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿದ ಕಾರಣ, ವಿಶೇಷವಾಗಿ ಹಸಿರು ಪಟಾಕಿಯ ಗಿಫ್ಟ್ ಬಾಕ್ಸ್ ತಯಾರಿಸಿದ್ದಾರೆ. ಗ್ರಾಹಕರಿಗೆ ಕಡಿಮೆ ದರಗಳಲ್ಲಿ ವಿವಿಧ ನಮೂನೆಯ ಪಟಾಕಿಯನ್ನು ಒಳಗೊಂಡಿದೆ ಈ ಗಿಫ್ಟ್ ಬಾಕ್ಸ್. ಒಂದು ಗಿಫ್ಟ್ ಬಾಕ್ಸ್ ನಲ್ಲಿ ಪ್ರತ್ಯೇಕವಾಗಿ 25, 30, 40, 45 ಪಟಾಕಿಗಳಿವೆ ಇದು ಅಪಾಯಕಾರಿ ರಹಿತವಾಗಿದ್ದು, ಮಕ್ಕಳಿಗೆ, ವೃದ್ಧರಿಗೆ ಮನೋರಂಜನೆ ಹಾಗೂ ಸಂತಸವನ್ನು ನೀಡುವಂತಹ ಆಕರ್ಷಕ ಪಟಾಕಿಗಳನ್ನು ಗಿಫ್ಟ್ ಬಾಕ್ಸ್ ನಲ್ಲಿ ನೀಡುತ್ತಿದ್ದೇವೆ ಎಂದು ಇಮ್ತಿಯಾಜ್ ತಿಳಿಸಿದ್ದಾರೆ. ಕಾಸರಗೋಡು, ಪುತ್ತೂರು, ಮಂಗಳೂರು, ಉಡುಪಿ, ಕೊಡಗು, ಮುಂತಾದ ಕಡೆಗಳಿಗೆ ಬೇಕಾದಲ್ಲಿ ಅದಕ್ಕಾಗಿ ಪ್ರತ್ಯೇಕವಾಗಿ ತಲುಪಿಸುವ ವ್ಯವಸ್ಥೆಯನ್ನು ಕೂಡಾ ಮಾಡಿದ್ದಾರೆ. ರಿಯಾಯಿತಿ ಹಾಗೂ ರಖಂ ದರದಲ್ಲಿ ಪಟಾಕಿ ಬೇಕಿದ್ದಲ್ಲಿ ಇಮ್ತಿಯಾಜ್ ಅಜೆಕಾರ್ ರವರ +919845889181 ಜಂಗಮ ವಾಣಿ ಸಂಖ್ಯೆಗೆ ಸಂಪರ್ಕಿಸ ಬಹುದಾಗಿದೆ. ಈ ಬಾರಿ ದೀಪಾವಳಿ ಹಾಗೂ ತುಳಸಿ ಪೂಜೆಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸುವುದರೊಂದಿಗೆ ಅಪಾಯಕಾರಿ ರಹಿತ ಹಸಿರು ಪಟಾಕಿ ಸಿಡಿಸಿ, ಸಂಭ್ರಮಿಸಿ ಎಂಬುದೇ ನಮ್ಮ ಮಂಜೇಶ್ವರ ಚಾನೆಲ್ ನ ಆಶಯ.





