ವರ್ಕಾಡಿ ಸೇವಾ ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಬಿಜೆಪಿ ಜೊತೆ ಬಹಿರಂಗ ಒಪ್ಪಂದ ಮಾಡಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರಾಭವಕ್ಕೆ ಕಾರಣರಾದ ಹರ್ಷಾದ್ ವರ್ಕಾಡಿ ಹಾಗೂ ಇತರರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಶೋಕಾಸ್ ನೋಟೀಸ್ ನೀಡಲಾಗಿದೆಯೆಂಬ ವರದಿಗಳಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸೋಮಪ್ಪರ ಸ್ಪಷ್ಟೀಕರಣ.
ಅಕ್ಟೋಬರ್ 12, 2023
0

ವರ್ಕಾಡಿ: ಪಕ್ಷದ ಸೈದ್ಧಾಂತಿಕ ವಿರೋಧಿ ಬಿಜೆಪಿ ಜೊತೆ ಸೇರಿ ಯಾವುದೇ ಅಧಿಕಾರ ಸ್ಥಾನ ಪಡೆಯುವುದಕ್ಕಿಂತ ಧೈರ್ಯದಿಂದ ಹೋರಾಡಿ ಸೋಲುವುದರಲ್ಲಿ ಕಾಂಗ್ರೆಸ್ ಗೆ ಹೆಮ್ಮೆಯಿದೆ. ದೇಶದ ಜಾತ್ಯತೀತ ಸ್ವಭಾವ ಹಾಗೂ ಸಾಂಸ್ಕೃತಿಕ ಹಿರಿಮೆಗಳನ್ನು ನಾಶಪಡಿಸಿ, ದ್ವೇಷ, ಹಿಂಸೆ, ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಪಕ್ಷ ಇತರ ಸಮಾನ ಮನಸ್ಕ ಪಕ್ಷಗಳನ್ನು ಸೇರಿಸಿ ಇಂಡಿಯಾ ಒಕ್ಕೂಟವನ್ನು ರೂಪಿಸಿದೆ. ಈ ಒಕ್ಕೂಟದ ನೇತೃತ್ವ ವಹಿಸಿರುವ ಶ್ರೀ ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿ ಬಿಜೆಪಿ ಜೊತೆ ಸೇರುವವರು ಕಾಂಗ್ರೆಸಿಗರೇ ಅಲ್ಲ . ಶ್ರೀ ಹರ್ಷದ್ ವರ್ಕಾಡಿ ಹಾಗೂ ಸಂಗಡಿಗರ ಪಕ್ಷ ವಿರೋಧಿ ಚಟುವಟಿಕೆ ಹಾಗೂ ಆರೆಸ್ಸೆಸ್ ಪ್ರೇರಿತ ಬಿಜೆಪಿ- ಸಹಕಾರ ಭಾರತಿ ಜೊತೆಗಿನ ಒಡನಾಟ ವಿರುದ್ಧ ಪಕ್ಷದ ಅಭ್ಯರ್ಥಿಗಳು, ಕಾರ್ಯಕರ್ತರು ನಿರಂತರ ದೂರು ನೀಡಿದ ಹಿನ್ನೆಲೆಯಲ್ಲಿ ಶ್ರೀ ಹರ್ಷಾದ್ ವರ್ಕಾಡಿ ಹಾಗೂ ಸಂಗಡಿಗರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ. ಈ ಸಂಬಂಧ ತನಗೆ ಯಾವುದೇ ಶೋಕಾಸ್ ನೋಟೀಸ್ ಬಂದಿಲ್ಲ. ವ್ಯಕ್ತಿಗಳ ಮಾನಕ್ಕಿಂತ ಪಕ್ಷದ ಮಾನವೇ ಹಿರಿದಾದುದು ಎಂಬುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಪಕ್ಷದಿಂದ ಹೊರ ಹಾಕಿದ ಕ್ರಮಕ್ಕೆ ಕೆಪಿಸಿಸಿ ಅಂಗೀಕಾರ ಪಡೆಯಲಾಗುವುದು. ಯಾವುದೇ ಕಾರಣಕ್ಕೂ ಉಚ್ಛಾಟಿತರನ್ನು ಮರಳಿ ಸ್ವೀಕರಿಸುವುದೇ ಇಲ್ಲ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪಿ.ಸೋಮಪ್ಪ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.