ಮಂಜೇಶ್ವರ ಗ್ರಾಮ ಪಂಚಾಯತ್ ಕೃಷಿ ಭವನ, ತೆಂಗು ಕೃಷಿ ಕೇರಾ ಅಭಿವೃದ್ಧಿ ಗ್ರಾಮ ಸಮಿತಿ, ಮಂಜೇಶ್ವರ ಕೊಕೊನೆಟ್ ಫ್ಲವರ್ ಮಿಲ್ ಸಹಕಾರದೊಂದಿಗೆ, ಬಿ.ಎಂ ಮಚ್ಚೇಂದ್ರ ಕೊಪ್ಪಳ ರವರ ನೇತೃತ್ವದಲ್ಲಿ ಕನಿಲ ಶ್ರೀ ಭಗವತೀ ಭಂಡಾರ ನಿಲಯದ ಮುಂಭಾಗದಲ್ಲಿ "ಕೊಪ್ಪರ ಸಂಸ್ಕರಣ ಘಟಕದ ಉದ್ಘಾಟನೆ."
ಅಕ್ಟೋಬರ್ 30, 2023
0
ಮಂಜೇಶ್ವರ ಗ್ರಾಮ ಪಂಚಾಯತ್ ಕೃಷಿ ಭವನ, ತೆಂಗು ಕೃಷಿ ಕೇರಾ ಅಭಿವೃದ್ಧಿ ಗ್ರಾಮ ಸಮಿತಿ, ಮಂಜೇಶ್ವರ ಕೊಕೊನೆಟ್ ಫ್ಲವರ್ ಮಿಲ್ ಸಹಕಾರದೊಂದಿಗೆ, ಬಿ.ಎಂ ಮಚ್ಚೇಂದ್ರ ಕೊಪ್ಪಳ ರವರ ನೇತೃತ್ವದಲ್ಲಿ ಕನಿಲ ಶ್ರೀ ಭಗವತೀ ಭಂಡಾರ ನಿಲಯದ ಮುಂಭಾಗದಲ್ಲಿ "ಕೊಪ್ಪರ ಸಂಸ್ಕರಣ ಘಟಕದ ಉದ್ಘಾಟನೆ."
ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ಕೃಷಿ ಭವನ, ತೆಂಗು ಕೃಷಿ ಕೇರಾ ಅಭಿವೃದ್ಧಿ ಗ್ರಾಮ ಸಮಿತಿ, ಮಂಜೇಶ್ವರ ಕೊಕೊನೆಟ್ ಫ್ಲವರ್ ಮಿಲ್ ಸಹಕಾರದೊಂದಿಗೆ, ಬಿ.ಎಂ ಮಚ್ಚೇಂದ್ರ ಕೊಪ್ಪಳ ರವರ ನೇತೃತ್ವದಲ್ಲಿ ಕೊಪ್ಪರ ಸಂಸ್ಕರಣ ಘಟಕದ ಉದ್ಘಾಟನೆ ಇಂದು ಬೆಳಗ್ಗೆ ಬಂಗ್ರಮಂಜೇಶ್ವರ ಶ್ರೀ ಭಗವತೀ ಭಂಡಾರ ನಿಲಯದ ಮುಂಭಾಗದಲ್ಲಿ ನಡೆಯಿತು. ಮಂಜೇಶ್ವರ ಶಾಸಕರಾಗಿರುವ ಎ.ಕೆ.ಎಂ ಅಶ್ರಫ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಕೊಪ್ಪರ ನಿರ್ಮಾಣದ ಯಂತ್ರದ ಸ್ವಿಚ್ ಆನ್ ಮಾಡಿ ಚಾಲನೆಗೈದು ಬಳಿಕ ನಡೆದ ಸಮಾರಂಭದಲ್ಲಿ ಉದ್ಘಾಟನಾ ಭಾಷಣವನ್ನು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜೀನ್ ಲವಿನಾ ಮೊಂತೆರೋ ವಹಿಸಿದರು. ಮಂಜೇಶ್ವರ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ಅರ್ಜಿತ ಪಿ.