ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನ, ಗಣಿತ, ವೃತ್ತಿಪರಿಚಯ ಮೇಳ. ಶ್ರೀ ಶಾರದಾ ಎ. ಎಲ್. ಪಿ ಕನಿಯಾಲ ಶಾಲೆಯು ಗಣಿತ ವಿಭಾಗದಲ್ಲಿ ಸಮಗ್ರ ನಾಲ್ಕನೇ ಸ್ಥಾನ.
ನವೆಂಬರ್ 04, 2023
0
ಮಂಜೇಶ್ವರ: 2023 - 24 ನೇ ಶೈಕ್ಷಣಿಕ ವರ್ಷದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನ, ಗಣಿತ, ವೃತ್ತಿಪರಿಚಯ ಮೇಳಗಳಲ್ಲಿ ಶ್ರೀ ಶಾರದಾ ಎ. ಎಲ್. ಪಿ ಕನಿಯಾಲ ಶಾಲೆಯು ಗಣಿತ ವಿಭಾಗದಲ್ಲಿ ಸಮಗ್ರ ನಾಲ್ಕನೇ ಸ್ಥಾನ ಗಳಿಸಿದೆ. ಗಣಿತ ವಿಭಾಗದ ಜಿಯೋ ಮೆಟ್ರಿಕ್ ಚಾರ್ಟನಲ್ಲಿ A ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ ರಹಫ ಫಾತಿಮ, ಗಣಿತ ಪಝಲ್ ನಲ್ಲಿ A ಗ್ರೇಡ್ ನೊಂದಿಗೆ ತೃತೀಯ ಸ್ಥಾನ ಪಡೆದ ಮುಹಮ್ಮದ್ ಅಸ್ಬಾಹ್, ನಂಬರ್ ಚಾರ್ಟ್ ನಲ್ಲಿ B ಗ್ರೇಡ್ ಪಡೆದ ಅಚಿಂತ್ಯ.ಎ, ವಿಜ್ಞಾನ ಮೇಳದಲ್ಲಿ ಸರಳ ಪ್ರಯೋಗ ಹಾಗೂ ಸೈನ್ಸ್ ಚಾರ್ಟ್ ನಲ್ಲಿ A ಗ್ರೇಡ್ ಪಡೆದ ಅದ್ವೈತ್ ರಾಜ್.ಪಿ.ಆರ್, ಮನ್ವಿತ.ಕೆ, ಪ್ರಖ್ಯಾತ್, ಸ್ಕಂದ ನಾಯಕ್, ವೃತ್ತಿ ಪರಿಚಯ ಮೇಳದ ಅಗರಬತ್ತಿ ನಿರ್ಮಾಣ, ಬೀಡ್ಸ್ ವರ್ಕ್, ಕ್ಲೇ ಮೋಡೆಲ್, ವೇಸ್ಟ್ ಮೆಟೀರಿಯಲ್ ಪ್ರೋಡಕ್ಟ್ ನಲ್ಲಿ A ಗ್ರೇಡ್ ಪಡೆದ ಅನ್ಶಿ, ಫಾತಿಮಾ ಅಸ್ಲಹ, ಧನುಶ್ರೀ, ಫಾತಿಮಾ ಲಾಮಿಯ, ಫೇಬ್ರಿಕ್ ಪೈಂಟ್ ಹಾಗೂ ಪೇಪರ್ ಕ್ರಾಫ್ಟ್ ನಲ್ಲಿ B ಗ್ರೇಡ್ ಪಡೆದ ಆರಾಧ್ಯ.ಸಿ.ಯಚ್ ಮತ್ತು ಆಯಿಶಾ ನಾಮಿಯ ಇವರು ಈ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಾಗಿರುತ್ತಾರೆ.






