ಪ್ರತಿಷ್ಟಾಪನೆಗೊಂಡ ನವ ದುರ್ಗೆಯರು. ಸಂಭ್ರಮ ಸಡಗರದ ಮಂಗಳೂರು ದಸರಾಕ್ಕೆ ವಿದ್ಯುಕ್ತ ಚಾಲನೆ. ರಾತ್ರಿ ವೇಳೆ ಕುದ್ರೋಳಿ ಕ್ಷೇತ್ರ ಸೇರಿದಂತೆ ಮಂಗಳೂರು ಪೇಟೆ ಇಡೀ ವಿದ್ಯುತ್ ದೀಪಗಳಿಂದ ಜಲಕ್.
ಅಕ್ಟೋಬರ್ 16, 2023
0
ಪ್ರತಿಷ್ಟಾಪನೆಗೊಂಡ ನವ ದುರ್ಗೆಯರು. ಸಂಭ್ರಮ ಸಡಗರದ ಮಂಗಳೂರು ದಸರಾಕ್ಕೆ ವಿದ್ಯುಕ್ತ ಚಾಲನೆ. ರಾತ್ರಿ ವೇಳೆ ಕುದ್ರೋಳಿ ಕ್ಷೇತ್ರ ಸೇರಿದಂತೆ ಮಂಗಳೂರು ಪೇಟೆ ಇಡೀ ವಿದ್ಯುತ್ ದೀಪಗಳಿಂದ ಜಲಕ್.
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾದಲ್ಲಿ ಶ್ರೀ ಶಾರದಾ ಮಾತೆ ಸಹಿತ ನವದುರ್ಗೆಯರನ್ನು ಪ್ರತಿಷ್ಟಾಪಿಸಲಾಗಿದೆ. ಈಗಾಗಲೇ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಿದ್ದು, ಶ್ರೀ ದೇವರ ದರುಶನ ಪಡೆದು, ಪೂಜೆ ಪುನಸ್ಕಾರ ಸಲ್ಲಿಸಿ, ಪ್ರಸಾದ ಸ್ವೀಕರಿಸಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ, ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡು, ಕೃತರಾರ್ಥರಾಗುತ್ತಿದ್ದಾರೆ. ಸಂಜೆ ವೇಳೆ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿರುವ ಮಂಗಳೂರು ದಸರಾ ವೀಕ್ಷಿಸಲು ಜನಸ್ತೋಮವೇ ಹರಿದು ಬರುತ್ತಿದೆ.