ವಿ ಯೋಜನೆಯ ವಿವರವನ್ನು ವಿವರಿಸಿದರು. ಈ ವೇಳೆ ಮಂಜೇಶ್ವರ ಗ್ರಾಮ ಪಂಚಾಯತ್ ಕ್ಷೇಮ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಬಿ.ವಿ ರಾಜನ್, ಕನಿಲ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ಕುದುರು, ಕೇರ ಗ್ರಾಮ ಸಮಿತಿ ಅಧ್ಯಕ್ಷ ಪಿ.ಎಚ್ ಅಬ್ದುಲ್ ಹಮೀದ್, ಕಾರ್ಯದರ್ಶಿ ಎಸ್. ರಾಮಚಂದ್ರ, ಕೇರ ಗ್ರಾಮ ಸಮಿತಿ ಸದಸ್ಯ ಬಿ.ಎಂ ಮಚ್ಚೆಂದ್ರ ಕೊಪ್ಪಳ, ಕುಟುಂಬ ಶ್ರೀ ಅಧ್ಯಕ್ಷೆ ಶ್ರೀಮತಿ ಜಯಶ್ರೀ, ಎ.ಡಿ.ಸಿ ಸದಸ್ಯ ಗಂಗಾಧರ ದುರ್ಗಿಪಳ್ಳ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ಆದರ್ಶ್ ಬಿ.ಎಂ, ಲಕ್ಷ್ಮಣ ಕುಚ್ಚಿಕ್ಕಾಡ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾಸಂಷಣೆಗೈದರು. ಮಂಜೇಶ್ವರ ಸಹಾಯಕ ಕೃಷಿ ಅಧಿಕಾರಿ ಎ.ವಿ ರಾಧಾಕೃಷ್ಣನ್ ಸ್ವಾಗತಿಸಿ, ಪಾಡ ಶೇಕರ ಸಮಿತಿ ನೇತಾರ ಯತೀಶ ಕಾಜೂರು ವಂದಿಸಿದರು. ಈ ವೇಳೆ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೆರೋರವರು ತೆಂಗಿನ ಎಣ್ಣೆಯನ್ನು ಕನಿಲ ಶ್ರೀ ಭಗವತೀ ಕ್ಷೇತ್ರದ ಮಾಜಿ ಅಧ್ಯಕ್ಷರಾದ ಕೆ. ನಾರಾಯಣ ಕನಿಲರವರಿಗೆ ನೀಡುವ ಮೂಲಕ ಮೊದಲ ಮಾರಾಟಕ್ಕೆ ಚಾಲನೆ ನೀಡಿದರು. ನೂತನವಾಗಿ ನಿರ್ಮಾಣಗೊಂಡ ಕೊಪ್ಪರ ಸಂರಕ್ಷಣಾ ಘಟಕದಲ್ಲಿ ಗ್ರಾಹಕರು ಹಾಗೂ ಕೃಷಿಕರು ಕೊಬ್ಬರಿಯನ್ನು ತಂದು ಕೊಟ್ಟರೆ ಕೊಬ್ಬರಿ ಎಣ್ಣೆ ಮಾಡಿಕೊಡಲಾಗುವುದು. ಅಲ್ಲದೇ ಮೆಣಸಿನ ಹುಡಿ, ಕೊತ್ತಂಬರಿ ಹುಡಿ, ಗೋಧಿಹುಡಿ ಅರಸಿನ ಹುಡಿಯನ್ನು ಮಿತ ದರದಲ್ಲಿ ಮಾಡಿ ಕೊಡಲಾಗುವುದು ಎಂದು ಕೊಬ್ಬರಿ ನಿರ್ಮಾಣ ಘಟಕದ ನಿರ್ಮಾಣ ಕರ್ತೃ ಮಚ್ಚೇಂದ್ರ ಕೊಪ್ಪಳ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 9895542415 ಸಂಪರ್ಕಿಸಬಹುದಾಗಿದೆ.

















