Breaking Posts

6/trending/recent
Type Here to Get Search Results !

8:10:45

ಅಸೌಖ್ಯದಿಂದ ಬಳಲುತ್ತಿದ್ದ ಬಿಜೆಪಿ ಕಾರ್ಯಕರ್ತ, ಹೈನುಗಾರಿಕಾ ಕೃಷಿಕ ಪ್ರವೀಣ್ ಮಾನಿಂಜ (48) ನಿಧನ.

ಅಸೌಖ್ಯದಿಂದ ಬಳಲುತ್ತಿದ್ದ ಬಿಜೆಪಿ ಕಾರ್ಯಕರ್ತ, ಹೈನುಗಾರಿಕಾ ಕೃಷಿಕ ಪ್ರವೀಣ್ ಮಾನಿಂಜ (48) ನಿಧನ.
ಮಂಜೇಶ್ವರ: ಉದ್ಯಾವರ ಗುತ್ತು ಮಾನಿಂಜ ನಿವಾಸಿ ದಿ. ರಾಮ - ರೇವತಿ ದಂಪತಿಯ ಪುತ್ರ, ಹೈನುಗಾರಿಕೆ ಕೃಷಿಕ, ಬಿಜೆಪಿ ಸಕ್ರಿಯ ಕಾರ್ಯಕರ್ತ ಪ್ರವೀಣ್ ಮಾನಿಂಜ (48) ಮಂಗಳೂರಿನ ವೆನ್ಲಕ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾದರು. ಮೃತರು ಮಂಜೇಶ್ವರದಲ್ಲಿ ಬಿಜೆಪಿ ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದು, ಪಕ್ಷವನ್ನು ವಾರ್ಡ್ ಹಾಗೂ ಬೂತ್ ಮಟ್ಟದಲ್ಲಿ ಬೆಳೆಸಲು ಶ್ರಮ ವಹಿಸಿದ್ದರು. ಅಲ್ಲದೇ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರಾಗಿದ್ದರು. ಕುಂಜತ್ತೂರಿನಲ್ಲಿರುವ 'ಮಂಜೇಶ್ವರ ಕ್ಷೀರೋತ್ಪಾದಕ ಸಂಘ'ದ ಮಾಜಿ ಉಪಾಧ್ಯಕ್ಷರಾಗಿದ್ದು, ಉದ್ಯಾವರ ಗಾಂಧಿ ನಂತರದಲ್ಲಿರುವ ನೇತಾಜಿ ಫ್ರೆಂಡ್ಸ್ ಸರ್ಕಲ್ ನ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ತಾಯಿ, ಪತ್ನಿ: ಪುಷ್ಪ, ಸಹೋದರ - ಸಹೋದರಿಯರಾದ ನಳಿನಾಕ್ಷಿ, ಲತಾ, ಭವಾನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಸಹೋದರ ದೇವದಾಸ್ ಮಾಣಿಂಜ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯ ಕ್ರಿಯೆ ಇಂದು ಅಪರಾಹ್ನ 12.30 ಕ್ಕೆ ಮನೆ ಪರಿಸರದಲ್ಲಿ ನಡೆಯಲಿದೆ. ಮೃತರ ನಿಧನಕ್ಕೆ ಬಿಜೆಪಿ ಉದ್ಯಾವರ ಗುತ್ತು ವಾರ್ಡ್ ಹಾಗೂ ಬೂತ್ ಸಮಿತಿ, ನೇತಾಜಿ ಫ್ರೆಂಡ್ಸ್ ಸರ್ಕಲ್ (ರಿ.) ಗಾಂಧಿನಗರ ಗಾಢವಾದ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.