Breaking Posts

6/trending/recent
Type Here to Get Search Results !

8:10:45

ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಸಾಲೆತ್ತೂರು ನಿವಾಸಿ ಷಷ್ಠೀಶ್ ಪಿ ಶೆಟ್ಟಿಗೆ ಪ್ರಶಸ್ತಿ.

ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಷಷ್ಠೀಶ್ ಪಿ ಶೆಟ್ಟಿಗೆ ಪ್ರಶಸ್ತಿ. ಮ
ಂಗಳೂರು: ಛತ್ತಿಸ್ ಗಡದಲ್ಲಿ ನಡೆದ ರಾಷ್ಟ್ರೀಯ ಮಟ್ಟದ 19 ರ ವಯೋಮಿತಿಯ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಸಾಲೆತ್ತೂರು ಗೌರಿಕೋಡಿ ನಿವಾಸಿ ಷಷ್ಠೀಶ್ ಪಿ ಶೆಟ್ಟಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಪ್ರಥಮ‌ ಸ್ಥಾನವನ್ನು ಪಡೆದಿದ್ದಾರೆ. ಇವರು ಮಂಗಳೂರಿನ ಪ್ರತಿಷ್ಠಿತ ಶಾರದಾ ಪಿ.ಯು. ಕಾಲೇಜ್ ನ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದಾರೆ. ವಾಲಿಬಾಲ್ ನಲ್ಲಿ ರಾಷ್ಟ್ರೀಯ ಮಟ್ಟದ ಸ್ಕೂಲ್ ಗೇಮ್ ಫೆಡರೇಶನ್ ಅಪ್ ಇಂಡಿಯಾ ಎಂಬ ಸಂಸ್ಥೆಗೆ ಆಯ್ಕೆಯಾಗಿದ್ದಾರೆ. ಇವರು ಸಾಲೆತ್ತೂರು ಗೌರಿಕೋಡಿ ನಿವಾಸಿ ಮಾಜಿ ಕಬ್ಬಡಿ ಹಾಗೂ ವಾಲಿಬಾಲ್ ಆಟಗಾರ ಪ್ರವೀಣ್ ಶೆಟ್ಟಿ ಮತ್ತು ಅಭಿಮತ ಟಿವಿ ಮಂಗಳೂರು ಇದರ ಆಡಳಿತ ಪಾಲುದಾರೆ ಮಮತಾ ಪಿ. ಶೆಟ್ಟಿ ದಂಪತಿಗಳ ಪುತ್ರರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.