Breaking Posts

6/trending/recent
Type Here to Get Search Results !

8:10:45

ಕೇರಳ ಸರಕಾರದ ದುರಾಡಳಿತದ ವಿರುದ್ಧ ಯು.ಡಿ.ಎಫ್ ಮಂಜೇಶ್ವರ ಪಂಚಾಯತ್ ಸಮಿತಿಯಿಂದ ಪಾದಯಾತ್ರೆ.

ಕೇರಳ ಸರಕಾರದ ದುರಾಡಳಿತದ ವಿರುದ್ಧ ಮಂಜೇಶ್ವರ ಪಂಚಾಯತ್ ಯು.ಡಿ.ಎಫ್ ಸಮಿತಿ ವತಿಯಿಂದ ಪಾದಯಾತ್ರೆ.
ಮಂಜೇಶ್ವರ: "ಪಡಿತರ ಅಂಗಡಿಯಿಂದ ಸೆಕ್ರೆಟರಿಯೇಟ್ ತನಕ ಎಂಬ ಪ್ರಮೇಯದೊಂದಿಗೆ ಕೇರಳ ಸರಕಾರದ ದುರಾಡಳಿತಕ್ಕೆದುರಾಗಿ ಕೇರಳ ರಾಜ್ಯ ಯು.ಡಿ.ಎಫ್ ಸಮಿತಿ ಈ ತಿಂಗಳ 18 ರಂದು ಅರ್ಧ ಲಕ್ಷ ಜನರ ಭಾಗವಹಿಸುವಿಕೆಯೊಂದಿಗೆ ನಡೆಸುವ ಸೆಕ್ರೆಟರಿಯೇಟ್ ಮುತ್ತಿಗೆಯ ಪ್ರಚಾರಾರ್ಥ ಮಂಜೇಶ್ವರ ಪಂಚಾಯತ್ ಯು.ಡಿ.ಎಫ್ ಸಮಿತಿ ಪಾದಯಾತ್ರೆಯನ್ನು ಆಯೋಜಿಸಿತು. ಅಂಗಡಿಪದವಿನಿಂದ ಆರಂಭಗೊಂಡು ಹೊಸಂಗಡಿ ಪೇಟೆಯಲ್ಲಿ ಮುಕ್ತಾಯಗೊಂಡ ಪಾದಯಾತ್ರೆಯಲ್ಲಿ ಸುಮಾರು 100ರಷ್ಟು ಯು.ಡಿ.ಎಫ್ ಕಾರ್ಯಕರ್ತರು ಪಾಲ್ಗೊಂಡರು. ಪಾದಯಾತ್ರೆಯ ಕೊನೆಯಲ್ಲಿ ನಡೆದ ಸಭೆಯನ್ನು
ನು ಯು.ಡಿ.ಎಫ್ ಮುಖಂಡ ಹಾಗೂ ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಕೋಶಾಧಿಕಾರಿ ಯು.ಕೆ. ಸೈಫುಲ್ಲ ತಂಗಲ್ ಉದ್ಘಾಟಿಸಿದರು. ಯು.ಡಿ.ಎಫ್ ಅಧ್ಯಕ್ಷ ಅಝೀಝ್ ಹಾಜಿ ಅಧ್ಯಕ್ಷತೆ ವಹಿಸಿದ್ದರು, ಯು.ಡಿ.ಎಫ್ ಮುಖಂಡರಾದ ರಂಜಿತ್ ಮಂಜೇಶ್ವರ, ಅಬ್ದುಲ್ಲಾ ಕಜೆ, ಐ.ಆರ್‌.ಡಿ.ಪಿ ಇಬ್ರಾಹಿಂ, ಮೊಯ್ದೀನ್ ಕುಂಞಿ ಪ್ರಿಯಾ, ಹನೀಫ್ ಕುಚಿಕ್ಕಾಡ್, ರಫೀಕ್ ಪಿರಾರ ಮೂಲೆ, ಕೆ.ಎಂ.ಕೆ.ಅಬ್ದುಲ್ ರಹಮಾನ್ ಹಾಜಿ, ಮುಬಾರಕ್ ಮಂಜೇಶ್ವರ ಮುಂತಾದವರು ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.