Breaking Posts

6/trending/recent
Type Here to Get Search Results !

8:10:45

ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ರ 54 ನೇ ಹುಟ್ಟು ಹಬ್ಬದದಂಗವಾಗಿ ವರ್ಕಾಡಿ ನಚ್ಚಪ್ಪದಾವು ಜನಶ್ರೀ, ಮೈತ್ರಿ ಜನಶ್ರೀ ಆಶ್ರಯದಲ್ಲಿ ನಚ್ಚಪದವು ಜಂಕ್ಷನ್ ನಲ್ಲಿ ಶ್ರಮದಾನ ಸ್ವಚ್ಛತಾ ಕಾರ್ಯಕ್ರಮ.

ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ರ 54 ನೇ ಹುಟ್ಟು ಹಬ್ಬದದಂಗವಾಗಿ ವರ್ಕಾಡಿ ನಚ್ಚಪ್ಪದಾವು ಜನಶ್ರೀ, ಮೈತ್ರಿ ಜನಶ್ರೀ ಆಶ್ರಯದಲ್ಲಿ ನಚ್ಚಪದವು ಜಂಕ್ಷನ್ ನಲ್ಲಿ ಶ್ರಮದಾನ ಸ್ವಚ್ಛತಾ ಕಾರ್ಯಕ್ರಮ.
ವರ್ಕಾಡಿ: ಕರ್ನಾಟಕ ರಾಜ್ಯ ವಿಧಾನಸಭಾ ಅಧ್ಯಕ್ಷರಾದ ಯು.ಟಿ ಖಾದರ್ ರವರ 54 ನೇ ಹುಟ್ಟು ಹಬ್ಬದಂಗವಾಗಿ ನಚ್ಚಪ್ಪದಾವು ಜನಶ್ರೀ, ಮೈತ್ರಿ ಜನಶ್ರೀ ಆಶ್ರಯದಲ್ಲಿ ವರ್ಕಾಡಿ ನಚ್ಚಪದವು ಜಂಕ್ಷನ್ ನಲ್ಲಿ ನಿನ್ನೆ ಶ್ರಮದಾನ ಮತ್ತು ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಲ್ಲೂರು ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಪಿ.ಎಂ.ಜೆ.ಎಫ್ ಲ| ಡಾ. ಇಬ್ರಾಹಿಂ ಕಲ್ಲೂರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಯು.ಟಿ ಖಾದರ್ ರ ಸರಳ ಜೀವನ ಇಂದಿನ ಯುವಕರಿಗೆ ಮಾದರಿ. ಒಂದು ಧರ್ಮದ ನಾಯಕನಲ್ಲದೆ, ಸದಾ ಹುಮ್ಮನ್ನಿಸಿನಿಂದ ಸರ್ವ ಧರ್ಮ ಸಮನ್ವಯಿಯಾಗಿ ಸಮಾಜದ ಎಲ್ಲಾ ಧರ್ಮದವರ ನಾಯಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಉನ್ನತ ಸ್ಥಾನ ಮತ್ತು ದೀರ್ಘ ಆಯುಷ್ಯ ಮತ್ತು ಆರೋಗ್ಯವನ್ನು ನೀಡಲಿ ಎಂದು ಪ್ರಾರ್ಥಿಸಿದರು. ನಚ್ಚಪದವು ಜನ ಶ್ರೀ ಅಧ್ಯಕ್ಷ ವಿಕ್ಟರ್ ವೇಗಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೈತ್ರಿ ಜನ ಶ್ರೀಯ ಕಾರ್ಯದರ್ಶಿ ಇಸ್ಮಾಯಿಲ್ ಕೆ.ಬಿ, ತಿಮ್ಮಪ್ಪ ಗಟ್ಟಿ, ಚೇತನ್ ಕುಮಾರ್ ಮೂರುಗೊಳಿ, ಶೇರಿಫ್ ಪಾವಳ, ಇಬ್ರಾಹಿಂ ಪಳನೀರ್, ಇಸ್ಮಾಯಿಲ್ ಪಿ.ಕೆ, ಮೊದಲಾದವರು ಉಪಸ್ಥಿತರಿದ್ದರು. ಬಳಿಕ
ನಚ್ಚಪದವುನಿಂದ ನಂದರಪಡ್ಪುವರೆಗೆ ಶ್ರಮದಾನ ನಡೆಯಿತು. 25 ಮಂದಿ ಶ್ರಮದಾನದಲ್ಲಿ ಭಾಗವಹಿಸಿದರು. ಶ್ರಮದಾನಿಗಳಿಗೆ ಇಬ್ರಾಹಿಂ ಹಾಜಿ ಕಲ್ಲೂರು ಉಪಹಾರದ ವ್ಯವಸ್ಥೆ ಮಾಡಿದರು. ಸಂಘಟಕ ಅಜೀಜ್ ಕಲ್ಲೂರು ಮಾತುಗಳನ್ನಾಡಿ ಯುಟಿ ಖಾದರ್ ರ ಪ್ರೇರಣೆಯಿಂದ ನಾನಿಂದು ಸಾಮಾಜಿಕ ಸೇವೆ ಹಾಗೂ ರಾಜಕೀಯದಲ್ಲಿ ತೊಡಗಲು ಕಾರಣ. ಅವರು ಪ್ರತಿಯೊಂದು ಧರ್ಮಗಳ ಜನತೆಯಲ್ಲಿ ಪ್ರೀತಿ, ವಿಶ್ವಾಸದ ನಡೆ ನುಡಿ ಆದರ್ಶಯುತವಾಗಿದ್ದು, ಇಂದು ಜನುಮ ದಿನದ ಸಮಯದಲ್ಲಿ ಅವರ ನೆನಪಲ್ಲಿ ನಾವಿಂದು ಶ್ರಮದಾನಿಗಳಾಗಿ ಸೇವೆ ಸಲ್ಲಿಸಿದ್ದೇವೆ ಎಂದು ತಮ್ಮ ಪ್ರಾಸ್ತಾವಿಕದಲ್ಲಿ ಮಾತನಾಡಿ ಸ್ವಾಗತಿಸಿದರು. ಜನ ಶ್ರೀ ಕಾರ್ಯದರ್ಶಿ ವಿಶ್ವನಾಥ ಕೂಟತ್ತಜೆ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.