Breaking Posts

6/trending/recent
Type Here to Get Search Results !

8:10:45

ಹೆದ್ದಾರಿ ದಾಟುವಾಗ ಕಾರು ಡಿಕ್ಕಿಯಾಗಿ ವಿದ್ಯಾರ್ಥಿ ಗಂಭೀರ ಗಾಯಗೊಂಡು ಸಾವಿಗೀಡಾದ ಪ್ರಕರಣ. ಸಂಜೆ ಶವವನ್ನು ರಸ್ತೆಯಲ್ಲಿಟ್ಟು ಹೆದ್ದಾರಿ ಅಧಿಕೃತರ ವಿರುದ್ಧ ಪ್ರತಿಭಟಿಸಿದ ನಾಗರೀಕರು

ಹೆದ್ದಾರಿ ದಾಟುವಾಗ ಕಾರು ಡಿಕ್ಕಿಯಾಗಿ ವಿದ್ಯಾರ್ಥಿ ಗಂಭೀರ ಗಾಯಗೊಂಡು ಸಾವಿಗೀಡಾದ ಪ್ರಕರಣ. ಸಂಜೆ ಶವವನ್ನು ರಸ್ತೆಯಲ್ಲಿಟ್ಟು ಹೆದ್ದಾರಿ ಅಧಿಕೃತರ ವಿರುದ್ಧ ಪ್ರತಿಭಟಿಸಿದ ನಾಗರೀಕರು.


ಮಂಜೇಶ್ವರ: ಉದ್ಯಾವರ ಮಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊನ್ನೆ ಸಂಜೆ ಅಮಿತ ವೇಗದಿಂದ ಬಂದ ಇನೋವಾ ಕಾರೊಂದು ರಸ್ತೆದಾಡುತ್ತಿದ್ದ ವಿದ್ಯಾರ್ಥಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಅವೈಜ್ಞಾನಿಕವಾದ ರೀತಿಯಲ್ಲಿ ಷಟ್ಪಥ ರಾ.ಹೆದ್ದಾರಿ ಕಾಮಗಾರಿ ಪೂರ್ತಿಗೊಳಿಸಿದ ಯು.ಎಲ್. ಸಿ. ಸಿ ಅಧಿಕೃತರ ವಿರುದ್ಧ ಜಾತಿ ಧರ್ಮವನ್ನು ಮರೆತು ಊರ ನಾಗರೀಕರು ರಸ್ತೆಯಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯ ಶವವನ್ನು ಇಟ್ಟು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಉದ್ಯಾವರ ಮಾಡ ಕೊಳಕೆ ಗುತ್ತು ನಿವಾಸಿ ರಘುಶಂಕರ ಆಳ್ವರ ಪುತ್ರ ಮಂಗಳೂರು ನಿಟ್ಟೆ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಮಂತ್ (17) ಸಾವನ್ನಪ್ಪಿದ ವಿದ್ಯಾರ್ಥಿ ಯಾಗಿದ್ದು, ಇಂದು ಅಪರಾಹ್ನ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಮನೆಗೆ ತರುವ ವೇಳೆ
ಉದ್ಯಾವರ ಮಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹವನ್ನು ಹೊಂದಿದ್ದ ಆಂಬುಲೆನ್ಸ್ ಸಮೇತ ನಾಗರಿಕರು ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಗುತ್ತಿಗೆದಾರರಾಗಿರುವ ಯು. ಎಲ್. ಸಿ.ಸಿ ಇಷ್ಟರ ತನಕ ಕಾಮಗಾರಿಯ ಡಿ. ಪಿ. ಆರ್ ಜನಪ್ರತಿನಿಧಿಗಳಿಗಾಗಲೀ ನಾಗರೀಕರು ಮಾಹಿತಿ ಹಕ್ಕು ಖಾಯಿದೆ ಪ್ರಕಾರ ಕೇಳಿದ ಅರ್ಜಿಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂಬುದಾಗಿ ಪ್ರತಿಭಟನಾ ನಿರತರು ಆರೋಪಿಸಿದರು. ಕೂಡಲೇ ತಲಪಾಡಿಯಿಂದ ತೊಡಗಿ ಚೆರ್ಕಳ ತನಕ ಎಲ್ಲಾ ಜಂಕ್ಷನ್ ಗಳಲ್ಲೂ ಫುಟ್ ಬ್ರಿಡ್ಜ್ ನಿರ್ಮಿಸಬೇಕು ಅದೇ ರೀತಿ ಪಾದಾಚಾರಿಗಳಿಗೆ ರಸ್ತೆ ದಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ನಾಗರೀಕರು ಆಗ್ರಹಿಸಿದ್ದಾರೆ. ಅಶ್ರಫ್ ಬಡಾಜೆ, ಜಬ್ಬಾರ್ ಪದವು, ಸಂಜೀವ ಶೆಟ್ಟಿ ಮಾಡ, ಹರೀಶ್ ಶೆಟ್ಟಿ ಮಾಡ, ಅಶ್ರಫ್ ಕುಂಜತ್ತೂರು, ಮುಸ್ತಫ ಉದ್ಯಾವರ, ಎಸ್. ಎಂ. ಬಶೀರ್ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.