Breaking Posts

6/trending/recent
Type Here to Get Search Results !

8:10:45

ಕುಳೂರು ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.

ಕುಳೂರು ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.
ಮಂಜೇಶ್ವರ: ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಭಾರತದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಆಚರಣೆ ನಡೆಯಿತು.
ಆ ಪ್ರಯುಕ್ತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ಸೇವನಾ ವಾರಾಚರಣೆಯ ಭಾಗವಾಗಿ ಶಾಲಾ ಪರಿಸರ ಶುಚೀಕರಣ ನಡೆಸಲಾಯಿತು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸೌಮ್ಯ ಪಿ, ಶಾಲಾ ಶಿಕ್ಷಕರಾದ ಜಯಪ್ರಶಾಂತ್ ಪಾಲೆಂಗ್ರಿ, ಅಶ್ವಿನಿ ಎಂ, ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಹಾಗೂ ಕಟ್ಟಡ ಸಮಿತಿಯ ಕಾರ್ಯದರ್ಶಿ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ ಉಪಸ್ಥಿತರಿದ್ದರು.
ವರ್ಕಾಡಿ: ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿ ಆಚರಿಸಲಾಯ್ತು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ.ಫ್ರಾನ್ಸಿಸ್ ಡಿ' ಸೋಜರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸೋಮಪ್ಪ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಸಭೆಯಲ್ಲಿ ನೇತಾರರಾದ ಮೊಹಮ್ಮದ್ ಮಜಾಲ್, ಬಿ.ಕೆ. ಮುಹಮ್ಮುದ್, ರಝಾಕ್ ಹಾಜಿ, ಮುಹಮ್ಮದ್ ಕೊನಿಲ, ಮೂಸಾ. ಟಿ, ಅಬ್ದುಲ್ ರಹಿಮಾನ್ ಕೋಳ್ಯೂರು ಮುಂತಾದವರು ಉಪಸ್ಥಿತರಿದ್ದರು. A.I.Y.F ವತಿಯಿಂದ ದುರ್ಗಿಪಳ್ಳ ಅಂಗನವಾಡಿ ಕೇಂದ್ರದಲ್ಲಿ ಶುಚೀಕರಣ.
ಮಂಜೇಶ್ವರ: ಗಾಂಧಿ ಜಯಂತಿಯ ಪ್ರಯುಕ್ತ AIYF ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ದುರ್ಗಿಪ್ಪಳ್ಳ ಅಂಗನವಾಡಿ ಕೇಂದ್ರದಲ್ಲಿ ಶುಚೀಕರಣ ಶ್ರಮದಾನ ನಡೆಯಿತು.
AIYF ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಅಜಿತ್ ಎಂ.ಸಿ ಲಾಲ್ಬಾಗ್, ಮಂಜೇಶ್ವರ ಮಂಡಲ ಅಧ್ಯಕ್ಷ ಶರತ್ ಬೆಜ್ಜ , ಕಾರ್ಯದರ್ಶಿ ದಯಾಕರ ಮಾಡ, ಮಂಡಲ ಸಮಿತಿ ಸದಸ್ಯರು ಹಾಗು ವಿವಿಧ ಯೂನಿಟ್ ಗಳ ಸದಸ್ಯರು ಉಪಸ್ಥಿತರಿದ್ದರು. ಹೊಸಂಗಡಿ ಬಿ.ಯಂ. ರಾಮಯ್ಯ ಶೆಟ್ಟಿ ಗ್ರಂಥಾಲಯದಲ್ಲಿ ಗಾಂಧಿ ಜಯಂತಿ ದಿನಾಚರಣೆ.
ಮಂಜೇಶ್ವರ: ಹೊಸಂಗಡಿಯಲ್ಲಿರುವ ಬಿ.ಯಂ. ರಾಮಯ್ಯ ಶೆಟ್ಟಿ ಗ್ರಂಥಾಲಯದಲ್ಲಿ ಗಾಂಧಿ ಜಯಂತಿ ದಿನಾಚರಣೆ ಯನ್ನು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನಗೈಯ್ಯುವ ಮೂಲಕ ಆಚರಿಸಲಾಯಿತು. ಗ್ರಂಥಾಲಯದ ಉಪಾಧ್ಯಕ್ಷರಾದ ಕೆ. ಕೃಷ್ಣ ಶೆಟ್ಟಿಗಾರ್ ಪುಷ್ಪಾರ್ಚನೆ ಮಾಡಿದರು.
ಅಧ್ಯಕ್ಷರಾದ ಶ್ರೀ ಪ್ರಭಾಕರ ಶೆಟ್ಟಿಯವರು ಶುಚಿತ್ವದ ಬಗ್ಗೆ ಪ್ರತಿಜ್ಞೆ ಮಾಡಿಸಿದರು.
ನಂತರ ಲೈಬ್ರರಿಯ ಪರಿಸರವನ್ನ ಶುಚಿತ್ವಗೊಳಿಸಲಾಯಿತು. ಈ ವೇಳೆ ಲೈಬ್ರರಿ ಕಾರ್ಯದರ್ಶಿ ಗಂಗಾಧರ್ ದುರ್ಗಿಪಳ್ಳ, ಬಿ.ಯಂ. ಕರುಣಾಕರ ಶೆಟ್ಟಿ, ಬಿನೇಶ್ ಮಾಸ್ಟರ್, ಆಸಿರ್ ಎಂ.ಕೆ. ಲೋಹಿತ್ ಕುಮಾರ್, ಶ್ರೀಮತಿ ತುಳಸಿ, ಪ್ರಸಾದ್ ಕುಮಾರ್, ರಜನಿಕಾಂತ್, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಮಕ್ಕಳಿಗೆ ಸಿಹಿತಿಂಡಿ ಹಂಚಲಾಯಿತು. ಗಂಗಾಧರ್ ದುರ್ಗಿಪಳ್ಳ ಸ್ವಾಗತಿಸಿ, ಲೈಬ್ರರಿಯನ್ ಶ್ರೀಮತಿ ಪವಿತ್ರ ಪ್ರಸಾದ್ ಧನ್ಯವಾದವಿತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.