ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ. ಬಿಜೆಪಿ ಮಂಜೇಶ್ವರ ಮಂಡಲಧ್ಯಕ್ಷರಾಗಿ ಆದರ್ಶ್ ಬಿ.ಎಂ ಪುನರ್ ಆಯ್ಕೆ.
ಅಕ್ಟೋಬರ್ 05, 2023
0
ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ. ಬಿಜೆಪಿ ಮಂಜೇಶ್ವರ ಮಂಡಲಧ್ಯಕ್ಷರಾಗಿ ಆದರ್ಶ್ ಬಿ.ಎಂ ಪುನರ್ ಆಯ್ಕೆ.
ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ನೂತನ ಪದಾಧಿಕಾರಿಗಳ ನೇಮಕವನ್ನು ಬಿಜೆಪಿ ಮಂಡಲಧ್ಯಕ್ಷ ಆದರ್ಶ್ ಬಿ.ಎಂ ಘೋಷಣೆ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷರಾದ ರವೀಶ ತಂತ್ರಿ ಕುಂಟಾರ್, ಬಿಜೆಪಿ ಮಂಜೇಶ್ವರ ಮಂಡಲ ಪ್ರಭಾರಿ ಸುಧಾಮ ಗೋಸಾಡ ಮಾರ್ಗದರ್ಶನದಲ್ಲಿ ನೇತಾರರಾದ ಮಣಿಕಂಠ ರೈ, ಎ.ಕೆ. ಕೈಯಾರ್, ಅಶ್ವಿನಿ ಎಂ.ಎಲ್ ಸೇರಿದ ಮಂಡಲ ಕೋರ್ ಸಭೆಯಲ್ಲಿ ನೇಮಕ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷರಾಗಿ: ಆದರ್ಶ ಬಿ.ಎಂ, ಪ್ರಧಾನ ಕಾರ್ಯದರ್ಶಿಗಳಾಗಿ: ಯತೀರಾಜ್ ಶೆಟ್ಟಿ ಕೆದುಂಬಾಡಿ, ರಾಧಾಕೃಷ್ಣ ಭಟ್, ಕೋಶಾಧಿಕಾರಿ: ಶಂಕರ ನಾರಾಯಣ ಮುಂದಿಲ, ಉಪಾಧ್ಯಕ್ಷರಾಗಿ: ಚಂದ್ರಹಾಸ ಪೂಜಾರಿ ಕಡಂಬಾರ್ ಭಂಡಾರ ಮನೆ, ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ, ಜಯಶ್ರೀ ಮಾಡ,
ಕಾರ್ಯದರ್ಶಿಗಳಾಗಿ: ತುಳಸಿ ಕುಮಾರಿ ವರ್ಕಾಡಿ, ಚಂದ್ರಾವತಿ ಬಾಯಾರ್, ಕೃಷ್ಣಪ್ಪ ಮಡಿಕ ವರ್ಕಾಡಿ, ಸೋಶಿಯಲ್ ಮೀಡಿಯಾ ಪ್ರಮುಖರಾಗಿ: ಪ್ರಶಾಂತ್ ಜೋಡುಕಲ್ಲು, ಸೇಲ್ ಕೋ - ಒರ್ಡಿನೇಟರ್ ರಾಗಿ: ಸಂತೋಷ್ ಶೆಟ್ಟಿ ದೈಗೋಳಿ, ಇವರುಗಳನ್ನು ನೂತನವಾಗಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ಮಂಡಲಧ್ಯಕ್ಷ ಆದರ್ಶ್ ಬಿ.ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



