ಕೇರಳ ರಾಜಾದ್ಯಂತ ಇಂದು ನಡೆದ ಖಾಸಗಿ ಬಸ್ ಸಂಚಾರ ಮುಷ್ಕರ. ಮಂಜೇಶ್ವರ ತಾಲೂಕಿನಲ್ಲಿ ಯಶಸ್ವಿ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ಕೇರಳ - ಕರ್ನಾಟಕ ಸಾರಿಗೆ. ಒಳಪ್ರದೇಶಗಳಿಗೆ ರಿಕ್ಷಾ ಸೇರಿದಂತೆ ಖಾಸಗಿ ವಾಹನಗಳಲ್ಲಿ ಸಂಚರಿಸಿದ ನಿತ್ಯ ಪ್ರಯಾಣಿಕರು.
ಅಕ್ಟೋಬರ್ 31, 2023
0
ಕೇರಳ ರಾಜಾದ್ಯಂತ ಇಂದು ನಡೆದ ಖಾಸಗಿ ಬಸ್ ಸಂಚಾರ ಮುಷ್ಕರ. ಮಂಜೇಶ್ವರ ತಾಲೂಕಿನಲ್ಲಿ ಯಶಸ್ವಿ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ಕೇರಳ - ಕರ್ನಾಟಕ ಸಾರಿಗೆ. ಒಳಪ್ರದೇಶಗಳಿಗೆ ರಿಕ್ಷಾ ಸೇರಿದಂತೆ ಖಾಸಗಿ ವಾಹನಗಳಲ್ಲಿ ಸಂಚರಿಸಿದ ನಿತ್ಯ ಪ್ರಯಾಣಿಕರು.
ಮಂಜೇಶ್ವರ: ವಿದ್ಯಾರ್ಥಿಗಳ ಪ್ರಯಾಣದರ ಹೆಚ್ಚಿಸಬೇಕು, ಬಸ್ಸುಗಳಲ್ಲಿ ಕ್ಯಾಮರಾ, ಸೀಟ್ ಬೆಲ್ಟ್ ಹೊರತುಪಡಿಸಬೇಕು, 140 ಕಿ. ಮೀ ಎಂಬ ದೂರಮಿತಿ ನೋಡದೆ ಎಲ್ಲಾ ಬಸ್ಸುಗಳ ಪರಾವಾನಿಗೆ ನವೀಕರಿಸಿ ನೀಡಬೇಕು ಮೊದಲಾದ ಬೇಡಿಕೆಯನ್ನು ಮುಂದಿಟ್ಟುಕೊಂಡು ಇಂದು ಕೇರಳ ರಾಜ್ಯಾದ್ಯಂತ ಖಾಸಗಿ ಬಸ್ ಮುಷ್ಕರ ನಡೆಯುತ್ತಿದ್ದು, ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿ ಬಸ್ ಮುಷ್ಕರ ಯಶಸ್ವಿಗೊಂಡಿದೆ ಎಂದು ಬಸ್ ಮಾಲಕರ ಸಂಘದ ಅಧ್ಯಕ್ಷರಾದ ತಿಮ್ಮಪ್ಪ ಭಟ್ ಅರಂತಾಡಿ ನಮ್ಮ ಮಂಜೇಶ್ವರ ನ್ಯೂಸ್ ಚಾನಲ್ ಗೆ ತಿಳಿಸಿದ್ದಾರೆ. ಮಂಜೇಶ್ವರ ತಾಲೂಕಿಗೆ ಒಳಪಟ್ಟ ತಲಪಾಡಿ - ಹೊಸಂಗಡಿ, ಮೀಯಪದವು, ಆನೆಕಲ್ಲು, ಬಾಕ್ರಬೈಲು ರೂಟ್, ಕಾಸರಗೋಡು - ತಲಪಾಡಿ ರೂಟ್, ಉಪ್ಪಳ - ಬಾಯಾರು ರೂಟ್, ಬಂಡಿಯೋಡು - ಧರ್ಮತಡ್ಕ ರೂಟ್ ಗಳಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಬಸ್ಸುಗಳು ಇಂದು ಸಂಚಾರ ಮೊಟಕುಗೊಳಿಸಿ, ಮುಷ್ಕರದಲ್ಲಿ ಪಾಲ್ಗೊಂಡವು. ಇದರಿಂದ ನಿತ್ಯ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಕಷ್ಟಪಟ್ಟರು. ಈ ವೇಳೆ ರಿಕ್ಷಾ ಸಂಚಾರ ನಡೆಸಿದುದರಿಂದ ಪ್ರಯಾಣಿಕರಿಗೆ ಅಲ್ಪ ನೆಮ್ಮದಿ ಉಂಟಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳ - ಕರ್ನಾಟಕ ಸಾರಿಗೆಯ ಬಸ್ ಗಳು ಎಂದಿನಂತೆ ಸಂಚಾರ ನಡೆಸಿದ ಕಾರಣ ಹೆದ್ದಾರಿಯಲ್ಲಿ ತೆರಳುವ ಪ್ರಯಾಣಿಕರಿಗೆ ಸಂಚಾರದಲ್ಲಿ ತೊಡಕುಂಟಾಗಳಿಲ್ಲ. ಕಳೆದ ಜೂನ್ 5 ರಂದು ಫೆಡರೇಶನ್ ಅಧ್ಯಕ್ಷ ಕೆ.ಕೆ ತೋಮಸ್ ರ ಉಪವಾಸ ಮುಷ್ಕರಕ್ಕೆ ಸಂಬಂಧಿಸಿ ನಡೆದ ಚರ್ಚೆಯಲ್ಲಿ ಸಾರಿಗೆ ಸಚಿವ ನೀಡಿದ ಭರವಸೆಯನ್ನು ಜ್ಯಾರಿಗೊಳಿಸದೇ ಏಕಪಕ್ಷೀಯವಾಗಿ ಬಡವರಿಗೆ ಉಚಿತ ಪ್ರಯಾಣ ಘೋಷಿಸಿದ ಸಾರಿಗೆ ಸಚಿವರ ಕ್ರಮದ ವಿರುದ್ಧ ಕೇರಳ ರಾಜ್ಯ ವ್ಯಾಪಕವಾಗಿ ಬಸ್ ಸಂಚಾರ ಮೊಟಕುಗೊಳಿಸಿ ಸೂಚನಾ ಮುಷ್ಕರ ನಡೆಸಲು ಬಸುಮಾಲಕರ ಸಂಘ ತೀರ್ಮಾನಿಸಿತ್ತು. ಜಂಟಿ ಮುಷ್ಕರ ಸಮಿತಿ ಮುಂದಿಟ್ಟ ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ನವೆಂಬರ್ 21ರಿಂದ ಅನಿರ್ದಿಷ್ಟ ಕಾಲಕ್ಕೆ ಬಸ್ ಸಂಚಾರ ನಿಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.



